ಕುಟ್ಟ ಬಳಿ 9 ಮೇಕೆ ಕೊಂದು ಭಯ ಹುಟ್ಟಿಸಿದ್ದ ಹುಲಿ ಸೆರೆ
ಕೊಡಗು

ಕುಟ್ಟ ಬಳಿ 9 ಮೇಕೆ ಕೊಂದು ಭಯ ಹುಟ್ಟಿಸಿದ್ದ ಹುಲಿ ಸೆರೆ

December 17, 2021

ಗೋಣಿಕೊಪ್ಪ, ಡಿ.16(ಎಂಟಿವೈ/ದರ್ಶನ್)- ಪೊನ್ನಂಪೇಟೆ ತಾಲೂಕಿನ ಕಾಡಂಚಿನ ಗ್ರಾಮವಾದ ಕುಟ್ಟ-ಬಾಡಗ ಗ್ರಾಮದಲ್ಲಿ 9 ಮೇಕೆ ಕೊಂದು ಕಳೆದ ಎರಡು ದಿನಗಳಿಂದ ಆತಂಕ ಮೂಡಿಸಿದ್ದ 10 ವರ್ಷದ ಹೆಣ್ಣು ಹುಲಿಯನ್ನು ಅರಣ್ಯ ಸಿಬ್ಬಂದಿ ಸುರಕ್ಷಿತವಾಗಿ ಸೆರೆ ಹಿಡಿದಿದ್ದು, ಮೈಸೂರಿನ ಕೂರ್ಗಳ್ಳಿಯಲ್ಲಿರುವ ಮೃಗಾ ಲಯದ ಪುನರ್ವಸತಿ ಕೇಂದ್ರಕ್ಕೆ ತಂದು ಆರೈಕೆ ಮಾಡಲಾಗುತ್ತಿದೆ.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ದಲ್ಲಿ ಎನ್.ಹೆಚ್.47 ಸಂಖ್ಯೆಯ ಹೆಣ್ಣು ಹುಲಿಯೇ ಸೆರೆ ಸಿಕ್ಕಿದ್ದು, ಹಲ್ಲುಗಳು ಸವೆದಿ ರುವುದರಿಂದ ಹಾಗೂ ಹಿಂಭಾಗದ ತೊಡೆ ಸೆಳೆತಕ್ಕೆ ಒಳಗಾಗಿದ್ದರಿಂದ ಈ ಹುಲಿಗೆ ಬೇಟೆಯಾಡಲು ಸಾಧ್ಯವಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಕಾಡಂಚಿನ ಗ್ರಾಮ ವಾದ ಕುಟ್ಟ, ಬಾಡಗ ಬಳಿ ಕಳೆದ ಎರಡು ದಿನಗಳ ಹಿಂದೆ ಕಾಣಿಸಿಕೊಂಡಿತ್ತು. ಹೊಲದಲ್ಲಿ ಮೇಯುತ್ತಿದ್ದ 9 ಮೇಕೆ ಗಳನ್ನು ಕೊಂದು ಹಾಕಿತ್ತು.

ಹುಲಿ ತುಂಬು ಗರ್ಭಿಣಿಯಾಗಿರಬಹು ದೆಂದು ಶಂಕೆ ವ್ಯಕ್ತಪಡಿಸಿದ್ದ ಅರಣ್ಯ ಸಿಬ್ಬಂದಿ ಗಳು 2015ರಲ್ಲಿ ನಡೆದ ಕ್ಯಾಮರಾ ಟ್ರ್ಯಾಪ್ ನಲ್ಲಿ ಸೆರೆ ಸಿಕ್ಕಿದ್ದ ಎನ್‍ಹೆಚ್.47 ಹುಲಿಯ ಚಿತ್ರ ಪರಿಶೀಲಿಸಿ ಅವಲೋಕಿಸಿದಾಗ, ಅದು ಗರ್ಭಿಣಿಯಲ್ಲ ಎಂದು ತಿಳಿದು ಬಂದಿತ್ತು. ನೆನ್ನೆ ಕೊಂದು ಹಾಕಿದ್ದ 9 ಮೇಕೆಯನ್ನು ಅರಣ್ಯ ಸಿಬ್ಬಂದಿಗಳ ಮುಂದೆಯೇ ಒಂದು ಮೇಕೆಯನ್ನು ತಿಂದಿತ್ತು. ರಾತ್ರಿ ಕಾಡಿಗೆ ಹೋಗಿರಬಹುದು ಎಂದು ನಂಬಿದ್ದ ಅರಣ್ಯ ಸಿಬ್ಬಂದಿಗೆ ಹುಲಿ ಶಾಕ್ ನೀಡಿತ್ತು. ಬುಧ ವಾರ ಮೇಕೆ ತಿಂದಿದ್ದ ಸ್ಥಳದಲ್ಲೇ ಮಲ ಗಿದ್ದ ಹುಲಿ, ಇಂದು ಬೆಳಿಗ್ಗೆ ಸಮೀಪ ದಲ್ಲೇ ಸತ್ತು ಬಿದ್ದಿದ್ದ ಮತ್ತೊಂದು ಮೇಕೆ ಯನ್ನು ತಿಂದು ಮತ್ತೆ ನಿದ್ರೆಗೆ ಜಾರಿತ್ತು.

ಹುಲಿ ಕಾಡಂಚಿನ ಗ್ರಾಮದಿಂದ ಅರ ಣ್ಯಕ್ಕೆ ಹಿಂದಿರುಗದೇ ಇರುವುದನ್ನು ಖಚಿತ ಪಡಿಸಿಕೊಂಡ ಅರಣ್ಯ ಸಿಬ್ಬಂದಿ ಇಂದು ಬೆಳಗ್ಗೆ ಅಭಿಮನ್ಯು ಹಾಗೂ ಭೀಮ ಆನೆ ಯೊಂದಿಗೆ ಸೆರೆ ಕಾರ್ಯಾಚರಣೆ ಆರಂ ಭಿಸಿತು. ಆದರೂ ಹುಲಿ ಮಲಗಿದ್ದಲ್ಲಿಯೇ ಮಲಗಿತ್ತು. ಅಲ್ಲದೆ ಆಗಾಗ ಸ್ಥಳ ಬದಲಿಸಿ ಮತ್ತೆ ಮಲಗುತ್ತಿತ್ತು. ಒಮ್ಮೊಮ್ಮೆ ಮೇಲೆದ್ದು ನೋಡಿ ಮಲಗುತ್ತಿತ್ತು. ಇದರಿಂದ ಅರಣ್ಯ ಸಿಬ್ಬಂದಿಗೆ ಹುಲಿ ಬಗ್ಗೆ ಅನುಮಾನ ಮೂಡಿತ್ತು. ಅಭಿಮನ್ಯುವನ್ನು ಮಾವುತ ವಸಂತ ಹುಲಿ ಬಳಿ ಕರೆದೊಯ್ಯುವ ಪ್ರಯತ್ನ ಮಾಡಿ ದರು. ಆದರೆ ಆ ಸ್ಥಳದಲ್ಲಿ ತೇವಾಂಶ ಹೆಚ್ಚಾಗಿದ್ದರಿಂದ ಅಭಿಮನ್ಯುವಿನ ಪಾದ ಹೂತುಕೊಳ್ಳುತ್ತಿತ್ತು. ನಂತರ ಅಭಿಮನ್ಯು ವನ್ನು ಹಿಂದೆ ಕಳುಹಿಸಿ ಭೀಮನನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಯಿತು.

ಆನೆ ಮೇಲಿದ್ದ ಪಶುವೈದ್ಯ ಡಾ.ರಮೇಶ ಮಧ್ಯಾಹ್ನ 3.32ರಲ್ಲಿ ಹುಲಿಗೆ ಡಾಟ್ (ಅರವಳಿಕೆ) ಮಾಡಿದರು. ಅಲ್ಲಿಂದ ಮೇಲೆದ್ದ ಹುಲಿ ಸ್ವಲ್ಪ ದೂರ ಹೋಗಿ 3.43ಕ್ಕೆ ಪ್ರಜ್ಞೆ ತಪ್ಪಿತು. ಕೂಡಲೆ ಅರಣ್ಯ ಸಿಬ್ಬಂದಿ ತಂಡ ಹುಲಿಯನ್ನು ಬಲೆಗೆ ಹಾಕಿಕೊಂಡು ಸಮೀಪದ ರಸ್ತೆಯಲ್ಲೇ ಬೋನ್‍ನೊಂದಿಗೆ ನಿಂತಿದ್ದ ಲಾರಿಯತ್ತ ತಂದರು. ಬೋನ್‍ಗೆ ಹಾಕಿದ ನಂತರ ಹುಲಿಗೆ ಪ್ರಜ್ಞೆ ಮರಳಿ ಬರದಂತೆ ಇಂಜೆಕ್ಷನ್(ರಿವರ್ಸ್ ಡಾಟ್) ಕೊಡಲಾಯಿತು. ನಂತರ ಅದರ ಆರೋ ಗ್ಯದ ಬಗ್ಗೆ ಪರೀಕ್ಷಿಸಲು ರಕ್ತದ ಸ್ಯಾಂಪಲ್ ಸಂಗ್ರಹಿಸಲಾಯಿತು.

9 ಮೇಕೆ ಬಲಿ: ಬುಧವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಗ್ರಾಮಕ್ಕೆ ಹುಲಿ ದಾಳಿ ಇಟ್ಟಿದೆ. ಕಾಲನಿ ನಿವಾಸಿಗಳು ಕೆಲಸಕ್ಕೆ ತೆರಳಿ ದ್ದಾಗ ಮೇಯಲು ಕಟ್ಟಿಹಾಕಿದ್ದ ಮೇಕೆಗಳ ಮೇಲರಗಿದೆ. ಜಯರಾಮ್ ಎಂಬುವರಿಗೆ ಸೇರಿದ 7, ಅನಿತಾ ಅವರ 2 ಮೇಕೆಯನ್ನು ಕೊಂದು ಹಾಕಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿ ಹುಲಿಯನ್ನು ಹುಡು ಕಲು ಮುಂದಾಗಿದ್ದರು. ಆದರೆ ಹುಲಿ ಅರಣ್ಯ ಸಿಬ್ಬಂದಿಗಳಿಗೆ ಗೋಚರಿಸಿತು. ಪಶುವೈದ್ಯ ಡಾ.ರಮೇಶ್ ಮರದ ಮೇಲೆ ಕುಳಿತು ಹುಲಿಯ ಚಲನವಲನ ಗಮನಿಸಿ ದ್ದರು. ಈ ವೇಳೆ ಒಂದು ಮೇಕೆಯನ್ನು 30 ನಿಮಿಷದಲ್ಲಿ ತಿಂದಿತ್ತು. ಇಂದು ಬೆಳಿಗ್ಗೆ 7 ಗಂಟೆಯಲ್ಲೇ ಹುಲಿ ಸತ್ತುಬಿದ್ದ ಮೇಕೆಗ ಳಿದ್ದ ಸ್ಥಳದ ಸಮೀಪದಲ್ಲೇ ಇದ್ದದ್ದನ್ನು ಗಮನಿಸಿದ ಸೆರೆಹಿಡಿಯಲು ನಿರ್ಧರಿಸಿ, ಯಶಸ್ವಿಯಾಗಿ ಕಾರ್ಯಾಚರಣೆ ಮುಗಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ನಾಗರಹೊಳೆ ಹುಲಿ ಸಂರಕ್ಷಿ ಪ್ರದೇಶದ ನಿರ್ದೇಶಕ ಮಹೇಶ್‍ಕುಮಾರ್, ಎಸಿಎಫ್ ಗೋಪಾಲ್, ಆರ್‍ಎಫ್‍ಓ ಗಿರೀಶ್, ಪಶು ವೈದ್ಯರಾದ ಡಾ. ರಮೇಶ್, ಡಾ.ವಸಿಂ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Translate »