ಮೈಸೂರು ಮೃಗಾಲಯ ಸೇರಿದಂತೆ ರಾಜ್ಯದ 9  ಮೃಗಾಲಯ ನಿರ್ವಹಣೆ ನೆರವಿಗೆ ಸರ್ಕಾರಕ್ಕೆ ಮನವಿ
ಮೈಸೂರು

ಮೈಸೂರು ಮೃಗಾಲಯ ಸೇರಿದಂತೆ ರಾಜ್ಯದ 9 ಮೃಗಾಲಯ ನಿರ್ವಹಣೆ ನೆರವಿಗೆ ಸರ್ಕಾರಕ್ಕೆ ಮನವಿ

April 29, 2021

ಮೈಸೂರು,ಏ.28(ಎಂಟಿವೈ)- ಕೊರೊನಾ ಹಾವಳಿಯಿಂದಾಗಿ ಕಳೆದ 1 ವರ್ಷದಿಂದ ಮೈಸೂರು ಮೃಗಾಲಯ ಸೇರಿದಂತೆ ರಾಜ್ಯದ 9 ಮೃಗಾಲಯಗಳು ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದು, ಪ್ರಸಕ್ತ ಸಾಲಿನಲ್ಲಿ ಪ್ರಾಣಿಗಳ ಪಾಲನೆ-ಆರೈಕೆಗಾಗಿ 17 ಕೋಟಿ ಅಗತ್ಯವಿದ್ದು, ಸರ್ಕಾರದ ಅನುದಾನದ ನಿರೀಕ್ಷೆಯಲ್ಲಿವೆ.

ಮೈಸೂರಿನ ಚಾಮರಾಜೇಂದ್ರ ಮೃಗಾ ಲಯ ಹಾಗೂ ಬೆಂಗಳೂರಿನ ಬನ್ನೇರು ಘಟ್ಟ ಜೈವಿಕ ಉದ್ಯಾನವನ ಸ್ವಾಯತ್ತ ಸಂಸ್ಥೆ ಯಾಗಿದ್ದು, ಇವುಗಳೊಂದಿಗೆ ಕರ್ನಾಟಕ ಮೃಗಾಲಯ ಪ್ರಾಧಿಕಾರ ರಾಜ್ಯದ ಇತರೆ ಜಿಲ್ಲೆಗಳಲ್ಲಿರುವ ಇನ್ನೂ 7 ಮೃಗಾಲಯ ಗಳನ್ನು ಪೋಷಿಸಬೇಕಾದ ಹೊಣೆಗಾರಿಕೆ ಯನ್ನು ನಿಭಾಯಿಸುತ್ತಾ ಬಂದಿದೆ. ಏಷ್ಯಾದ ಮುಂಚೂಣಿ ಮೃಗಾಲಯಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ಮೈಸೂರು ಮೃಗಾ ಲಯ ಹಾಗೂ ಬನ್ನೇರುಘಟ್ಟಕ್ಕೆ ಭೇಟಿ ನೀಡುವ ಪ್ರವಾಸಿಗರ ಪ್ರವೇಶ ಶುಲ್ಕದಿಂದ ಸಂಗ್ರಹವಾದ ಆದಾಯದಿಂದ ಇತರೆ ಮೃಗಾ ಲಯಗಳ ನಿರ್ವಹಣೆ ಮಾಡಲಾಗುತ್ತಿತ್ತು. ಸರ್ಕಾರದಿಂದ ಅನುದಾನ ಪಡೆಯದೇ ನಿರ್ವಹಣೆಯಾಗುತ್ತಿದ್ದ ಮೃಗಾಲಯಗಳಿಗೆ ಕೊರೊನಾ ಆಘಾತವನ್ನುಂಟು ಮಾಡಿದ್ದು, ಸಿಬ್ಬಂದಿ ವೇತನ ಮಾತ್ರವಲ್ಲದೆ ಪ್ರಾಣಿ-ಪಕ್ಷಿಗಳ ಆಹಾರ ಸರಬರಾಜಿಗೂ ಹಣದ ಕೊರತೆ ತಂದೊಡ್ಡಿದೆ. ಇದರಿಂದ 2020- 21ನೇ ಸಾಲಿನಲ್ಲಿ ಮೃಗಾಲಯ ಪ್ರಾಧಿಕಾರ ಮಂಡಿಸಲು ಉದ್ದೇಶಿಸಿರುವ ಅಂದಾಜು ಬಜೆಟ್ ಪಟ್ಟಿಯಲ್ಲಿ 60.79 ಕೋಟಿ ರೂ. ಕೊರತೆ ಉಂಟಾಗಿದೆ. ಇದು ಅಧಿಕಾರಿ ಗಳನ್ನು ಚಿಂತೆಗೀಡು ಮಾಡಿದೆ. ಇದರಿಂದ 9 ಮೃಗಾಲಯಗಳಲ್ಲಿ ಪ್ರಾಣಿಗಳಿಗೆ ಆಹಾರ ಹಾಗೂ ಸಿಬ್ಬಂದಿ ವೇತನ ನೀಡಲು ಕೊರತೆ ಯಾಗಿರುವ 17 ಕೋಟಿ ರೂ. ಆರ್ಥಿಕ ನೆರವು ನೀಡುವಂತೆ ಸರ್ಕಾರದ ಮೊರೆ ಹೋಗಲು ಮೃಗಾಲಯ ಪ್ರಾಧಿಕಾರ ನಿರ್ಧರಿಸಿದೆ.

ಕೋವಿಡ್ ಎರಡನೇ ಅಲೆಯ ತೀವ್ರತೆ ಹಾಗೂ ಕೋವಿಡ್ ಕಫ್ರ್ಯೂ ಜಾರಿಯಲ್ಲಿ ರುವ ಹಿನ್ನೆಲೆಯಲ್ಲಿ ವೆಬಿನಾರ್ ಮೂಲಕ ಬುಧವಾರ ಮೈಸೂರು ಮೃಗಾಲಯದ ಸಭಾಂಗಣದಲ್ಲಿ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹಾ ದೇವಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಕರ್ನಾ ಟಕ ಮೃಗಾಲಯ ಪ್ರಾಧಿಕಾರದ ಆಡಳಿತ ಮಂಡಳಿ ಸಭೆಯಲ್ಲಿ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಮಾತನಾಡಿ, ಕೊರೊನಾ ಹಾವಳಿಯಿಂದಾಗಿ ರಾಜ್ಯದ ಮೃಗಾಲಯಗಳಲ್ಲಿ ಆದಾಯ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. 2019-20ನೇ ಸಾಲಿನಲ್ಲಿ 66.58 ಕೋಟಿ ರೂ. ಆದಾಯ ಸಂಗ್ರಹವಾಗಿದ್ದರೆ, ಕೊರೊನಾ ಭಯ, ಲಾಕ್‍ಡೌನ್ ಪರಿಣಾಮ 2020-21ನೇ ಸಾಲಿನಲ್ಲಿ ಕೇವಲ 24.26 ಕೋಟಿ ಆದಾಯ ಸಂಗ್ರಹವಾಗಿದೆ. ಕಳೆದ ವರ್ಷ ಆದಾಯ ಸಂಗ್ರಹದಲ್ಲಿ ಭಾರೀ ಕುಂಠಿತವಾಗಿದೆ. ಪ್ರಸಕ್ತ 2021-22ನೇ ಸಾಲಿನಲ್ಲಿ ವಿವಿಧ ಮೃಗಾಲಯಗಳ ನಿರ್ದೇಶಕರು ಸಲ್ಲಿಸಿ ರುವ ಅಂದಾಜು ಬಜೆಟ್ ಪಟ್ಟಿಯಲ್ಲಿ ಎಲ್ಲಾ 9 ಮೃಗಾಲಯಗಳ ನಿರ್ವಹಣೆಗೆ 93.33 ಕೋಟಿ ರೂ. ಬೇಕಾಗಲಿದೆ. ಆದರೆ ಸಂಗ್ರಹವಾಗುವ ಅಂದಾಜು ಆದಾಯ 32.54 ಕೋಟಿ ರೂ. ಆಗಲಿದ್ದು, 60.79 ಕೋಟಿ ರೂ. ಕೊರತೆ ಉಂಟಾಗಲಿದೆ ಎಂದು ವಿವರಿಸಿದರು.
ಹಿರಿಯ ಅಧಿಕಾರಿಗಳು ಆನ್‍ಲೈನ್ ಮೂಲಕ ಪಾಲ್ಗೊಂಡಿದ್ದ ಸಭೆಯಲ್ಲಿ ಮೈಸೂರು ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕ ಅಜಿತ್ ಎಂ. ಕುಲಕರ್ಣಿ ಮೈಸೂರು ಮೃಗಾಲಯಲ್ಲಿ ಈಗ ಕೈಗೊಂಡಿರುವ, ಮುಂದಿನ ವರ್ಷ ಗಳಲ್ಲಿ ಕೈಗೊಳ್ಳ ಬೇಕಾದ ಕ್ರಮಗಳ ಕುರಿತು ವಿವರಣೆ ನೀಡಿದರು. ಸಭೆಯಲ್ಲಿ ರಾಜ್ಯದ ಎಲ್ಲಾ ಮೃಗಾಲಯಗಳ ಅಧಿಕಾರಿಗಳು ಪಾಲ್ಗೊಂಡಿದ್ದರು. ಮೃಗಾಲಯ ಪ್ರಾಧಿ ಕಾರದ ಸದಸ್ಯ ಗೋಕುಲ್ ಗೋವರ್ಧನ್ ಸಹ ಉಪಸ್ಥಿತರಿದ್ದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಮೃಗಾ ಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್. ಮಹಾದೇವಸ್ವಾಮಿ ಮಾತನಾಡಿ, ಕೋವಿಡ್ ನಿಂದಾಗಿ ಮೃಗಾಲಯಗಳಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಮೊದಲ ಹಂತದ ಕೊರೊನಾ ಸೃಷ್ಟಿಸಿರುವ ಆತಂಕದಿಂದ ಜನತೆ ಇನ್ನು ಹೊರಗೆ ಬಂದಿಲ್ಲ. ಆಗಲೇ ಎರಡನೇ ಅಲೆಯ ತೀವ್ರತೆ ಹೆಚ್ಚಾಗಿದೆ. ಇದರಿಂದ ಈ ವರ್ಷವೂ ಮೃಗಾಲಯಗಳಿಗೆ ನಿರೀ ಕ್ಷಿತ ಆದಾಯದಲ್ಲಿ ಭಾರೀ ಕೊರತೆಯಾಗ ಲಿರುವುದು ಅಧಿಕಾರಿಗಳು ಸಲ್ಲಿಸಿರುವ ಅಂದಾಜು ಬಜೆಟ್ ಪಟ್ಟಿಯಲ್ಲಿ ವ್ಯಕ್ತವಾ ಗಿದೆ. ಮೃಗಾಲಯಗಳಲ್ಲಿನ ಪ್ರಾಣಿ-ಪಕ್ಷಿ ಗಳಿಗೆ ಆಹಾರ ಸರಬರಾಜು, ಸಿಬ್ಬಂದಿ ವೇತ ನಕ್ಕೆ 17 ಕೋಟಿ ಸೇರಿದಂತೆ ಅಭಿವೃದ್ಧಿಗೆ 30 ಕೋಟಿ ರೂ. ನೀಡುವಂತೆ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಳಿ ಮನವಿ ಮಾಡುತ್ತೇನೆ. ಹಲವು ವರ್ಷಗಳ ಬಳಿಕ ಈಗ ಸರ್ಕಾರದಿಂದ 8 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಸರ್ಕಾರ ಮೃಗಾಲಯಗಳ ಪುನಶ್ಚೇತನಕ್ಕೆ ನೆರವು ನೀಡಲಿದೆ. ಮೃಗಾಲಯಗಳಲ್ಲಿನ ಪ್ರಾಣಿ-ಪಕ್ಷಿ ಸಂಕುಲದ ರಕ್ಷಣೆ ಹಾಗೂ ಸಿಬ್ಬಂದಿ ಹಿತ ಕಾಯಲು ಮುಖ್ಯಮಂತ್ರಿಗಳು ಬದ್ಧ ರಾಗಿದ್ದಾರೆ. ಈ ನಿಟ್ಟಿನಲ್ಲಿ ಕೊರತೆ ಉಂಟಾ ಗಿರುವ ಮೊತ್ತವನ್ನು ಸರ್ಕಾರದಿಂದ ನಿರೀ ಕ್ಷಿಸಲಾಗಿದೆ. ಇದರೊಂದಿಗೆ ಸಾರ್ವಜನಿ ಕರ ಸಹಭಾಗಿತ್ವ ಪಡೆಯಲು ಕ್ರಮ ಕೈಗೊಳ್ಳ ಬೇಕಾಗಿದೆ. ಈಗಾಗಲೇ ಸಹೃದಯಿ ಪ್ರಾಣಿ ಪ್ರಿಯರು ಮೃಗಾಲಯಗಳಲ್ಲಿರುವ ಪ್ರಾಣಿ- ಪಕ್ಷಿ ದತ್ತು ಪಡೆಯುವ ಮೂಲಕ ನೆರವು ನೀಡುತ್ತಿದ್ದಾರೆ. ಅನಿವಾಸಿ ಭಾರತೀಯರು, ರಾಜ್ಯದಲ್ಲಿರುವ ಉದ್ಯಮಿಗಳು, ಸಾರ್ವಜ ನಿಕರು ಪ್ರಾಣಿ ದತ್ತು ಯೋಜನೆಗೆ ಪ್ರೋತ್ಸಾಹ ನೀಡುವ ಮೂಲಕ ಮೃಗಾಲಯಗಳ ಉಳಿ ವಿಗೆ ಸಹಕಾರ ಕೋರಬೇಕು. ಮೈಸೂರಿನ ಜನತೆಯಲ್ಲಿ ನಾನು ವೈಯಕ್ತಿಕವಾಗಿ ಮನವಿ ಸಲ್ಲಿಸಿ ಮೃಗಾಲಯಕ್ಕೆ ನೆರವು ನೀಡುವಂತೆ ಕೋರುತ್ತೇನೆ ಎಂದರು.

Translate »