ಮೈಸೂರು,ಏ.12(ಎಸ್‍ಪಿಎನ್)-ಕಳೆದ ಮೂರ್ನಾಲ್ಕು ದಿನಗಳಿಂದ ಮೈಸೂರು ಜಿಲ್ಲೆಯಲ್ಲಿ ಮಳೆಯಾಗಿ ರುವುದರಿಂದ ಲಾಕ್‍ಡೌನ್ ನಡುವೆಯೂ ರೈತರು ಬಿತ್ತನೆ ಬೀಜ ಖರೀದಿಸಲಾರಂಭಿಸಿದ್ದಾರೆ.
ಹತ್ತಿಬೀಜ, ದ್ವಿದಳ ಧಾನ್ಯಗಳಾದ ಹಲಸಂದೆ, ಉದ್ದು, ಅವರೆಕಾಳು, ಹೆಸರು ಕಾಳು ಹಾಗೂ ಮೆಕ್ಕೆ ಜೋಳ ಮೊದಲಾದ ಧಾನ್ಯಗಳ ಬಿತ್ತನೆ ಬೀಜ ಗಳನ್ನು ಖರೀದಿಸುತ್ತಿದ್ದಾರೆ. ಹೋಬಳಿ ಮಟ್ಟದ ಸಬ್ ಡೀಲರ್‍ಗಳ ಮೂಲಕ ರೈತರಿಗೆ ಮಾರಾಟ ಮಾಡುತ್ತಿದ್ದೇವೆ ಎಂದು ಶ್ರೀ ಮಹದೇಶ್ವರ ಆಗ್ರೋ ಏಜೆನ್ಸೀಸ್ ಮಾಲೀಕ ಶಿವಕುಮಾರ್ `ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದರು. ಜಿಲ್ಲಾಡಳಿತದ ನಿರ್ದೇಶನದಂತೆ ಸಾಮಾಜಿಕ ಅಂತರ ಕಾಯ್ದು ಕೊಳ್ಳುತ್ತಿದ್ದೇವೆ ಎಂದರು.
ಲಾಕ್‍ಡೌನ್ ಇರುವುದರಿಂದ ರೈತರು ಮೈಸೂ ರಿಗೆ ಬರಲಾಗುತ್ತಿಲ್ಲ. ತಾಲೂಕು, ಹೋಬಳಿ ಸಬ್ ಡೀಲರ್‍ಗಳಿಗೆ ಮೈಸೂರಿಗೆ ಬಂದು ಹೋಗಲು ಜಿಲ್ಲಾಡಳಿತ ಪಾಸ್ ವಿತರಿಸಿದೆ. ನಮ್ಮಲ್ಲಿ ಎಷ್ಟು ದಾಸ್ತಾನು ಇದೆಯೋ ಅಷ್ಟನ್ನು ಮಾರಾಟ ಮಾಡು ತ್ತೇವೆ. ಏ.14ರ ನಂತರವೂ ಲಾಕ್‍ಡೌನ್ ಮುಂದು ವರೆದರೆ ಕೃಷಿ ಚಟುವಟಿಕೆಗಳಿಗೂ ಅದರ ಎಫೆಕ್ಟ್ ತಗಲಬಹುದು. ಲಾಕ್‍ಡೌನ್ ಇದ್ದರೂ ಕೃಷಿ ಚಟು ವಟಿಕೆಗಳಿಗೆ ತೊಂದರೆಯಾಗದು ಎಂದು ರಾಜ್ಯ ಸರ್ಕಾರ ಭರವಸೆ ನೀಡಿರುವುದರಿಂದ ರೈತರಿಗೆ ಬಿತ್ತನೆ ಚಟು ವಟಿಕೆ ನಡೆಸಲು ಸಮಸ್ಯೆಯಾಗದು ಎಂದರು.