ಕೋವಿಡ್ ಸಂಕಷ್ಟದಲ್ಲೂ 9500 ಕೋಟಿ ಅಧಿಕ ತೆರಿಗೆ ಸಂಗ್ರಹ ಸಮರ್ಥ ಆಡಳಿತಕ್ಕೆ ಸಾಕ್ಷಿ
ಮೈಸೂರು

ಕೋವಿಡ್ ಸಂಕಷ್ಟದಲ್ಲೂ 9500 ಕೋಟಿ ಅಧಿಕ ತೆರಿಗೆ ಸಂಗ್ರಹ ಸಮರ್ಥ ಆಡಳಿತಕ್ಕೆ ಸಾಕ್ಷಿ

March 30, 2022

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮರ್ಥನೆ
ಬೆಂಗಳೂರು, ಮಾ.೨೯(ಕೆಎಂಶಿ)-ಕೋವಿಡ್ ಸಂಕಷ್ಟದಲ್ಲೂ ೯,೫೦೦ ಕೋಟಿ ರೂ. ಹೆಚ್ಚು ತೆರಿಗೆ ಸಂಗ್ರಹವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿಂದು ಪ್ರಕಟಿಸಿದರು.

ಮೋಟಾರು ವಾಹನ ತೆರಿಗೆ ಹೊರತುಪಡಿಸಿ ಉಳಿದ ತೆರಿಗೆ ಸಂಗ್ರಹ ನಿಗದಿತ ಗುರಿಗಿಂತ ಹೆಚ್ಚು ಕ್ರೋಢೀಕರಣ ವಾಗಿದೆ. ನಮ್ಮ ಆಡಳಿತ ವೈಫಲ್ಯವಾಗಿದ್ದರೆ ಇದು ಸಾಧ್ಯವಾಗುತ್ತಿತ್ತೆ? ಎಂದು ಪ್ರತಿಪಕ್ಷದ ಸದಸ್ಯರನ್ನು ಕೆಣಕಿದ ಮುಖ್ಯಮಂತ್ರಿ ಅವರು, ಕೋವಿಡ್‌ನಿಂದ ಅನೇಕ ಸಂಕಷ್ಟಗಳನ್ನು ಎದುರಿಸಿದ್ದೇವೆ. ಅದರ ನಡುವೆಯೂ ಉತ್ತಮ ಆಡಳಿತ ನೀಡಿ ಸೋರಿಕೆಯನ್ನು ತಡೆಗಟ್ಟಿ ಆದಾಯದ ಗುರಿ ಮುಟ್ಟಿದ್ದೇವೆ. ವಿವಿಧ ಇಲಾಖೆಗಳ ಅನುದಾನ ಬೇಡಿಕೆಗಳ ಮೇಲೆ ನಡೆದ ಚರ್ಚೆಗೆ ಉತ್ತರಿ ಸಿದ ಮುಖ್ಯಮಂತ್ರಿ, ೭,೫೦೦ ಕೋಟಿ ರೂ. ಹೆಚ್ಚು ತೆರಿಗೆ ಸಂಗ್ರಹ ನಿರೀಕ್ಷೆಯಿತ್ತು. ಅದು ಮೀರಿ ೯,೫೦೦ ಕೋಟಿ ರೂ.ನಷ್ಟು ತೆರಿಗೆ ಸಂಗ್ರಹವಾಗಿದೆ ಎಂದರು.

೨೦೨೧-೨೨ನೇ ಸಾಲಿನಲ್ಲಿ ೧,೧೯,೫೫೨ ಕೋಟಿ ರೂ. ಆದಾಯ ಸಂಗ್ರಹದ ಗುರಿಯಿತ್ತು. ೩ನೇ ತ್ರೆöÊಮಾಸಿಕ ದಲ್ಲಿ ಕೈಗೊಂಡ ಬಿಗಿ ಕ್ರಮ ಹಾಗೂ ಜಾಗೃತ ದಳವನ್ನು ಚುರುಕುಗೊಳಿಸಿದ ಪರಿಣಾಮ ತೆರಿಗೆ ಸಂಗ್ರಹದಲ್ಲಿ ಏರಿಕೆಯಾಯಿತು. ಗೋವಾ ಮತ್ತಿತರ ಕಡೆಯಿಂದ ಬರುತ್ತಿದ್ದ ಸೆಕೆಂಡ್ಸ್ ಮದ್ಯವನ್ನು ತಡೆ ಗಟ್ಟಿದ್ದರಿಂದ ೨೦೦೦ ಕೋಟಿ ರೂ. ಗೂ ಹೆಚ್ಚು ಅಬಕಾರಿ ತೆರಿಗೆ ಸಂಗ್ರಹ ಸಾಧ್ಯವಾಯಿತು.

ಶೇ.೧೦ರಷ್ಟು ಮುದ್ರಾಂಕ ಶುಲ್ಕ ರಿಯಾಯಿತಿ ನೀಡಿದ್ದರಿಂದ ೧೦೦೦ ಕೋಟಿ ರೂ. ಅಧಿಕ ತೆರಿಗೆ ಸಂಗ್ರಹವಾಗಿದೆ. ತೆರಿಗೆಯೇತರ ಆದಾಯವನ್ನು ೪ ಸಾವಿರ ಕೋಟಿ ರೂ.ಗೆ ನಿಗದಿ ಮಾಡಲಾಗಿತ್ತು, ೬ ಸಾವಿರ ಕೋಟಿ ರೂ. ಸಂಗ್ರಹವಾಗಿದೆ.

ಕಬ್ಬಿಣದ ಅದಿರು ಮಾರಾಟದಿಂದ ೫೦೦ ಕೋಟಿ ರೂ. ಸಂಗ್ರಹವಾಯಿತು. ಗಣ ಗಾರಿಕೆಗೆ ಅನುಕೂಲ ಮಾಡಿಕೊಟ್ಟಿದ್ದ ರಿಂದ ತೆರಿಗೆಯೇತರ ಆದಾಯ ಸಂಗ್ರಹಿಸಲು ಸಾಧ್ಯವಾ ಯಿತು. ೨೦೨೨-೨೩ನೇ ಆರ್ಥಿಕ ಸಾಲಿನಲ್ಲಿ ೧೦ ಸಾವಿರ ಕೋಟಿ ರೂ.ಗೂ ಹೆಚ್ಚು ತೆರಿಗೆಯೇತರ ಆದಾಯ ಹೊಂದುವ ಗುರಿ ಹೊಂದಿದ್ದೇವೆ. ತೆರಿಗೆಯೇತರ ಆದಾಯ ಹೆಚ್ಚಿಸಬೇಕು. ಅನವಶ್ಯಕ ವೆಚ್ಚವನ್ನು ತಗ್ಗಿಸಬೇಕು. ಇಲ್ಲದಿ ದ್ದರೆ ಜನರ ಮೇಲೆ ಆರ್ಥಿಕ ಹೊರೆ ಬೀಳಲಿದೆ ಎಂದರು.
೨೦೨೧-೨೨ನೇ ಸಾಲಿನಲ್ಲಿ ೬೭,೧೦೦ ಕೋಟಿ ರೂ. ಸಾಲ ಪಡೆಯುವ ಅವಕಾಶವಿದ್ದರೂ ೬೩,೧೦೦ ಕೋಟಿ ರೂ. ಸಾಲ ಪಡೆದು, ೪ ಸಾವಿರ ಕೋಟಿ ರೂ.ನಷ್ಟು ಕಡಿಮೆ ಸಾಲ ಮಾಡಿದ್ದೇವೆ ಎಂದು ಸಮರ್ಥಿಸಿಕೊಂಡರು.

ವಿತ್ತೀಯ ಕೊರತೆಯನ್ನು ಒಂದೆರಡು ವರ್ಷದಲ್ಲಿ ನಿವಾ ರಿಸಿ ಆದಾಯ ಹೆಚ್ಚಳಕ್ಕೆ ಆದ್ಯತೆ ನೀಡುತ್ತೇವೆ, ನಂತರ ಉಳಿತಾಯ ಬಜೆಟ್ ಮಂಡಿಸಬಹುದಾಗಿದೆ ಎಂದರು. ೨೦೨೨-೨೩ರಲ್ಲಿ ಗುರಿ ದೊಡ್ಡ ಪ್ರಮಾಣದಲ್ಲಿದ್ದು ಮೊದಲ ತಿಂಗಳಿನಿAದಲೇ ಬಿಗಿಕ್ರಮ ಕೈಗೊಂಡು ಆಧುನೀಕರಣ, ಡಿಜಿಟಲೈಷನ್, ಹೊಸ ನಿಯಮ ಜಾರಿ, ಜಿಎಸ್‌ಟಿ ಸೋರಿಕೆ ತಡೆಯುವುದು ಮೊದಲಾದವುಗಳ ಮೂಲಕ ಗುರಿ ಮೀರಿದ ಆದಾಯ ಗಳಿಸುವ ವಿಶ್ವಾಸವಿದೆ. ಜಿಎಸ್‌ಟಿ ಪಾವತಿಸದ ಸಂಸ್ಥೆಗಳ ಮೇಲೆ ದಾಳಿ ಮಾಡಿದ್ದೇವೆ, ೨೦ರಿಂದ ೨೫ ಕಂಪನಿ ತೆರೆದು ಜಿಎಸ್‌ಟಿ ಪಾವತಿಸದೆ ವ್ಯಕ್ತಿಯೊಬ್ಬ ತಪ್ಪಿಸಿಕೊಂಡಿರುವುದು ಗಮನಕ್ಕೆ ಬಂದಿದೆ. ಇದೆಲ್ಲದರ ಹಿನ್ನೆಲೆಯಲ್ಲಿ ಮುಂದಿನ ವರ್ಷಕ್ಕೆ ಆದಾಯ ಹೆಚ್ಚಳಕ್ಕೆ ಗಮನಹರಿಸಲಾಗುವುದು ಎಂದರು. ೨೦೨೧-೨೨ನೇ ಸಾಲಿನಲ್ಲಿ ಮೊದಲ ೫ ತಿಂಗಳಲ್ಲಿ ೫ ಸಾವಿರ ಕೋಟಿ ರೂ. ಕಡಿಮೆ ಆದಾಯ ಸಂಗ್ರಹವಾಗಿತ್ತು, ಅಧಿಕಾರಿಗಳು ಬಜೆಟ್ ಗಾತ್ರ ತಗ್ಗಿಸುವಂತೆ ಸಲಹೆ ಮಾಡಿ ದ್ದರು, ಆದರೂ, ೨೦೨೨-೨೩ರ ಬಜೆಟ್ ಗಾತ್ರ ೨,೬೫,೭೨೦ ಕೋಟಿ ರೂ. ಆಗಿದ್ದು, ಕಳೆದ ವರ್ಷಕ್ಕಿಂತ ಶೇ.೭.೯ರಷ್ಟು ಹೆಚ್ಚಾಗಿದೆ. ೧೪,೧೨೯ಕೋಟಿ ರೂ. ಸಾಲ ಮರು ಪಾವತಿಗೆ ಮೀಸಲಿಡಲಾಗಿದೆ, ಒಟ್ಟಾರೆ ರಾಜಸ್ವ ಸ್ವೀಕೃತಿ ಶೇ.೧೦.೨೩ರಷ್ಟು ಹೆಚ್ಚಾಗಿದೆ ಎಂದರು. ಜಿಎಸ್‌ಟಿ ಪರಿಹಾರ ಜೂನ್‌ಗೆ ಅಂತ್ಯವಾಗಿರುವುದರಿAದ ಅದನ್ನು ಬಜೆಟ್‌ನಲ್ಲಿ ಪರಿಗಣ ಸಲಾಗಿಲ್ಲ, ಒಟ್ಟು ಸಾಲದ ಹೊಣೆಗಾರಿಕೆ ೫,೧೮,೩೬೬ ಕೋಟಿ ರೂ. ಆಗಿದೆ. ೧೪ ಸಾವಿರ ಕೋಟಿ ರೂ.ನಷ್ಟು ರಾಜಸ್ವ ಕೊರತೆ ಅಂದಾಜು ಮಾಡಲಾಗಿದೆ, ಅದನ್ನು ಮತ್ತಷ್ಟು ಕಡಿತಗೊಳಿಸಲಾಗುವುದು. ಎಸ್‌ಟಿಎಸ್‌ಪಿಎಸ್‌ಇ ಯೋಜನೆಯಡಿ ಕಳೆದ ವರ್ಷಕ್ಕಿಂತ ೨೨೦೦ ಕೋಟಿ ರೂ. ಒದಗಿಸಲಾಗಿದೆ. ಅನವಶ್ಯಕ ವೆಚ್ಚ ತಗ್ಗಿಸಿ, ಆದಾಯ ಹೆಚ್ಚಿಸಿ, ಆರ್ಥಿಕ ಶಿಸ್ತು ತಂದು ಆಡಳಿತ ಸುಧಾರಣೆ ಮಾಡಲು ಬದ್ಧರಾಗಿದ್ದೇವೆ ಎಂದರು. ಕಳೆದ ೨ ವರ್ಷಗಳಿಂದ ಕೋವಿಡ್‌ನಿಂದಾಗಿ ಆರ್ಥಿಕ ಬೆಳವಣ ಗೆ ಕುಂಠಿತವಾಗಿತ್ತು. ೧೫ ಸಾವಿರ ಕೋಟಿ ರೂ.ನಷ್ಟು ಕೋವಿಡ್ ಮತ್ತಿತರ ವೆಚ್ಚ ಬಾಬ್ತುಗಳಿಗೆ ವೆಚ್ಚ ಮಾಡಲಾ ಗಿದೆ ಎಂದರು. ಅಮೃತ ನಗರೋತ್ಥಾನ ಯೋಜನೆಯಡಿ ಬೆಂಗಳೂರು ನಗರಕ್ಕೆ ೬ ಸಾವಿರ ಕೋಟಿ ರೂ., ಇತರೆ ನಗರಗಳಿಗೆ ೪ ಸಾವಿರ ಕೋಟಿ ರೂ. ಒದಗಿಸಲಾಗಿದೆ ಎಂದರು.

Translate »