ಖಾಸಗೀಕರಣ ವಿರೋಧಿಸಿ ರಾಷ್ಟ್ರವ್ಯಾಪಿ ಬ್ಯಾಂಕ್ ನೌಕರರ ಮುಷ್ಕರ ಆರಂಭ
ಮೈಸೂರು

ಖಾಸಗೀಕರಣ ವಿರೋಧಿಸಿ ರಾಷ್ಟ್ರವ್ಯಾಪಿ ಬ್ಯಾಂಕ್ ನೌಕರರ ಮುಷ್ಕರ ಆರಂಭ

December 17, 2021

ಮೈಸೂರು, ಡಿ.16(ಆರ್‍ಕೆ)-ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳನ್ನು ಖಾಸಗೀಕರಣ ಮಾಡಲು ಮುಂದಾ ಗಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಬ್ಯಾಂಕ್ ನೌಕರರು ದೇಶದಾದ್ಯಂತ ಇಂದಿನಿಂದ ಎರಡು ದಿನಗಳ ಮುಷ್ಕರ ಆರಂಭಿಸಿದ್ದಾರೆ.

ಪರಿಣಾಮ ಇಂದು ಮತ್ತು ನಾಳೆ (ಡಿ. 17) ಎಲ್ಲಾ ಬ್ಯಾಂಕುಗಳಲ್ಲಿ ವಹಿವಾಟು ಸಂಪೂರ್ಣ ಸ್ಥಗಿತಗೊಂ ಡಿದ್ದು, ಗ್ರಾಹಕರಿಗೆ ತೊಂದರೆಯಾಗುತ್ತಿದೆ. ಯುನೈ ಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UಈಃU) ಕರೆ ನೀಡಿರುವ ಎರಡು ದಿನಗಳ ಮುಷ್ಕರ ದಿಂದಾಗಿ ದೇಶಾದ್ಯಂತ ಬ್ಯಾಂಕ್ ಅಧಿಕಾರಿಗಳು ಹಾಗೂ ನೌಕರರು ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ.

ಮೈಸೂರಿನ ಟಿ.ಕೆ. ಲೇಔಟ್‍ನಲ್ಲಿರುವ ಎಸ್‍ಬಿಐ ಪ್ರಾದೇಶಿಕ ಕಚೇರಿ ಬಳಿ ಜಮಾಯಿಸಿದ ಸುಮಾರು 1000 ಮಂದಿ ಬ್ಯಾಂಕ್ ನೌಕರರು, ಬ್ಯಾಂಕಿಂಗ್ ಕಾನೂನು ಗಳ (ತಿದ್ದುಪಡಿ) ಮಸೂದೆ-2021ನ್ನು ಸಂಸತ್‍ನಲ್ಲಿ ಅಂಗೀಕರಿಸಿ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಲು ಕೇಂದ್ರ ಸರ್ಕಾರವು ಪ್ರಯ ತ್ನಿಸುತ್ತಿದೆ ಎಂದು ಆರೋಪಿಸಿದರು.

ಕೃಷಿ, ಸಣ್ಣ, ಮಧ್ಯಮ ಕೈಗಾರಿಕೆ, ಉದ್ಯಮಗಳು, ಸಾರಿಗೆ ಕ್ಷೇತ್ರ ಹಾಗೂ ಸಮಾಜದ ಕೆಳವರ್ಗದವರ ಅಭಿವೃದ್ಧಿಯಲ್ಲಿ ರಾಷ್ಟ್ರೀಯ ಬ್ಯಾಂಕುಗಳ ಪಾತ್ರ ಪ್ರಮುಖವಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಳ ಯೋಜನೆಗಳ ಅನುಷ್ಠಾನದಲ್ಲೂ ಬ್ಯಾಂಕಿಂಗ್ ಕ್ಷೇತ್ರ ಸಹಕಾರಿಯಾಗಿದೆ ಎಂಬುದನ್ನು ಪರಿಗಣಿಸದೇ ಖಾಸಗೀಕರಣ ನೀತಿಗೆ ಮುಂದಾಗಿರುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಪ್ರತಿಭಟನಾ ನಿರತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಸರಿಯಾಗಿ ನಿರ್ವಹಣೆ ಮಾಡದೇ ಖಾಸಗಿ ಬ್ಯಾಂಕ್ ಗಳು ನಷ್ಟ ಅನುಭವಿಸಿವೆ. ಮತ್ತೆ ಕೆಲವು ವಹಿವಾಟು ಬಂದ್ ಮಾಡಿವೆ, ಆದರೆ ಸಾರ್ವಜನಿಕ ವಲಯದ ಬ್ಯಾಂಕುಗಳು ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸಿ ಲಾಭ ದಾಯಕವಾಗಿವೆ. ಇಷ್ಟೆಲ್ಲಾ ಸಾಮಥ್ರ್ಯವಿರುವ ರಾಷ್ಟ್ರೀ ಕೃತ ಬ್ಯಾಂಕ್‍ಗಳನ್ನು ಖಾಸಗೀಕರಣ ಮಾಡಿದಲ್ಲಿ ದೇಶದ ಅರ್ಥ ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮ ಬೀಳಲಿದೆ ಎಂದು ನೌಕರರು ತಿಳಿಸಿದರು.
ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಖಾಸಗೀಕರಣ ಪ್ರಕ್ರಿಯೆ ಸ್ಥಗಿತ ಗೊಳಿಸದಿದ್ದಲ್ಲಿ ದೇಶಾದ್ಯಂತ ತಾವು ಮುಷ್ಕರ ತೀವ್ರ ಗೊಳಿಸುವುದಾಗಿ ಎಚ್ಚರಿಕೆ ನೀಡಿದರು. ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ ಸಂಚಾಲಕ ಹೆಚ್.ಬಾಲಕೃಷ್ಣ, ಪದಾಧಿಕಾರಿಗಳಾದ ಶ್ರೀರಾಂ, ಮಹೇಶ್, ಅಂಜನ್‍ಕುಮಾರ್, ಸ್ನೇಹ, ಕುಮಾರ್ ಬಾಬು, ಸುರೇಶ್ ಹಲವರು ಪ್ರತಿಭಟನೆಯಲ್ಲಿದ್ದರು.

Translate »