ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ.೩ರಷ್ಟು ಹೆಚ್ಚಳ
ಮೈಸೂರು

ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ.೩ರಷ್ಟು ಹೆಚ್ಚಳ

March 31, 2022

ನವದೆಹಲಿ: ಕೇಂದ್ರ ಸರ್ಕಾರಿ ನೌಕ ರರಿಗೆ ಸಿಹಿಸುದ್ದಿ ನೀಡಿದ್ದು, ನೌಕರರ ತುಟ್ಟಿಭತ್ಯೆ(ಡಿಎ)ಯನ್ನು ಶೇ.೩ರಷ್ಟು ಹೆಚ್ಚಳ ಮಾಡಿದ್ದು, ೧.೧೬ ಕೋಟಿ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣ ದಾರರು ಇದರ ಲಾಭ ಪಡೆಯಲಿದ್ದಾರೆ.

ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರಿ ನೌಕರರ ಡಿಎ ಶೇ.೩ರಷ್ಟು ಹೆಚ್ಚಳಕ್ಕೆ ಅನುಮೋದನೆ ನೀಡಲಾಗಿದೆ. ಇದರೊಂದಿಗೆ ಮೂಲ ವೇತನದ ಶೇ.೩೧ರಷ್ಟಿದ್ದ ತುಟ್ಟಿಭತ್ಯೆ ಈಗ ಶೇ.೩೪ಕ್ಕೆ ಏರಿಕೆ ಮಾಡಲಾಗಿದೆ. ಕ್ಯಾಬಿನೆಟ್ ಅಧಿಸೂಚನೆಯಂತೆ ಮೂಲ ವೇತನ ಎಂಬ ಪದವು ೭ನೇ ವೇತನ ಆಯೋ ಗದ ಮ್ಯಾಟ್ರಿಕ್ಸ್ ಪ್ರಕಾರ ಪಾವತಿಸುವ ವೇತನ ಎಂದರ್ಥ ಮತ್ತು ವಿಶೇಷ ವೇತನದಂತಹ ಯಾವುದೇ ರೀತಿಯ ವೇತನವನ್ನು ಒಳಗೊಂಡಿಲ್ಲ.

ಶೇ.೩ರಷ್ಟು ತುಟ್ಟಿಭತ್ಯೆ ಹೆಚ್ಚಳದಿಂದ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ ೯,೫೪೪. ೫೦ ಕೋಟಿ ರೂ. ಹೊರೆಯಾಗಲಿದೆ. ಆದರೆ ಇದರಿಂದ ಸುಮಾರು ೪೭.೬೮ ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು ೬೮.೬೨ ಲಕ್ಷ ಪಿಂಚಣ ದಾರರು ಪ್ರಯೋ ಜನ ಪಡೆಯಲಿದ್ದಾರೆ. ೨೦೨೧ರ ಜುಲೈ ೧ರಿಂದ ಅನ್ವಯವಾಗುವಂತೆ ತುಟ್ಟಿಭತ್ಯೆ ಯನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮೂಲವೇತನದ ಶೇ.೩೧ಕ್ಕೆ ಹೆಚ್ಚಿಸಲಾಗಿತ್ತು.

Translate »