ಚಾಮರಾಜ ಕ್ಷೇತ್ರದಲ್ಲಿ 96.50 ಲಕ್ಷ ವೆಚ್ಚದ ವಿವಿಧ   ಅಭಿವೃದ್ಧಿ ಕಾಮಗಾರಿಗೆ ಶಾಸಕ ನಾಗೇಂದ್ರ ಚಾಲನೆ 
ಮೈಸೂರು

ಚಾಮರಾಜ ಕ್ಷೇತ್ರದಲ್ಲಿ 96.50 ಲಕ್ಷ ವೆಚ್ಚದ ವಿವಿಧ  ಅಭಿವೃದ್ಧಿ ಕಾಮಗಾರಿಗೆ ಶಾಸಕ ನಾಗೇಂದ್ರ ಚಾಲನೆ 

January 19, 2021

ಮೈಸೂರು, ಜ.18(ಆರ್‍ಕೆಬಿ)- ಚಾಮರಾಜ ಕ್ಷೇತ್ರ ವ್ಯಾಪ್ತಿಯ ವಿವಿಧೆಡೆ ನಗರಪಾಲಿಕೆ ಅನು ದಾನದಲ್ಲಿ ಒಟ್ಟು 96.50 ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಲ್. ನಾಗೇಂದ್ರ ಸೋಮವಾರ ಚಾಲನೆ ನೀಡಿದರು.

20ನೇ ವಾರ್ಡ್ ವ್ಯಾಪ್ತಿಯ ವಿಜಯನಗರ 1ನೇ ಹಂತದ 5ನೇ ಕ್ರಾಸ್‍ನಲ್ಲಿ ರೂ.19 ಲಕ್ಷ ರೂ. ವೆಚ್ಚದ ಒಳಚರಂಡಿ ಕಾಮಗಾರಿ, ವಿಜಯನಗರ 2ನೇ ಹಂತದ ಹೊಯ್ಸಳ ಸರ್ಕಲ್ ಬಳಿ ರೂ. 18.50 ಲಕ್ಷದ ಒಳಚರಂಡಿ ಕಾಮಗಾರಿ,  21ನೇ ವಾರ್ಡ್‍ನಲ್ಲಿ ಗಂಗೋತ್ರಿ ಬಡಾವಣೆಯ ಕುದುರೆಮಾಳದಲ್ಲಿ ಲೋಕೋಪಯೋಗಿ ಇಲಾಖೆಯ ವಿಶೇಷ ಘಟಕ ಯೋಜನೆಯಡಿ ರೂ.35 ಲಕ್ಷದ ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು.

ವಿಜಯನಗರ ಹಂಪಿ ಸರ್ಕಲ್ ಬಳಿಯ ಉದ್ಯಾನವನದಲ್ಲಿ 24 ಲಕ್ಷ ರೂ. ವೆಚ್ಚದಲ್ಲಿ ಜಿಮ್ ಸಲಕರಣೆ ಹಾಗೂ ಉದ್ಯಾನವನ ಅಭಿ ವೃದ್ಧಿಯ ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭದಲ್ಲಿ 20ನೇ ವಾರ್ಡ್ ಸದಸ್ಯ ಪಾಲಿಕೆ ವಿರೋಧಪಕ್ಷದ ನಾಯಕ ಎಂ.ಯು.ಸುಬ್ಬಯ್ಯ, 21ನೇ ವಾರ್ಡ್ ಸದಸ್ಯೆ ವೇದಾವತಿ, ವಿಜಯನಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನಾರಾಯಣ ಗೌಡ, ಕಾರ್ಯದರ್ಶಿ ಸುಧಾಕರಶೆಟ್ಟಿ, ಬಿಜೆಪಿ ಚಾಮರಾಜ ಕ್ಷೇತ್ರದ ಅಧ್ಯಕ್ಷ ಸೋಮಶೇಖರ ರಾಜು, ಉಪಾಧ್ಯಕ್ಷ ಸತೀಶ್, ಪ್ರಧಾನ ಕಾರ್ಯದರ್ಶಿ ಪುನೀತ್, ರಾಜ್ಯ ಹಿಂದುಳಿದ ವರ್ಗಗಳ ಸಮಿತಿಯ ನಂಜಪ್ಪ, ಮಹಿಳಾ ಮೋರ್ಚಾ ಅಧ್ಯಕ್ಷೆ ತನುಜಾ ಮಹೇಶ್, ಅನು, ಶುಭಾಮಣಿ, ಮಂಜುಳಾ, ಅವಿನಾಶ್, ದಶರಥ್, ಬಿಜೆಪಿ ಮುಖಂಡ ರಮೇಶ್, ಶಿವಶಂಕರ್, ಸುಬ್ರಹ್ಮಣ್ಯ, ದೇವರಾಜು, ನಟರಾಜು, ಮೀನಾಕ್ಷಿ, ಪಾಲಿಕೆ ವಲಯ ಸಹಾಯಕ ಆಯುಕ್ತ ಕೃಷ್ಣ, ಅಭಿವೃದ್ಧಿ ಅಧಿಕಾರಿ ಶ್ರೀಮನುಗೌಡ, ಸಹಾ ಯಕ ಇಂಜಿನಿಯರ್ ವಿನೋದ್ ಇತರರಿದ್ದರು.

 

 

Translate »