ಏಪ್ರಿಲ್ ೧ಕ್ಕೆ ಮಧ್ಯಾಹ್ನ ೧.೧೫ರಿಂದ ೧.೪೫ರವರೆಗೆ ಬೆಂಗಳೂರು ತಾಜ್ ವೆಸ್ಟ್ಎಂಡ್‌ನಲ್ಲಿ ಅಮಿತ್ ಷಾ-ಯಡಿಯೂರಪ್ಪ ರಹಸ್ಯ ಮಾತುಕತೆ
ಮೈಸೂರು

ಏಪ್ರಿಲ್ ೧ಕ್ಕೆ ಮಧ್ಯಾಹ್ನ ೧.೧೫ರಿಂದ ೧.೪೫ರವರೆಗೆ ಬೆಂಗಳೂರು ತಾಜ್ ವೆಸ್ಟ್ಎಂಡ್‌ನಲ್ಲಿ ಅಮಿತ್ ಷಾ-ಯಡಿಯೂರಪ್ಪ ರಹಸ್ಯ ಮಾತುಕತೆ

March 30, 2022

ಬಿ.ಎಸ್.ಯಡಿಯೂರಪ್ಪರಿಲ್ಲದೆ ಚುನಾವಣೆಗೆ ಹೋದರೆ ಸಾಧನೆ ಅಸಾಧ್ಯವೆಂಬ ಸಂಗತಿ ಮನವರಿಕೆ
ಮಾಜಿ ಮುಖ್ಯಮಂತ್ರಿ ಮನವೊಲಿಕೆ ಜೊತೆಗೆ ಅವಧಿಗೂ ಮುನ್ನ ಚುನಾವಣೆ ಸಾಧ್ಯತೆ ಬಗ್ಗೆ ಚರ್ಚೆ

ಬೆಂಗಳೂರು, ಮಾ.೨೯(ಕೆಎಂಶಿ)- ರಾಜ್ಯ ವಿಧಾನ ಸಭಾ ಚುನಾವಣೆ ಕುರಿತಂತೆ ಕೇಂದ್ರ ಗೃಹ ಸಚಿವ ಅಮಿತ್ ಷಾ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿ ಯೂರಪ್ಪ ಜೊತೆ ರಹಸ್ಯ ಚರ್ಚೆ ನಡೆಸಲಿದ್ದಾರೆ.

ಅಮಿತ್ ಷಾ ಅವರು ಮಾರ್ಚ್ ೩೧ರಿಂದ ಎರಡು ದಿನ ಗಳ ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರೊಂದಿಗೆ ಮುಖಾಮುಖಿ ಚರ್ಚೆ ಮಾಡಲಿದ್ದಾರೆ. ಏ.೧ರಂದು ನಗರದ ತಾಜ್ ವೆಸ್ಟ್ಎಂಡ್ ನಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸದಸ್ಯರ ಜೊತೆ ಚುನಾವಣಾ ಸಂಬAಧ ಷಾ ಚರ್ಚೆ ಮಾಡಲಿದ್ದಾರೆ.
ಇದಾದ ನಂತರ ಅಲ್ಲಿಯೇ ಮಧ್ಯಾಹ್ನ ೧-೧೫ರಿಂದ ೧-೪೫ ರವರೆಗೂ ಯಡಿಯೂರಪ್ಪ ಅವರ ಜೊತೆ ಚರ್ಚೆ ಮಾಡಲು ೩೦ ನಿಮಿಷಗಳ ಸಮಯವನ್ನು ಪ್ರತ್ಯೇಕವಾಗಿ ನಿಗದಿಪಡಿಸಿ ದ್ದಾರೆ. ಯಡಿಯೂರಪ್ಪ ಅವರು ಅಧಿಕಾರದಿಂದ ಸ್ವಯಂ ಪ್ರೇರಿತವಾಗಿ ಇಳಿದ ನಂತರ ತಮ್ಮ ಪುತ್ರ ವಿಜಯೇಂದ್ರ ಅವರನ್ನು ಸಿಎಂ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಮಂತ್ರಿ ಮಾಡಲು ಹಲವಷ್ಟು ಕಸರತ್ತು ನಡೆಸಿದ್ದರು.

ಇದು ಸಫಲವಾಗಲಿಲ್ಲ. ಅಷ್ಟೇ ಅಲ್ಲ, ಬಿಜೆಪಿ ರಾಷ್ಟಿçÃಯ ನಾಯಕರು ತಮ್ಮನ್ನು ಕಡೆಗಾಣ ಸುತ್ತಿದ್ದಾರೆ ಎಂಬ ಭಾವನೆ ಅವರಲ್ಲಿ ಮೂಡಿತ್ತು. ಪಕ್ಷಕ್ಕೆ ನಾನು ಬೇಡ ಎಂದ ಮೇಲೆ ತಮ್ಮ ಮಕ್ಕಳ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಹಲವು ಕೋನಗಳಲ್ಲಿ ಯೋಚನೆ ನಡೆಸಿದ್ದರು. ಕರ್ನಾಟಕದ ಮಟ್ಟಿಗೆ ಯಡಿಯೂರಪ್ಪ ಅವರ ಸಾರಥ್ಯ ಇಲ್ಲದೆ ಬಿಜೆಪಿ ಬಲಾಢ್ಯವಾಗಿ ಚುನಾವಣೆ ಎದುರಿಸಲು ಸಾಧ್ಯವಿಲ್ಲ ಎಂಬುದು ವರಿಷ್ಠರ ಗಮನದಲ್ಲಿದೆ. ಆದರೂ, ಅವರ ಮಕ್ಕಳಿಗೆ ಯಾವುದೇ ಅಧಿಕಾರ ನೀಡಿಲ್ಲ, ಚುನಾವಣಾ ವರ್ಷದಲ್ಲಿ ಅವರನ್ನು ಬದಿಗಿರಿಸಿ ಇತರರ ನಾಯಕತ್ವದಲ್ಲಿ ಚುನಾವಣೆ ಎದುರಿ ಸುವ ಶಕ್ತಿ ರಾಜ್ಯ ಬಿಜೆಪಿಗಿಲ್ಲ. ಇದನ್ನು ಮನಗಂಡ ಅಮಿತ್ ಷಾ, ರಾಜ್ಯದ ಯಾವುದೇ ನಾಯಕರೊಂದಿಗೆ ಮುಖಾಮುಖಿ ಚರ್ಚೆಗೆ ಸಮಯ ನೀಡದೆ ಯಡಿ ಯೂರಪ್ಪ ಅವರೊಂದಿಗೆ ಮಾತ್ರ ಚರ್ಚಿಸಲು ಸಮಯ ನಿಗದಿ ಮಾಡಿದ್ದಾರೆ. ಬಹುತೇಕ ಮುಂದಿನ ಚುನಾವಣೆ ಬಗ್ಗೆ ಯಡಿಯೂರಪ್ಪ ಅವರಿಂದ ಸಲಹೆ ಸೂಚನೆ ಪಡೆದು ಕೊಳ್ಳುವುದು ಮತ್ತು ಕರ್ನಾಟಕದಲ್ಲಿ ಅವಧಿಗೂ ಮುನ್ನ ಚುನಾವಣೆ ಮಾಡಬೇಕೇ ಅಥವಾ ಬೇಡವೇ ಅಥವಾ ನಿಗದಿತ ಸಮಯದಲ್ಲೇ ಚುನಾವಣೆ ಮಾಡಬೇಕೇ ಎಂಬ ಬಗ್ಗೆ ಮಾಹಿತಿ ಪಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಚುನಾವಣೆಯಲ್ಲಿ ಯಾರ ನಾಯಕತ್ವ ಇರಬೇಕು, ಬೊಮ್ಮಾಯಿ ಅವರನ್ನು ಬದಲಾವಣೆ ಮಾಡಿ ಹೊಸ ನಾಯಕತ್ವದಲ್ಲಿ ಚುನಾವಣೆ ಎದುರಿಸಬೇಕೇ ಎಂಬ ಬಗ್ಗೆ ಚರ್ಚೆ ಮಾಡಲಿದ್ದಾರೆ ಎನ್ನಲಾಗಿದೆ. ಎಲ್ಲದಕ್ಕೂ ಮಿಗಿಲಾಗಿ ಅಸಮಾಧಾನಗೊಂಡಿರುವ ಯಡಿಯೂರಪ್ಪ ಅವರನ್ನು ಸಮಾಧಾನಪಡಿಸಿ, ಅವರ ಮಾರ್ಗದರ್ಶನದಲ್ಲೇ ಮುಂದಿನ ಚುನಾವಣೆ ಎದುರಿ ಸುವುದಾಗಿ ಹೇಳುವ ಮೂಲಕ ಅವರನ್ನು ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿಡುವ ಪ್ರಯತ್ನವಾಗಿ ಈ ಸಮಯ ನಿಗದಿಪಡಿಸಲಾಗಿದೆ. ಯಡಿಯೂರಪ್ಪ ಪುತ್ರ ವಿಜಯೇಂದ್ರ ನೀಡಿರುವ ಆಹ್ವಾನದ ಮೇರೆಗೆ ಕೇಂದ್ರ ಗೃಹ ಸಚಿವರು ೨ ದಿನಗಳ ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಸಿದ್ದಗಂಗಾ ಶ್ರೀಗಳ ೧೧೪ನೇ ಜಯಂತಿ ಉತ್ಸವದ ಪೂರ್ಣ ಜವಾಬ್ದಾರಿಯನ್ನು ವಿಜಯೇಂದ್ರ ವಹಿಸಿಕೊಂಡಿದ್ದಾರೆ. ಈ ಕಾರ್ಯಕ್ರಮಕ್ಕೆ ಅಮಿತ್ ಷಾ ಮುಖ್ಯ ಅತಿಥಿಯಾಗಿ ಆಗಮಿಸ ಲಿದ್ದು, ಸುಮಾರು ೯೦ ನಿಮಿಷಗಳ ಕಾಲ ತುಮಕೂರಿನ ಶ್ರೀಕ್ಷೇತ್ರದಲ್ಲಿ ಕಾಲ ಕಳೆಯ ಲಿದ್ದಾರೆ. ಒಟ್ಟಾರೆ ಈ ಉಭಯ ನಾಯಕರ ರಹಸ್ಯ ಮಾತುಕತೆ ರಾಜ್ಯ ಬಿಜೆಪಿ ಮತ್ತು ಆಡಳಿತದಲ್ಲಿ ಕೆಲವು ಮಹತ್ತರ ಬದಲಾವಣೆಗೆ ನಾಂದಿಯಾಗಬಹುದು.

Translate »