ಪೊಲೀಸರಿಂದ ಹಲ್ಲೆ: ಸುದ್ದಿವಾಹಿನಿ ವರದಿಗಾರ ಆರೋಪ
ಮೈಸೂರು

ಪೊಲೀಸರಿಂದ ಹಲ್ಲೆ: ಸುದ್ದಿವಾಹಿನಿ ವರದಿಗಾರ ಆರೋಪ

April 19, 2020

ಮೈಸೂರು,ಮಾ.18(ವೈಡಿಎಸ್)- ಮೈಸೂರಿನಲ್ಲಿ ಶನಿವಾರ ವರದಿಗೆ ತೆರಳುತ್ತಿದ್ದ ಸ್ಥಳೀಯ ಚಾನಲ್ ವರದಿಗಾರರೊಬ್ಬರನ್ನು ಪೊಲೀಸ್ ಪೇದೆಯೊಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ. `ನಾನು ಶನಿವಾರ ಮಧ್ಯಾಹ್ನ ಕರ್ತವ್ಯದ ಮೇಲೆ ಕುವೆಂಪು ನಗರದ ಜ್ಞಾನಗಂಗಾ ಶಾಲೆ ಬಳಿ ಸ್ಕೂಟರ್‍ನಲ್ಲಿ ಹೋಗುತ್ತಿ ದ್ದಾಗ ಪೊಲೀಸ್ ಪೇದೆಯೊಬ್ಬರು ತಡೆದರು. `ನಾನು ಪತ್ರಕರ್ತ’ ಎಂದು ಹೇಳಿದರೂ ಕೇಳಿಸಿಕೊಳ್ಳದ ಪೇದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಲಾಠಿ ಯಿಂದ ಹೊಡೆದರು. ಅಲ್ಲದೇ ಠಾಣೆಗೆ ಕರೆದುಕೊಂಡು ಹೋಗಿ 3 ಗಂಟೆಗಳ ಕಾಲ ಕೂರಿಸಿಕೊಂಡಿದ್ದರು’ ಎಂದು ಸುದ್ದಿವಾಹಿನಿಯೊಂದರ ವರದಿಗಾರ ಯಶಸ್ ಮಾವತ್ತೂರ್ ಆರೋಪಿಸಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಧ್ಯಮದವರು ಕರ್ತವ್ಯ ನಿರ್ವ ಹಿಸಲು ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ನಿರ್ದೇಶನ ನೀಡಿವೆ. ಜತೆಗೆ ಪೊಲೀಸ್ ಆಯುಕ್ತರು ಸಹ ಆದೇಶ ಹೊರಡಿಸಿದ್ದಾರೆ. ಆದರೂ ಪೆÇಲೀಸರು ಹೀಗೆ ದುಂಡಾವರ್ತನೆ ತೋರಿರುವುದು ಖಂಡ ನೀಯ ಎಂದಿರುವ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ, ತಪ್ಪಿತಸ್ಥ ಪೇದೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೆÇಲೀಸ್ ಆಯುಕ್ತರನ್ನು ಆಗ್ರಹಿಸಿದೆ.

ಪತ್ರಕರ್ತನ ಮೇಲೆ ಪೊಲೀಸರು ಹಲ್ಲೆ ನಡೆಸಿದ ವಿಚಾರದಲ್ಲಿ ಬೇರೆ ಯವರು ಪರಿಸ್ಥಿತಿಯ ಲಾಭ ಪಡೆಯುವುದು ಬೇಡ. ನಿರ್ದಿಷ್ಟ ಘಟನೆಗೆ ನಮ್ಮ ಖಂಡನೆ ಇದೆ. ಈ ಘಟನೆಯನ್ನು ದುರುಪಯೋಗಪಡಿಸಿಕೊಂಡು ಎಲ್ಲ ಪೆÇಲೀಸರ ನೈತಿಕ ಬಲ ಕುಗ್ಗಿಸುವ ಕೆಲಸವಾಗಬಾರದು. ಪೆÇಲೀಸ್ ಇಲಾಖೆ ಬಗ್ಗೆ ನಮಗೆ ಗೌರವವಿದೆ. ಎಲ್ಲ ಪೊಲೀಸರನ್ನೂ ದೂಷಿಸುವುದು ಸಲ್ಲ ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಧ್ಯಮ ವನ್ನು ಅಗತ್ಯ ಸೇವೆಗಳಲ್ಲಿ ಒಂದು ಎಂದು ಪರಿಗಣಿಸಿವೆ. ಕೊರೊನಾ ಹಾವಳಿ ಸಂದರ್ಭದಲ್ಲೂ ಪತ್ರಕರ್ತರು ಜೀವದ ಹಂಗು ತೊರೆದು ಕಾರ್ಯನಿರ್ವ ಹಿಸುತ್ತಿದ್ದಾರೆ. ಅವರ ಕೆಲಸಕ್ಕೆ ಪೊಲೀಸರು ಸಹಕಾರ ನೀಡಬೇಕೇ ಹೊರತು ಹಲ್ಲೆ ನಡೆಸಿರುವುದು ಸರಿಯಲ್ಲ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇನೆ. ಸತ್ಯಾಸತ್ಯತೆ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಿ ಎಂದು ಪೆÇಲೀಸ್ ಆಯುಕ್ತರಿಗೆ ಸೂಚಿಸಿದ್ದೇನೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Translate »