ಲಂಡನ್: ಕೊರೊನಾ ವೈರಸ್ ಸೋಂಕಿಗೆ ಸೂಕ್ತ ಲಸಿಕೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಆಕ್ಸ್‍ಫರ್ಡ್ ಯೂನಿವರ್ಸಿಟಿ ಕಾರ್ಯಾಚರಿಸುತ್ತಿದ್ದು, ಯುನೈಟೆಡ್ ಕಿಂಗ್‍ಡಮ್ ಸರ್ಕಾರವು 2 ಕೋಟಿ ಪೌಂಡ್‍ಗಳ (ಸುಮಾರು 189 ಕೋಟಿ) ಸಹಕಾರ ನೀಡುವುದಾಗಿ ಮಂಗಳವಾರ ಘೋಷಿಸಿದೆ. ಆಕ್ಸ್‍ಫರ್ಡ್ ಯೂನಿವರ್ಸಿಟಿಯ ಸಂಶೋ ಧಕರು ಕೋವಿಡ್-19ಗೆ ಚಿಕಿತ್ಸೆ ನೀಡಲು ಲಸಿಕೆ ಕಂಡು ಕೊಂಡಿದ್ದಾರೆ. ಸಾರ್ಸ್‍ಕೋವ್-2 ವೈರಸ್ ಸೋಂಕಿ ನಿಂದ ಉಂಟಾಗುವ ರೋಗಕ್ಕೆ ಲಸಿಕೆ ಅಭಿವೃದ್ಧಿಪಡಿಸಿ ರುವುದಾಗಿ ಪೆÇ್ರಫೆಸರ್ ಸರಾಹ್ ಗಿಲ್ಬರ್ಟ್ ಹೇಳಿದ್ದಾರೆ. ಸೆಪ್ಟೆಂಬರ್‍ನಲ್ಲಿ ಲಸಿಕೆ ಮಾರುಕಟ್ಟೆಗೆ ಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಗುರುವಾರದಿಂದ (ಏಪ್ರಿಲ್ 23) ಮನುಷ್ಯರ ಮೇಲೆ ಲಸಿಕೆ ಪ್ರಯೋಗಿಸಲು ಆಕ್ಸ್‍ಫರ್ಡ್ ಸಂಶೋಧಕರು ನಿರ್ಧರಿಸಿದ್ದಾರೆ. ಕೋವಿಡ್-19 ಸಾಂಕ್ರಾ ಮಿಕದ ವಿರುದ್ಧ ಹೋರಾಟಕ್ಕೆ ಲಸಿಕೆ ಕಂಡುಕೊಳ್ಳು ವುದು ಅತ್ಯಗತ್ಯವಾಗಿದೆ. ಅದಕ್ಕಾಗಿ ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸುತ್ತಿರುವುದಾಗಿ ಯುಕೆ ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹ್ಯಾನ್‍ಕಾಕ್ ಹೇಳಿದ್ದಾರೆ.
ಲಂಡನ್‍ನ ಇಂಪೀರಿಯಲ್ ಕಾಲೇಜ್ ನಡೆಸುತ್ತಿ ರುವ ಪ್ರಯೋಗಗಳಿಗೂ 2.25 ಕೋಟಿ ಪೌಂಡ್ಸ್ ಸಹಕಾರ ನೀಡು ವುದಾಗಿ ತಿಳಿಸಿದ್ದಾರೆ. ಎರಡನೇ ಹಂತದ ಚಿಕಿತ್ಸೆಯ ಪ್ರಯತ್ನಗಳಿಗೆ ಇದು ಸಹಕಾರಿಯಾಗಲಿದ್ದು, ಮೂರನೇ ಹಂತದ ಪ್ರಯೋಗಗಳಿಗೆ ತೆರೆದುಕೊಳ್ಳಲು ಅನುವು ಮಾಡಿಕೊಡಲಿದೆ ಎಂದಿದ್ದಾರೆ.
ಸಾಮಾನ್ಯವಾಗಿ ಪ್ರಯೋಗಗಳಲ್ಲಿ ಈ ಹಂತವನ್ನು ತಲುಪಲು ವರ್ಷಗಳೇ ಹಿಡಿಯುತ್ತದೆ ಎಂದು ಹ್ಯಾನ್ ಕಾಕ್ ಹೇಳಿದ್ದಾರೆ.
‘ಲಸಿಕೆ ಅಭಿವೃದ್ಧಿಪಡಿಸುವ ಜಾಗತಿಕ ಹುಡುಕಾಟ ದಲ್ಲಿ ಯುಕೆ ಮುಂಚೂಣಿಯಲ್ಲಿದ್ದು, ಇತರ ರಿಗಿಂತ ಅತೀ ಹೆಚ್ಚು ಹಣವನ್ನು ಮೀಸಲಿಡುತ್ತಿದ್ದೇವೆ. ಲಸಿಕೆ ಲಭಿಸುವುದು ಹಲವು ಪ್ರಯತ್ನಗಳಿಂದಲೇ ನಡೆಯ ಬೇಕಾದುದು. ಅದನ್ನು ಗೊತ್ತು ಪಡಿಸಿಕೊಳ್ಳಲು ಸರ್ಕಾರ ಎಲ್ಲ ರೀತಿಯ ಪ್ರಯತ್ನಗಳನ್ನೂ ನಡೆಸುತ್ತದೆ’ ಎಂದಿ ದ್ದಾರೆ. ಬ್ರಿಟನ್‍ನಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಮಂಗಳವಾರ ಒಂದೇ ದಿನ 823 ಮಂದಿ ಸಾವಿಗೀಡಾ ಗಿದ್ದು, ಮೃತಪಟ್ಟವರ ಒಟ್ಟು ಸಂಖ್ಯೆ 17,337 ತಲುಪಿದೆ.