ಮೈಸೂರು, ಏ.12(ಆರ್‍ಕೆಬಿ)- ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ 58ನೇ ಪುಣ್ಯಸ್ಮರಣೆ ಅಂಗವಾಗಿ ಬಿಜೆಪಿ ಚಾಮುಂ ಡೇಶ್ವರಿ ನಗರ ಮಂಡಲ ಘಟಕದಿಂದ ಶಾರದಾದೇವಿ ನಗರ ವೃತ್ತದಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಚಾಮುಂಡೇಶ್ವರಿ ನಗರ ಮಂಡಲ ಅಧ್ಯಕ್ಷ ಬಿ.ಎಂ.ರಘು, ನಾಲ್ವಡಿ ಕೃಷ್ಣರಾಜ ಒಡೆ ಯರ್ ಅವರ ಪರಿಕಲ್ಪನೆಗೆ ಪುಷ್ಟಿ ನೀಡಿದ ಯಂತ್ರ ಋಷಿ ವಿಶ್ವೇಶ್ವರಯ್ಯ ಅವರು ಶಿಕ್ಷಣ, ನೀರಾವರಿ, ಕೃಷಿ, ವಾಣಿಜ್ಯ, ಕೈಗಾರಿಕೋ ದ್ಯಮ, ಕಾರ್ಖಾನೆ, ವಿದ್ಯುತ್ ಸ್ಥಾವರ, ಕನ್ನಡ ಭಾಷಾ ಕೊಡುಗೆ ಸೇರಿದಂತೆ ನಾನಾ ಕ್ಷೇತ್ರ ಗಳಲ್ಲಿ ಅಭಿವೃದ್ಧಿ ಮಾಡಿದ್ದಾರೆ ಎಂದರು.
ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯ ಜನ ಪ್ರತಿನಿಧಿಗಳಿಗೆ ವಿಶ್ವೇಶ್ವರಯ್ಯ ಅವರ ಆಡ ಳಿತ ಸೇವೆ ಮಾದರಿಯಾಗಿದೆ. ದೇಶ-ವಿದೇಶ ಗಳಿಂದ ಆಗಮಿಸುವ ಪ್ರವಾಸಿಗರು ಮೈಸೂ ರಿನ ಸೌಂದರ್ಯವನ್ನು ಕಣ್ತುಂಬಿಕೊಂಡು ಇದರ ಹಿಂದಿನ ಶಿಲ್ಪಿಗಳು ಯಾರೆಂದು ಚಿಂತಿಸುತ್ತಾರೆ. ಹೀಗಾಗಿ ಮೈಸೂರು, ಮಂಡ್ಯ ಭಾಗದ ಪ್ರತಿಯೊಂದು ಮನೆಯಲ್ಲೂ ಸರ್.ಎಂವಿ ಭಾವಚಿತ್ರ ಇರಿಸಿ, ಅನ್ನದಾತ ಪ್ರಭುವನ್ನು ಸ್ಮರಿಸುವುದು ಅಗತ್ಯ ಎಂದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯ ದರ್ಶಿ ಹೆಚ್.ಜಿ.ರಾಜಮಣಿ, ಈರೇಗೌಡ, ಕಾರ್ಯದರ್ಶಿ ಬಿ.ಸಿ.ಶಶಿಕಾಂತ್, ನಾಗರಾಜ್, ಮಹಿಳಾ ಮೋರ್ಚಾ ಅಧ್ಯಕ್ಷೆ ಶುಭಶ್ರೀ, ರಮಾಬಾಯಿ, ಪೂರ್ಣಿಮಾ ಕಾಮತ್, ಯುವ ಮೋರ್ಚಾ ಉಪಾಧ್ಯಕ್ಷ ಅಭಿ ಷೇಕ್ ಗೌಡ, ಸಿದ್ದಪ್ಪ, ಸಾಗರ್ ರಾಜಪುತ್ ಇನ್ನಿತರರು ಉಪಸ್ಥಿತರಿದ್ದರು.