ಎಂಕೆಎಸ್ 25ನೇ ದಿನದ ಸೇವಾಕಾರ್ಯ: ಜಯನಗರ ಆಸ್ಪತ್ರೆ ಒಳ ರೋಗಿಗಳಿಗೆ ಊಟ
ಮೈಸೂರು

ಎಂಕೆಎಸ್ 25ನೇ ದಿನದ ಸೇವಾಕಾರ್ಯ: ಜಯನಗರ ಆಸ್ಪತ್ರೆ ಒಳ ರೋಗಿಗಳಿಗೆ ಊಟ

April 19, 2020

ಮೈಸೂರು,ಏ.18(ಎಂಟಿವೈ)- ಲಾಕ್‍ಡೌನ್‍ನಿಂ ದಾಗಿ ಸಂತ್ರಸ್ತರಾದವರಿಗೆ ಆಹಾರ ಒದಗಿಸುತ್ತಿರುವ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಶನಿವಾರ ಜಯನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿನ ರೋಗಿಗಳಿಗೆ ಮಧ್ಯಾಹ್ನದ ಊಟ ಪೂರೈಸಿದರು.

ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಲಾಕ್‍ಡೌನ್ ಮಾಡಿದ ಪರಿಣಾಮ ಮೈಸೂ ರಿನ ವಿವಿಧೆಡೆ ಸಂಕಷ್ಟಕ್ಕೆ ಸಿಲುಕಿದವರಿಗೆ ಆಹಾರ ಪೂರೈ ಸುವ ನಿಟ್ಟಿನಲ್ಲಿ ಮಾಜಿ ಶಾಸಕ ಎಂ.ಕೆ.ಸೋಮ ಶೇಖರ್ ಕಾರ್ಯಕ್ರಮ ರೂಪಿಸಿದ್ದು, ಸೇವಾ ಕಾರ್ಯದ 25ನೇ ದಿನವಾದ ಇಂದು ಜಯನಗರದ ಸಮುದಾಯ ಆರೋಗ್ಯ ಕೇಂದ್ರದ ಒಳ ರೋಗಿಗಳು ಹಾಗೂ ವಿವಿಧೆಡೆ ಭದ್ರತಾ ಸೇವಾ ನಿರತರು ಹಾಗೂ ನಿರಾಶ್ರಿತರಿಗೆ ಆಹಾರದ ಕಂಟೇನರ್ ವಿತರಿಸಿದರು.

ಈ ವೇಳೆ ಎಂ.ಕೆ.ಸೋಮಶೇಖರ್ ಮಾತನಾಡಿ, ಲಾಕ್‍ಡೌನ್ ಆದ ದಿನದಿಂದಲೂ ಸಂತ್ರಸ್ತರಿಗೆ ಆಹಾರ ಪೂರೈಸುವ ಸೇವೆ ನಡೆಸುತ್ತಿದ್ದೇವೆ. ಚಿಕ್ಕಮ್ಮಾನಿಕೇತನ ಕಲ್ಯಾಣ ಮಂಟಪದಲ್ಲಿ ಸಂತ್ರಸ್ತರು ಹಾಗೂ ಸೇವಾ ನಿರತರಿಗೆ ಸ್ವಚ್ಛತೆ ಕಾಪಾಡಿಕೊಂಡು ಆಹಾರ ತಯಾರಿ ಸಲಾಗುತ್ತಿದೆ. ಒಬ್ಬ ವ್ಯಕ್ತಿಗೆ ಹಸಿವು ತಣಿಸಲು ಅಗತ್ಯವಿರು ವಷ್ಟು ಆಹಾರವನ್ನು ಕಂಟೇನರ್‍ನಲ್ಲಿ ಪ್ಯಾಕ್ ಮಾಡಿ ವಿವಿಧೆಡೆ ಸರಬರಾಜು ಮಾಡಲಾಗುತ್ತಿದೆ ಎಂದರು.

25ನೇ ದಿನದ ಈ ಸೇವಾ ಕಾರ್ಯಕ್ಕೆ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದ ರೈತ ಬೋರೇ ಗೌಡ ಎಂಬುವವರು ತಾವು ಬೆಳೆದ 4 ಸಾವಿರ ಸೌತೇ ಕಾಯಿಯನ್ನು ತಂದು ನಮ್ಮೊಂದಿಗೆ ಜಯನಗರದ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಹಾಗೂ ರೋಗಿಗಳಿಗೆ ವಿತರಿ ಸಿದರು. ಲಾಕ್‍ಡೌನ್ ಮುಗಿಯುವವರೆಗೂ ಸಂತ್ರಸ್ತರು ಹಾಗೂ ಸೇವಾ ನಿರತರಿಗೆ ಆಹಾರ ಪೂರೈಸುವ ಪುಣ್ಯದ ಕೆಲಸವನ್ನು ಮಾಡುತ್ತೇವೆ ಎಂದರು.

ಜನರು ಲಾಕ್‍ಡೌನ್ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಜಿಲ್ಲಾಡಳಿತಕ್ಕೆ ಸಹಕಾರ ನೀಡ ಬೇಕು. ಈಗಾಗಲೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ನೋಡಿದರೂ ಜನರು ಮಾತ್ರ ಮನೆಯಿಂದ ಹೊರಗೆ ಬರುವುದನ್ನು ನಿಲ್ಲಿಸುತ್ತಿಲ್ಲ. ವೈರಾಣು ಹರಡುವುದನ್ನು ತಡೆಗಟ್ಟಲು ಜನ ಸಂಚಾರ ನಿರ್ಬಂಧಿಸುವುದು ಅನಿವಾರ್ಯ. ಮೈಸೂರಲ್ಲಿ ಟ್ರಾವೆಲ್ ಹಿಸ್ಟರಿ ಇಲ್ಲದವರಿಗೂ ಸೋಂಕು ದೃಢ ಪಟ್ಟಿದೆ. ಇನ್ನಾದರೂ ಜನತೆ ಮನೆಯಿಂದ ಅನಗತ್ಯ ವಾಗಿ ಹೊರಗೆ ಬರುವುದನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಜಯ ನಗರ ಸಮುದಾಯ ಆರೋಗ್ಯ ಕೇಂದ್ರದ ಆಡಳಿ ತಾಧಿಕಾರಿ ಡಾ.ರಘು, ಕಾಂಗ್ರೆಸ್ ಮುಖಂಡರಾದ ಸಿದ್ದು, ವಿಶ್ವ, ಜೈಅರ್ಜುನ್ ಉಪಸ್ಥಿತರಿದ್ದರು.

Translate »