ಶ್ರೀರಂಗಪಟ್ಟಣದಲ್ಲಿ ಹನುಮ ಮಾಲಾಧಾರಿಗಳಿಂದ ಅದ್ಧೂರಿ ಶೋಭಾಯಾತ್ರೆ
ಮಂಡ್ಯ

ಶ್ರೀರಂಗಪಟ್ಟಣದಲ್ಲಿ ಹನುಮ ಮಾಲಾಧಾರಿಗಳಿಂದ ಅದ್ಧೂರಿ ಶೋಭಾಯಾತ್ರೆ

December 17, 2021

ಶ್ರೀರಂಗಪಟ್ಟಣ, ಡಿ.16(ವಿನಯ್ ಕಾರೇಕುರ)- ಹನುಮ ಜಯಂತಿ ಅಂಗವಾಗಿ ಇಂದು ಪಟ್ಟಣದಲ್ಲಿ ಹನುಮಮಾಲೆ ಧರಿಸಿದ ಸಾವಿರಾರು ಮಾಲಾಧಾರಿಗಳು ಹನುಮ ಸಂಕೀರ್ತನಾ ಶೋಭಾಯಾತ್ರೆ ಹಮ್ಮಿಕೊಂಡಿದ್ದರು.

ಪಟ್ಟಣದ ಹೊರವಲಯದಲ್ಲಿರುವ ಗಂಜಾಂ ಶ್ರೀ ನಿಮಿಷಾಂಬ ದೇವಸ್ಥಾನ ಬಳಿಯ ಆಂಜನೇಯಸ್ವಾಮಿ ದೇವಾಲಯದಲ್ಲಿ ಬೆಳಗ್ಗೆ 10 ಗಂಟೆಗೆ ವೇದಬ್ರಹ್ಮ ಡಾ.ಭಾನುಪ್ರಕಾಶ್ ಶರ್ಮಾ ವಿಶೇಷ ಪೂಜೆ ಸಲ್ಲಿಸಿ ಆಂಜನೇಯಸ್ವಾಮಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಿದರು. ಈ ವೇಳೆ ಡಾ.ಭಾನುಪ್ರಕಾಶ್ ಶರ್ಮಾ ಮಾತನಾಡಿ, ಭಾರತದ ಸಂಸ್ಕøತಿ ಮತ್ತು ಪರಂಪರೆಯನ್ನು ಬಿಂಬಿಸಲು ಸಂಕೀರ್ತನಾ ಯಾತ್ರೆ, ಶೋಭಯಾತ್ರೆ, ಭಜನೆ ಇಂತಹ ಪೂಜಾ ಕೈಂಕರ್ಯಗಳು ಅವಶ್ಯ. ಇವು ಮಾನಸಿಕ ನೆಮ್ಮದಿಗೂ ಅನಿವಾರ್ಯ. ಧಾರ್ಮಿಕ ಆಚ ರಣೆಯಲ್ಲಿ ಪಾಲ್ಗೊಳ್ಳುವು ದರಿಂದ ನೆಮ್ಮದಿ ಜೀವನ ನಡೆಸಬಹುದು ಎಂದು ಹೇಳಿದರು.

ಮಾಲಾಧಾರಿಗಳು ಪಟ್ಟಣದ ಮೂಡಲ ಬಾಗಿಲು ಆಂಜ ನೇಯ ಸ್ವಾಮಿ ದೇವಾಲಯ ದವರೆಗೂ ಸುಮಾರು 6 ಕಿ.ಮೀ ಶೋಭಾ ಯಾತ್ರೆ ಕೈಗೊಂಡರು. ಗಂಜಾಂನ ಬೇಸಿಗೆ ಅರಮನೆ, ಆಸ್ಪತ್ರೆ, ಬೆಂಗಳೂರು-ಮೈಸೂರು ಹೆದ್ದಾರಿ ಹಾಗೂ ಪುರಾತನ ಕೋಟೆ ದ್ವಾರ ಮಾರ್ಗವಾಗಿ ಸಂಚರಿಸಿ ಮಧ್ಯಾಹ್ನ ಐತಿ ಹಾಸಿಕ ಮೂಡಲ ಬಾಗಿಲು ಆಂಜನೇಯ ಸ್ವಾಮಿ ದೇವಾಲಯ ತಲುಪಿತು. ಮೆರವಣಿ ಗೆಯ ಉದ್ದಕ್ಕೂ ಹಿಂದೂ ಹಾಗೂ ಹನುಮಾ ಮಾಲಾಧಾರಿ ಗಳು ಜೈ ಶ್ರೀರಾಮ್, ಜೈ ಹನುಮ ಘೋಷಣೆ ಕೂಗಿದರು. ಜೊತೆಗೆ ಹನುಮ ಚಾಲೀಸಾ ಪಠಿಸಿದರು. ಮೆರವಣಿಗೆಯಲ್ಲಿ ಡೊಳ್ಳುಕುಣಿತ, ನಗಾರಿ, ಗೊಂಬೆಕುಣಿತ, ತಮಟೆ ವಾದ್ಯಗಳೊಂದಿಗೆ ಹನುಮ ಭಕ್ತರು ದಾರಿಯುದ್ದಕ್ಕೂ ಭಜನೆ, ಕೀರ್ತನೆಗಳನ್ನು ಹಾಡಿದರು. ಪುಟ್ಟಮಕ್ಕಳು ಸೇರಿದಂತೆ ಹಿರಿ ಯರು ಯಾತ್ರೆ ಯಲ್ಲಿ ಕೇಸರಿ ಧ್ವಜ ಹಿಡಿದು, ತಮಟೆ ಸದ್ದಿಗೆ ಕುಣಿದು ಕುಪ್ಪಳಿಸಿದರೆ, ಕೆಲ ವರು ಶ್ರೀರಾಮ, ಲಕ್ಷ್ಮಣ, ಹನುಮಂತ ವೇಷ ತೊಟ್ಟು ಗಮನ ಸೆಳೆದರು. ಮಂಡ್ಯ, ಮೈಸೂರು, ಮದ್ದೂರು, ಪಾಂಡವಪುರ, ನಾಗಮಂಗಲ, ಕೆ.ಆರ್.ಪೇಟೆ ಹಾಗೂ ಶ್ರೀರಂಗಪಟ್ಟಣ ಸುತ್ತಮುತ್ತಲ ಗ್ರಾಮಗಳಿಂದ ಸಾವಿ ರಾರು ಹನುಮ ಭಕ್ತರು ಈ ಸಂಕೀರ್ತನಾ ಯಾತ್ರೆಂ iÀುಲ್ಲಿ ಪಾಲ್ಗೊಂಡಿದ್ದರು. ಧಾರ್ಮಿಕ ವಿಧಿ ವಿಧಾನಗಳಂತೆ ಮಾಲಾಧಾರಿಗಳು ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಾಲಯ ದಲ್ಲಿ ತಮ್ಮ ಮಾಲೆಗಳನ್ನು ವಿಸರ್ಜಿಸಿದರು.
ನಂತರ ರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಹಿಂದೂ ಜಾಗರಣ ವೇದಿಕೆ ಪ್ರಾಂತೀಯ ಅಧ್ಯಕ್ಷ ಗೋ. ಕೇಶವಮೂರ್ತಿ ಮಾತನಾಡಿ, ಹನುಮಂತ ನಿನ್ನ ಜಾಗಕ್ಕೆ ನೀನು ಹೋಗಪ್ಪ, ನಿನ್ನನ್ನು ಮೂಡಲ ಬಾಗಿಲ ದಿಕ್ಕಿನಲ್ಲಿ ನೋಡುವ ಬಯಕೆ ನಮ್ಮದಾಗಿದೆ ಎಂದು ಸಾವಿರಾರು ಹನುಮ ಭಕ್ತರೊಂದಿಗೆ ಸಂಕಲ್ಪ ಮಾಡಿದರು.

ಮಂದಿರ ನಿರ್ಮಾಣ ಘೋಷಣೆ: ಪಟ್ಟ ಣದ ಪುರಸಭೆ ವೃತ್ತ ಬಳಿ ಜಮಾವಣೆಗೊಂಡ ಸಾವಿರಾರು ಹನುಮಮಾ ಲಾಧಾರಿಗಳು ಹನು ಮನ ಪಾದದ ಮೇಲಾಣೆ, ಮೂಡಲ ಆಂಜ ನೇಯಸ್ವಾಮಿ ಮಂದಿರ ಕಟ್ಟುವೆವು ಎಂದು ಘೋಷಣೆ ಕೂಗಿ, ನಾವು ರಾಮನ ಸಂತತಿ ಯವರು, ಟಿಪ್ಪು ಸಂತತಿ ನಮಗೆ ಬೇಡ ಎಂದು ಯಾತ್ರೆಯುದ್ದಕ್ಕೂ ಘೋಷಣೆ ಕೂಗಿದರು.

ಬಿಗಿ ಭದ್ರತೆ: ಸಾವಿರಾರು ಸಂಖ್ಯೆಯಲ್ಲಿ ಹನುಮ ಮಾಲಾ ಧಾರಿಗಳು ಪಟ್ಟಣಕ್ಕೆ ಆಗಮಿಸಿ ಹನುಮಮಾಲೆ ವಿಸರ್ಜನೆ ಹಾಗೂ ಸಂಕೀರ್ತನಾ ಯಾತ್ರೆಯಲ್ಲಿ ಭಾಗಿಯಾಗಿದ್ದು ದರಿಂದ ಪಟ್ಟಣದಲ್ಲಿ ಭಾರೀ ಬಿಗಿ ಬಂದೋ ಬಸ್ತ್ ಏರ್ಪಡಿ ಸಲಾಗಿತ್ತು. ಹನುಮಾ ಮಾಲಾ ಧಾರಿಗಳು ಯಾತ್ರೆ ತೆರಳಲಿರುವ ಪಟ್ಟಣ ಹಾಗೂ ಗಂಜಾಂನ ಪ್ರಮುಖ ಮಾರ್ಗ ಸೇರಿದಂತೆ ವಿವಿಧ ಸ್ಥಳಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಜಿಲ್ಲಾ ಪೊಲೀಸ್
ವರಿಷ್ಠಾಧಿಕಾರಿ ಯತೀಶ್ ಉಸ್ತುವಾರಿ ಯಲ್ಲಿ ಇಬ್ಬರು ಅಪರ ಪೊಲೀಸ್ ವರಿಷ್ಠಾಧಿ ಕಾರಿ, ಐವರು ಡಿವೈಎಸ್‍ಪಿ, 30 ಸಿಪಿಐ, 55 ಪಿಎಸ್‍ಐ, 650 ಮುಖ್ಯಪೇದೆ ಹಾಗೂ ಪೇದೆಗಳು, 14 ಡಿಆರ್ ಹಾಗೂ ಕ್ಯೂಆರ್‍ಟಿ, ಕೆಎಸ್‍ಆರ್‍ಪಿ 3 ತುಕಡಿ ಸೇರಿದಂತೆ 2 ಬಾಂಬ್ ನಿಷ್ಕ್ರಿಯ ದಳ 25 ಕ್ಕೂ ಹೆಚ್ಚು ಸ್ಥಳಗಳಲ್ಲಿ ಸಿಸಿ ಟಿವಿ ಕಣ್ಗಾವಲಿನೊಂದಿಗೆ ಬಂದೋಬಸ್ತ್ ನಿಯೋಜಿಸಲಾಗಿತ್ತು.

ಪಟ್ಟಣದಲ್ಲಿ ಹೈ ಅಲರ್ಟ್: ಸಂಕೀರ್ತನಾ ಯಾತ್ರೆ ಹಿನ್ನಲೆಯಲ್ಲಿ ಪಟ್ಟಣ ಹಾಗೂ ಗಂಜಾಂ ನಲ್ಲಿ ಹೈ ಅಲರ್ಟ್ ಘೋಷಿಸಿ, ಸೂಕ್ಷ್ಮ ಪ್ರದೇಶಗಳಲ್ಲಿ ಬಾಂಬ್ ನಿಷ್ಕ್ರಿಯ ದಳ ತಪಾಸಣೆ, ಪಟ್ಟಣದ ಪ್ರಮುಖ ಬೀದಿ ಗಳಲ್ಲಿ ಶ್ವಾನದಳದಿಂದ ತಪಾಸಣೆ ನಡೆಸಲಾಗುತ್ತಿತ್ತು.
ಯಾತ್ರೆಯಲ್ಲಿ ಅಪ್ಪು ಜಪ: ಹನುಮ ಮಾಲಾಧಾರಿಗಳು ಸಂಕೀರ್ತನಾ ಯಾತ್ರೆ ಯಲ್ಲಿ ದಿವಂಗತ ನಟ ಪುನೀತ್‍ರಾಜ್ ಕುಮಾರ್‍ಗೆ ಶ್ರದ್ಧಾಂಜಲಿ ಸಲ್ಲಿಸಿದರು. ರಾಮ ಹಾಗೂ ಹನುಮನ ಭಕ್ತರು ಪುನೀತ್ ರಾಜ್‍ಕುಮಾರ್ ಭಾವಚಿತ್ರ ಹಿಡಿದು ಮೆರವಣಿಗೆ ಸಾಗಿದರು.
ಯುವಕರಿಗೆ ಥಳಿತ: ಯಾತ್ರೆ ವೇಳೆ ಇಬ್ಬರು ಯುವಕರು ಮೆರವಣಿಗೆಯುದ್ದಕ್ಕೂ ವೀಡಿಯೋ ಮಾಡುತ್ತಿದ್ದು, ಮಧ್ಯೆ ಮಧ್ಯೆ ನುಸುಳುತ್ತಿದ್ದರಿಂದ ರೊಚ್ಚಿಗೆದ್ದ ಹನುಮಾ ಮಾಲಾಧಾರಿಗಳು, ಅವರುಗಳನ್ನು ಹೊರ ಹಾಕುವ ವೇಳೆ, ಕೆಲವರು ಅವರನ್ನು ಥಳಿಸಿದರು. ಈ ಘಟನೆಯಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣ ವಾಗಿತ್ತು. ಕೂಡಲೇ ಪೊಲೀಸರು ಮಧ್ಯ ಪ್ರವೇಶಿಸಿ ಆ ವ್ಯಕ್ತಿಯನ್ನು ವಶಕ್ಕೆ ಪಡೆದರು. ಅಲ್ಲದೆ ಭಾರೀ ಭದ್ರತೆಯ ನಡುವೆಯೂ ಗೊಂದಲ ಸೃಷ್ಟಿಸಿದ ಯುವಕರನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Translate »