ಹಸಿದ ನೂರಾರು ಬೀದಿನಾಯಿಗಳಿಗೆ ಆಹಾರ ಕಲ್ಪಿಸಿದ ಮಹಿಳೆಯರು
ಮೈಸೂರು

ಹಸಿದ ನೂರಾರು ಬೀದಿನಾಯಿಗಳಿಗೆ ಆಹಾರ ಕಲ್ಪಿಸಿದ ಮಹಿಳೆಯರು

April 13, 2020

ಮೈಸೂರು,ಏ.12(ಎಂಟಿವೈ)- ಲಾಕ್ ಡೌನ್‍ನಿಂದಾಗಿ ಹೋಟೆಲ್, ಫಾಸ್ಟ್ ಫುಡ್, ಅಂಗಡಿ ಮುಂಗಟ್ಟು ಎಲ್ಲವೂ ಬಂದ್ ಆಗಿದ್ದರಿಂದ ಮೈಸೂರಿನ ಬೀದಿ ನಾಯಿಗಳು ಆಹಾರವಿಲ್ಲದೇ ತತ್ತರಿಸಿ ಹೋಗಿವೆ. ಆಹಾರ ಅರಸಿ ಅಲೆಯುತ್ತಿವೆ…

ಎಲ್ಲೂ ಆಹಾರ ಸಿಗದೇ ನಿತ್ರಾಣಗೊಂಡಿ ರುವುದನ್ನು ಕಂಡ ಮೈಸೂರಿನ ಇಬ್ಬರು ಮಹಿಳೆಯರ ಮನ ಕರಗಿದೆ. ಅವರು 150ಕ್ಕೂ ಹೆಚ್ಚು ಬೀದಿನಾಯಿಗಳಿಗೆ ಆಹಾರ ಪೂರೈಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಹಿನಕಲ್ ಗ್ರಾಪಂ ಸದಸ್ಯೆ ನೇಹಾ ನೈನಾ, ವಿಜಯನಗರದ ಸುತ್ತಮುತ್ತ ಅಲೆಯುತ್ತಿದ್ದ ಬೀದಿನಾಯಿಗಳಿಗೆ ಆಹಾರ ನೀಡಲಾರಂಭಿ ಸಿದರೆ, ಇದನ್ನು ಗಮನಿಸಿದ ವಿಜಯನಗ ರದ ನಿವಾಸಿ ಗಾಯತ್ರಿದೇವಿ ಕೈಜೋಡಿಸಿ ದ್ದಾರೆ. ನಿತ್ಯ ಬೆಳಿಗ್ಗೆ-ಸಂಜೆ ನೇಹಾ ನೈನಾ ಹಾಗೂ ಗಾಯತ್ರಿದೇವಿ ಮನೆಯಲ್ಲೇ 5 ಕೆಜಿ ನುಚ್ಚಕ್ಕಿ ಅನ್ನ ಮಾಡಿ, ಅದಕ್ಕೆ ಐದಾರು ಮೊಟ್ಟೆ, 6 ಲೀ. ಹಾಲು, ಒಂದೂವರೆ ಕೆಜಿ ಪೆಡಿಗ್ರಿ ಮಿಶ್ರಣ ಮಾಡಿ ನಾಯಿಗಳಿಗೆ ಆಹಾರ ಸಿದ್ಧಪಡಿಸಿ ಅದನ್ನು ದೊಡ್ಡ ಕ್ಯಾನ್‍ಗೆ ತುಂಬಿ ಕೊಂಡು ವಿಜಯನಗರ ಮೊದಲ ಹಂತ, 2 ಮತ್ತು 4ನೇ ಹಂತ, ರಿಂಗ್‍ರಸ್ತೆ, ಬೋಗಾದಿ, ಹಿನಕಲ್, ಕೆಆರ್‍ಎಸ್ ರಸ್ತೆ, ಹೂಟಗಳ್ಳಿ ರಸ್ತೆ ಸೇರಿದಂತೆ ವಿವಿಧೆಡೆ ಬೀದಿನಾಯಿ ಗಳಿಗೆ ಆಹಾರ ಒದಗಿಸುತ್ತಿದ್ದಾರೆ. ಮಹಿಳೆಯ ರಿಬ್ಬರ ಈ ಕಾರ್ಯಕ್ಕೆ ಭಾರೀ ಪ್ರಶಂಸೆ ವ್ಯಕ್ತವಾ ಗಿದೆ. ಇವರಿಂದ ಪ್ರೇರಣೆಗೊಂಡ ಕೆಲವರು ತಮ್ಮ ಮನೆ ಮುಂದೆ ಓಡಾಡುವ ಬೀದಿಶ್ವಾನ ಗಳಿಗೆ ಆಹಾರ, ನೀರು ನೀಡಲಾರಂಭಿಸಿದ್ದಾರೆ.

Translate »