ವಿಜಯ ವಿಠಲ ವಿದ್ಯಾಸಂಸ್ಥೆ ವತಿಯಿಂದ ಕೋವಿಡ್-19 ಪರಿಹಾರ ನಿಧಿಗೆ 20 ಲಕ್ಷ ರೂ. ನೆರವು
ಮೈಸೂರು

ವಿಜಯ ವಿಠಲ ವಿದ್ಯಾಸಂಸ್ಥೆ ವತಿಯಿಂದ ಕೋವಿಡ್-19 ಪರಿಹಾರ ನಿಧಿಗೆ 20 ಲಕ್ಷ ರೂ. ನೆರವು

April 19, 2020

ಮೈಸೂರು,ಏ.18-ಉಡುಪಿಯ ಪೇಜಾವರ ಅಧೋಕ್ಷಜ ಮಠವು ಮೈಸೂರಿನಲ್ಲಿ ನಡೆಸುತ್ತಿ ರುವ ಶ್ರೀ ವಿಜಯ ವಿಠಲ ವಿದ್ಯಾಸಂಸ್ಥೆಗಳ ಅಧ್ಯಕ್ಷ ರಾದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರ ಮಾರ್ಗದರ್ಶನ ದಲ್ಲಿ ಕೊರೊನಾ ಪೀಡಿತರ ಚಿಕಿತ್ಸೆ ಗಾಗಿ ಪ್ರಧಾನಮಂತ್ರಿ ಗಳು ಪ್ರಾರಂಭಿಸಿ ರುವ ಪಿ.ಎಂ. ಕೇರ್ ನಿಧಿಗೆ ಮತ್ತು ಮುಖ್ಯ ಮಂತ್ರಿಗಳ ಪರಿ ಹಾರ ನಿಧಿಗೆ ತಲಾ ರೂ. 10,00,000/- (ಹತ್ತು ಲಕ್ಷ)ಗಳ ದೇಣಿಗೆ ಯನ್ನು ವಿಜಯ ವಿಠಲ ವಿದ್ಯಾಸಂಸ್ಥೆಯವರು ನೀಡಿದ್ದಾರೆ. ಇದರಲ್ಲಿ ಅಧ್ಯಾಪಕ/ಅಧ್ಯಾಪಕೇ ತರ ವೃಂದದವರ ಎರಡು ದಿನಗಳ ವೇತನವು ಸೇರಿದೆ. ಎರಡೂ ಪರಿಹಾರ ನಿಧಿಗಳಿಗೆ ತಲಾ ರೂ. 10,00,000 ರೂ. (ಹತ್ತು ಲಕ್ಷ) ಗಳನ್ನು (ಒಟ್ಟು 20,00,000/- ಇಪ್ಪತ್ತು ಲಕ್ಷ) ವರ್ಗಾ ವಣೆ ಮಾಡಲಾಗಿದೆ ಎಂದು ವಿಜಯ ವಿಠಲ ವಿದ್ಯಾ ಸಂಸ್ಥೆಗಳ ಗೌರವ ಕಾರ್ಯದರ್ಶಿ ಆರ್.ವಾಸು ದೇವಭಟ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »