ಹನೂರು ಬಳಿ ಜೂಜು ಅಡ್ಡೆ ಮೇಲೆ ದಾಳಿ: 9 ಮಂದಿ ವಶಕ್ಕೆ
ಚಾಮರಾಜನಗರ

ಹನೂರು ಬಳಿ ಜೂಜು ಅಡ್ಡೆ ಮೇಲೆ ದಾಳಿ: 9 ಮಂದಿ ವಶಕ್ಕೆ

December 17, 2019

ಹನೂರು, ಡಿ.16- ಜಿಲ್ಲಾ ಅಪರಾಧ ದಳದ ಪೊಲೀಸರು ಜೂಜಾಟ ಅಡ್ಡೆಯ ಮೇಲೆ ದಾಳಿ ನಡೆಸಿ 9 ಜನ ಜೂಜುಕೋರ ರನ್ನು ಹಾಗೂ ನಗದು ಮತ್ತು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಹನೂರು ಪೊಲೀಸ್ ಠಾಣಾ ಸರಹದ್ದಿನ ಹುಲ್ಲೇಪುರ ತೋಟದ ಜಮೀನೊಂದರಲ್ಲಿ ರಾತ್ರಿ ವೇಳೆ ಇಸ್ಪೀಟ್ ಆಡುತ್ತಿದ್ದ ಹನೂರು ಪಟ್ಟಣ ಹಾಗೂ ಆರ್.ಎಸ್.ದೊಡ್ಡಿ 9 ಜನರನ್ನು ವಶಕ್ಕೆ ಪಡೆದು ಪಣಕ್ಕಿಟ್ಟಿದ್ದ 39165 ನಗದು ಮತ್ತು 5 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯುವಲ್ಲಿ ಜಿಲ್ಲಾ ಅಪ ರಾಧ ದಳದ ಪೊಲೀಸರು ಯಶಸ್ವಿಯಾಗಿದ್ದಾರೆ.

ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದ್‍ಕುಮಾರ್ ಮಾರ್ಗ ದರ್ಶನ ದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಹನೂರು ಪಟ್ಟಣದ ಹೊರ ವಲಯದಲ್ಲಿ ಇಸ್ಪೀಟ್ ಆಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಅಪರಾಧ ಪತ್ತೆದಳದ ಇನ್‍ಸ್ಪೇಕ್ಟರ್ ಮಹದೇವಶೆಟ್ಟಿ, ಎಎಸ್‍ಐ ಜಯಶಂಕರ್, ಮುಖ್ಯ ಪೇದೆಗಳಾದ ಸ್ವಾಮಿ, ಮಾದೇಶ್, ಸಿದ್ದಮಲ್ಲಶೆಟ್ಟಿ, ಸುರೇಶ್, ಪೇದೆಗಳಾದ ಕುಮಾರ್, ಪ್ರಸನ್ನಮೂರ್ತಿ, ಜೀಪ್ ಚಾಲಕ ಮಹೇಶ್ ಅವರುಗಳು ರೈತರಂತೆ ವೇಷ ಧರಿಸಿ ಜಮೀನಿನ ಕಾವಲು ಕಾಯುವ ರೈತರಂತೆ ನಟಿಸಿ ಇಸ್ಪೀಟ್ ಅಡ್ಡೆ ಮೇಲೆ ದಾಳಿ ನಡೆಸಿ 9 ಜನರನ್ನು ಬಂಧಿಸಿ, ನಗದು ಮತ್ತು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ನಂತರ ಹನೂರು ಪೊಲೀಸರು ಪ್ರಕರಣದ ದಾಖಲಿಸಿಕೊಂಡು ಕ್ರಮ ಜರುಗಿಸಿದ್ದಾರೆ.

Translate »