ತಿಪ್ಪಯ್ಯನ ಕೆರೆಗೆ ಕಲುಷಿತ ನೀರು ಸೇರಿ ಪಕ್ಷಿ, ಮೀನುಗಳ ಸಾವು
ಮೈಸೂರು

ತಿಪ್ಪಯ್ಯನ ಕೆರೆಗೆ ಕಲುಷಿತ ನೀರು ಸೇರಿ ಪಕ್ಷಿ, ಮೀನುಗಳ ಸಾವು

March 31, 2022
  • ನಗರಪಾಲಿಕೆ, ಮುಡಾ ಅಧಿಕಾರಿಗಳ ದಿವ್ಯ ನಿರ್ಲಕ್ಷö್ಯದಿಂದ ದುರಂತ
  • ಸುತ್ತ-ಮುತ್ತ ಬಡಾವಣೆಗಳ ಕಲುಷಿತ ನೀರು ಕೆರೆಗೆ ಸೇರ್ಪಡೆ

ಮೈಸೂರು,ಮಾ.೩೦(ಎಂಟಿವೈ)- ಜಿಲ್ಲಾಡಳಿತ ಅಭಿವೃದ್ಧಿ ಪಡಿಸಿದ್ದ ತಿಪ್ಪಯ್ಯನ ಕೆರೆಗೆ ಒಳಚರಂಡಿ ನೀರು ಸೇರುತ್ತಿದ್ದು, ಕೆರೆಯಲ್ಲಿ ಆಶ್ರಯ ಪಡೆದಿದ್ದ ಸ್ಪಾಟೆಡ್ ಬಿಲ್ಡ್ ಡಕ್ ಪಕ್ಷಿ ಹಾಗೂ ಕೆಲವು ಮೀನುಗಳು ಸಾವನ್ನಪ್ಪಿದ್ದು, ಆತಂಕವನ್ನು ಹೆಚ್ಚಿಸಿದೆ.

ಮೈಸೂರು-ತಿ.ನರಸೀಪುರ ರಸ್ತೆಯಲ್ಲಿ ರುವ ಪೊಲೀಸ್ ಲೇಔಟ್‌ಗೆ ಹೊಂದಿ ಕೊಂಡAತಿರುವ ತಿಪ್ಪಯ್ಯನ ಕೆರೆಯನ್ನು ೨೦೧೫-೧೬ನೇ ಸಾಲಿನಲ್ಲಿ ಜಿಲ್ಲಾಡಳಿತ ಹೂಳೆತ್ತಿಸಿ ಅಭಿವೃದ್ಧಿಪಡಿಸಿತ್ತು. ಅಂದು ಮೈಸೂರು ವಿಭಾಗದ ಉಪವಿಭಾಗಾಧಿಕಾರಿಯಾಗಿದ್ದ ಸಿ.ಎಲ್.ಆನಂದ್ ಅವರು ತೀವ್ರ ವಿರೋಧದ ನಡುವೆಯೂ ಪೋಲಿಸ್ ಲೇಔಟ್ ಹಾಗೂ ಜೆಎಸ್‌ಎಸ್ ಲೇಔಟ್ ಕಡೆ ಮುಚ್ಚಿದ್ದ ರಾಜಕಾಲುವೆಯನ್ನು ತೆರವುಗೊಳಿಸಿದ್ದರು.

ಇದರಿಂದ ಕಳೆದ ಎರಡು ವರ್ಷದಿಂದ ಸುರಿದ ಮಳೆಯಿಂದಾಗಿ ರಾಜಕಾಲುವೆ ಮೂಲಕ ತಿಪ್ಪಯ್ಯನ ಕೆರೆಗೆ ನೀರು ಹರಿದು ಬಂದಿತ್ತು. ಹಲವು ವರ್ಷಗಳ ಬಳಿಕ ಕೆರೆ ತುಂಬಿತ್ತು. ಮರು ಜೀವ ಪಡೆದ ಕೆರೆಯಲ್ಲಿ ಪಕ್ಷಿಗಳ ಸಂಕುಲ ಮೈದಳೆದಿತ್ತು. ವಲಸೆ ಪಕ್ಷಿಗಳು ತಿಪ್ಪಯ್ಯನ ಕೆರೆಗೆ ಬಂದು ಬೀಡುಬಿಟ್ಟಿದ್ದವು. ಆದರೆ ಈಗ ಕಲುಷಿತ ನೀರು ಕೆರೆಯನ್ನು ಸೇರುತ್ತಿರುವುದು ಆತಂಕ ಸೃಷ್ಟಿಸುತ್ತ್ತಿದೆ.

ನಿರ್ಲಕ್ಷö್ಯದಿಂದ ಮಲಿನ: ವಲಸೆ ಪಕ್ಷಿ ಸೇರಿದಂತೆ ಪಕ್ಷಿ ಸಂಕುಲಕ್ಕೆ ಮಾತ್ರವಲ್ಲದೆ ಸ್ಥಳೀಯರಿಗೂ ಅತ್ಯುತ್ತಮ ವಾತಾವರಣ ಸೃಷ್ಟಿಸಿದ್ದ ತಿಪ್ಪಯ್ಯನ ಕೆರೆ ಬಗ್ಗೆ ಸ್ಥಳೀಯ ಪಾಲಿಕೆ ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿ ಕಾರದ ಅಧಿಕಾರಿಗಳು ನಿರ್ಲಕ್ಷö್ಯ ತಾಳಿರು ವುದರಿಂದ ಸುಂದರ ಕೆರೆ ಮಲಿನಗೊಳ್ಳಲಾ ರಂಭಿಸಿದೆ. ಸರ್ದಾರ್ ವಲ್ಲಭಭಾಯಿ ಪಟೇಲ್ ನಗರ, ಪೊಲೀಸ್ ಲೇಔಟ್, ಜೆಎಸ್‌ಎಸ್ ಲೇಔಟ್, ಆಲನಹಳ್ಳಿ ಸೇರಿದಂತೆ ಸುತ್ತ ಮುತ್ತಲಿನ ಬಡಾವಣೆಗಳ ಒಳಚರಂಡಿ ನೀರು ತಿಪ್ಪಯ್ಯನ ಕೆರೆಗೆ ಸೇರುತ್ತಿದೆ. ಕೆಲವೆಡೆ ಮ್ಯಾನ್ ಹೋಲ್ ಉಕ್ಕಿ ಹರಿಯುತ್ತಿದ್ದು, ಈ ನೀರು ಕೂಡ ನೇರವಾಗಿ ಕೆರೆಗೆ ಸೇರುತ್ತಿದೆ.

ಒಳಚರಂಡಿ ನೀರು ಸೇರಿರುವುದರಿಂದ ಕೆರೆಯ ಒಂದು ಭಾಗ ದುರ್ನಾತ ಬೀರಲಾರಂಭಿಸಿದೆ. ಕೆರೆ ನೀರು ಪೂರ್ಣ ಪ್ರಮಾಣದಲ್ಲಿ ಕಲುಷಿತಗೊಂಡಿಲ್ಲದೇ ಇದ್ದರೂ, ನಿಧಾನವಾಗಿ ಕೆರೆ ಹಾಳಾಗುತ್ತಿದೆ. ಇದರಿಂದ ಸ್ಪಾಟೆಡ್ ಬಿಲ್ಡ್ ಡಕ್ ಹಾಗೂ ಮೀನುಗಳು ಸಾವನ್ನಪ್ಪಿವೆ. ಈಗಲಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಕೆರೆಗೆ ಸೇರು ತ್ತಿರುವ ಒಳಚರಂಡಿ ನೀರನ್ನು ತಡೆಗಟ್ಟದಿದ್ದರೆ ಮುಂದಿನ ದಿನಗಳಲ್ಲಿ ಸಮಸ್ಯೆ ಉಲ್ಭಣ ಸಲಿದೆ.

ಚರಂಡಿ ನೀರನ್ನು ಶುದ್ಧೀಕರಿಸಿ ಅದನ್ನು ಕೆರೆಗೆ ಬಿಡುವಂತಾಗಲು ಟ್ರೀಟ್‌ಮೆಂಟ್ ಪ್ಲಾಂಟ್ ನಿರ್ಮಿಸುವಂತೆ ಪರಿಸರ ಪ್ರೇಮಿ ಗಳು ಆಗ್ರಹಿಸುತ್ತಿದ್ದು, ಇದರ ಬಗ್ಗೆ ಸ್ಥಳೀಯ ಜಿಲ್ಲಾಡಳಿತ ಗಮನ ಹರಿಸುತ್ತಿಲ್ಲ.

ತುರ್ತಾಗಿ ಕ್ರಮ ಕೈಗೊಳ್ಳಬೇಕು: ತಿಪ್ಪಯ್ಯನ ಕೆರೆಗೆ ಒಳಚರಂಡಿ ನೀರು ಸೇರುತ್ತಿರುವುದಕ್ಕೆ ಸಂಬAಧಿಸಿದAತೆ ಪರಿಸರವಾದಿ ಶೈಲಜೇಶ್ ಪತ್ರಕರ್ತರೊಂದಿಗೆ ಮಾತನಾಡಿ, ಈ ಹಿಂದೆ ತಿಪ್ಪಯ್ಯನ ಕೆರೆ ಹೂಳೆತ್ತಿ, ಬೇಲಿ ಹಾಕಿ ಕೆರೆ ಪರಿಸರವನ್ನು ಕಾಪಾಡಲು ಜಿಲ್ಲಾಡಳಿತ ಕ್ರಮ ಕೈಗೊಂಡಿತ್ತು. ಇದರಿಂದ ೬೦ಕ್ಕೂ ಹೆಚ್ಚು ವಿದಧ ಪಕ್ಷಿಗಳು ಕೆರೆ ವಾತಾವರಣದಲ್ಲಿ ನೆಲೆಸಿದ್ದವು. ಅದರ ಜೊತೆಗೆ ವಲಸೆ ಪಕ್ಷಿಗಳು ಕೂಡ ಬಂದಿದ್ದವು. ಮೈಸೂರು ಮೃಗಾಲಯದ ವ್ಯಾಪ್ತಿಗೆ ಒಳಪಡುವ ಈ ಕೆರೆಗೆ ಒಳಚರಂಡಿ ನೀರು ಸೇರದಂತೆ ನೋಡಿ ಕೊಳ್ಳಬೇಕಾದ ಜವಾಬ್ದಾರಿ ಮುಡಾ ಹಾಗೂ ಪಾಲಿಕೆಯ ಕರ್ತವ್ಯವಾಗಿದೆ ಎಂದರು.

ಈ ಹಿಂದೆ ಈ ಭಾಗದಲ್ಲಿ ಮನೆಗಳ ಸಂಖ್ಯೆ ಕಡಿಮೆ ಇತ್ತು. ಆದರೆ ಇದೀಗ ಹೊಸ ಹೊಸ ಬಡಾವಣೆಗಳು ನಿರ್ಮಾಣವಾಗಿ ನೂರಾರು ಮನೆಗಳು ತಲೆ ಎತ್ತಿವೆ. ಇದರಿಂದ ಒಳ ಚರಂಡಿ ನೀರಿನ ಪ್ರಮಾಣ ಹೆಚ್ಚಾಗಿ ಕೆರೆ ಸೇರುತ್ತಿದೆ. ಈ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದ ಅಪಾಯ ಎದುರಾಗುವ ಮೊದಲು ಎಚ್ಚೆತ್ತುಕೊಳ್ಳದಿದ್ದರೆ ಅನಾಹುತವಾಗುವ ಸಾಧ್ಯತೆ ಹೆಚ್ಚು. ಮೃಗಾಲಯದ ವ್ಯಾಪ್ತಿಗೆ ಕೆರೆ ಸೇರಿದ್ದರೂ ಅದಕ್ಕೆ ಬರುವ ಒಳ ಚರಂಡಿ ನೀರು ತಡೆಗಟ್ಟುವ ಹೊಣೆ ಮಾತ್ರ ಪಾಲಿಕೆ ಅಥವಾ ಮುಡಾದ್ದಾಗಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ತುರ್ತಾಗಿ ಕ್ರಮ ಕೈಗೊಳ್ಳಬೇಕಾಗಿದೆ. ಮೃಗಾಲಯದ ವತಿಯಿಂದ ಈಗಾಗಲೇ ಒಳಚರಂಡಿ ನೀರು ಕೆರೆಗೆ ಬರುವುದನ್ನು ತಡೆಗಟ್ಟಲು ಹಾಗೂ ಟ್ರೀಟ್ ಮೆಂಟ್ ಪ್ಲಾಂಟ್ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

 

 

Translate »