ಮೈಸೂರು, ಆ. 26- ಮೈಸೂರು ಜಿಲ್ಲೆಯಲ್ಲಿ ಬುಧವಾರ 951 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 14,880ಕ್ಕೆ ಏರಿಕೆಯಾಗಿದೆ.
645 ಮಂದಿ ಗುಣಮುಖ ರಾಗಿ ಆಸ್ಪತ್ರೆಯಿಂದ ಬಿಡುಗಡೆ ಯಾಗಿದ್ದು, ಈವರೆಗೆ 10,656 ಮಂದಿ ಗುಣಮುಖರಾಗಿದ್ದಾರೆ. ಬುಧವಾರ 20 ಮಂದಿ ಮೃತ ಪಟ್ಟಿದ್ದು, ಮೃತಪಟ್ಟವರ ಸಂಖ್ಯೆ 381ಕ್ಕೆ ಏರಿಕೆಯಾಗಿದೆ. 3843 ಸಕ್ರಿಯ ಸೋಂಕಿತರ ಪೈಕಿ 226 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ, 93 ಮಂದಿ ಡೆಡಿಕೇಟೆಡ್ ಕೋವಿಡ್ ಹೆಲ್ತ್ ಸೆಂಟರ್‍ನಲ್ಲಿ, 519 ಮಂದಿ ಕೋವಿಡ್ ಕೇರ್ ಸೆಂಟರ್‍ನಲ್ಲಿ, 293 ಮಂದಿ ಖಾಸಗಿ ಆಸ್ಪತ್ರೆಯಲ್ಲಿ, 112 ಮಂದಿ ಖಾಸಗಿ ಕೇರ್ ಸೆಂಟರ್‍ನಲ್ಲಿ, 2596 ಮಂದಿ ಹೋಂ ಐಸೋಲೇಷನ್‍ನಲ್ಲಿದ್ದಾರೆ.
ರಾಜ್ಯದ ವರದಿ: ರಾಜ್ಯದಲ್ಲಿ ಇಂದು 8580 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 3,00,406ಕ್ಕೆ ಏರಿಕೆಯಾಗಿದೆ. 7249 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ 2,11,688 ಮಂದಿ ಗುಣಮುಖರಾದಂತಾಗಿದೆ. ರಾಜ್ಯದಲ್ಲಿ 83,608 ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 133 ಮಂದಿ ಮೃತಪಟ್ಟಿದ್ದು ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 5,091 ಏರಿಕೆಯಾಗಿದೆ. ಬೆಂಗಳೂರಿನಲ್ಲಿ 154, ಬಳ್ಳಾರಿ 510, ಬೆಳಗಾವಿ 289, ಬೆಂಗಳೂರು ಗ್ರಾಮಾಂತರ 136, ಬೀದರ್ 42, ಚಾಮರಾಜನಗರ 51, ಚಿಕ್ಕಬಳ್ಳಾಪುರ 87, ಚಿಕ್ಕಮಗಳೂರು 97, ಚಿತ್ರದುರ್ಗ 78, ದಕ್ಷಿಣ ಕನ್ನಡ 314, ದಾವಣಗೆರೆ 233, ಧಾರವಾಡ 255, ಗದಗ 124, ಹಾಸನ 154, ಹಾವೇರಿ 164, ಕಲಬುರಗಿ 180, ಕೊಡಗು 11, ಕೋಲಾರ 88, ಕೊಪ್ಪಳ 158, ಮಂಡ್ಯ 155, ಮೈಸೂರು 951, ರಾಯಚೂರು 136, ರಾಮನಗರ 47, ಶಿವಮೊಗ್ಗ 146, ತುಮಕೂರು 88, ಉಡುಪಿ 251, ಉತ್ತರ ಕನ್ನಡ 129, ವಿಜಯಪುರ 131, ಯಾದಗಿರಿಯಲ್ಲಿ 102 ಪ್ರಕರಣ ದಾಖಲಾಗಿದೆ.