ಏ.26ರವರೆಗೆ ಮೋಡ ಕವಿದ ವಾತಾವರಣ, ಸಾಧಾರಣ ಮಳೆ
ಮೈಸೂರು

ಏ.26ರವರೆಗೆ ಮೋಡ ಕವಿದ ವಾತಾವರಣ, ಸಾಧಾರಣ ಮಳೆ

April 23, 2020

ಮೈಸೂರು, ಏ.22(ಆರ್‍ಕೆಬಿ)- ಮೈಸೂರು, ಚಾಮರಾಜನಗರ, ಕೊಡಗು, ಮಂಡ್ಯ ಜಿಲ್ಲೆಗಳಲ್ಲಿ ಏ.26ರವರೆಗೂ ಮೋಡ ಕವಿದ ವಾತಾವರಣವಿದ್ದು, ತುಂತುರು ಅಥವಾ ಸಾಧಾರಣ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾ ಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈ ಅವಧಿಯಲ್ಲಿ ಮೈಸೂರಿನಲ್ಲಿ ಗರಿಷ್ಠ ಉಷ್ಣಾಂಶ 34ರಿಂದ 36 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 24-25 ಡಿಗ್ರಿ ಸೆಲ್ಸಿಯಸ್, ಚಾಮರಾಜನಗರ ಜಿಲ್ಲೆಯಲ್ಲಿ ಗರಿಷ್ಠ 36, ಕನಿಷ್ಠ 24-25, ಕೊಡಗು ಜಿಲ್ಲೆಯಲ್ಲಿ ಗರಿಷ್ಠ 29-31, ಕನಿಷ್ಠ 19, ಮಂಡ್ಯ ಜಿಲ್ಲೆಯಲ್ಲಿ ಗರಿಷ್ಠ 35-36, ಕನಿಷ್ಠ 23-25 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಲಿದೆ ಎಂದು ನಾಗನಹಳ್ಳಿ ಕೃಷಿ ಹವಾಮಾನ ಕ್ಷೇತ್ರ ವಿಭಾಗದ ಅಧಿಕಾರಿಗಳು `ಮೈಸೂರು ಮಿತ್ರ’ನಿಗೆ ಬುಧವಾರ ತಿಳಿಸಿದ್ದಾರೆ.

ಉತ್ತಮ ಮಳೆ ಸಾಧ್ಯತೆ ಇರುವುದರಿಂದ ಬದುಗಳ ಸುತ್ತ ಮೇವಿನ ಹುಲ್ಲಿನ ಬೀಜ ಗಳನ್ನು ಬಿತ್ತನೆ ಮಾಡಿದರೆ ಬದುಗಳು ಭದ್ರವಾಗಿರುತ್ತವೆ ಮತ್ತು ಜಮೀನುಗಳಲ್ಲಿ ನೀರಿನ ತೇವಾಂಶವನ್ನು ಕಾಪಾಡುತ್ತದೆ ಎಂದೂ ಕೃಷಿಕರಿಗೆ ಸಲಹೆ ನೀಡಿದ್ದಾರೆ.

ಮಾವು ಬೆಳೆಗಾರರಿಗೆ: ಮಾವು ಬೆಳೆಯಲ್ಲಿ ಕಾಯಿ ಉದುರುವುದು ಕಂಡು ಬಂದಿದೆ. ಮಾವಿನ ಬೆಳೆ ಕಾಯಿಕಟ್ಟುವ (ಗೊಟ್ಟಿ ಹಂತ) ಹಂತದಲ್ಲಿದ್ದು, ನೀರಿನ ಅನು ಕೂಲ ಹೆಚ್ಚಿರುವ ರೈತರು ಕಾಯಿ ಕಟ್ಟುವ ಹಂತದಿಂದ ಮಾಗುವವರೆಗೆ 15-20 ದಿನಗಳಿಗೊಮ್ಮೆ ನೀರುಣಿಸಬೇಕು. ಮಾವಿನ ಕಾಯಿ ಉದುರುವುದನ್ನು ತಡೆಗಟ್ಟಲು ನ್ಯಾಪ್ತ ಲಿನ್ ಅಸಿಟಿಕ್ ಆಸಿಡ್ 20 ಪಿಪಿಎಂ ದ್ರಾವಣವನ್ನು 15 ದಿನಗಳಿಗೊಮ್ಮೆ 2 ಬಾರಿ ಕೊಡಬೇಕು ಎಂದು ರೈತರಿಗೆ ಸೂಚನೆ ನೀಡಿದ್ದಾರೆ. ಕೊರೊನಾ ವೈರಸ್ ನಿಯಂ ತ್ರಣಕ್ಕಾಗಿ ರೈತರು ವಿಶ್ರಾಂತಿ ಸಮಯ ದಲ್ಲಿ, ಆಹಾರ ಸೇವನೆ ಸಂದರ್ಭ, PೃÀಷಿ ಉತ್ಪನ್ನ ಸಂಗ್ರಹಿಸುವಾಗ, ಇಳಿಸುವಾಗ, ಹೊತ್ತೊಯ್ದು ಅಡಕಿಸುವಾಗ ಹೀಗೆ ಪ್ರತಿ ಹಂತದಲ್ಲೂ ಸುರಕ್ಷತಾ ದೃಷ್ಟಿಯಿಂದ ವ್ಯಕ್ತಿಯಿಂದ ವ್ಯಕ್ತಿಗೆ 3-4 ಅಡಿಗಳ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಗಮನ ಸೆಳೆದಿದ್ದಾರೆ.

ಈ ಬಾರಿ ನೈಋತ್ಯ ಮುಂಗಾರು ಮಾರುತ ಗಳು ಸಾಮಾನ್ಯವಾಗಿದ್ದು, ಜೂನ್‍ನಿಂದ ಸೆಪ್ಟೆಂಬರ್ ಅವಧಿಯಲ್ಲಿ ವಾಡಿಕೆಯಂತೆ ಸಾಮಾನ್ಯ ಮಳೆ (ಶೇ.94ರಿಂದ 100) ಸುರಿಯುವ ನಿರೀಕ್ಷೆ ಇದೆ ಎಂದು ಹವಾ ಮಾನ ಮುನ್ಸೂಚನಾ ಇಲಾಖೆ ತಿಳಿಸಿದೆ.

`ಮೇಘದೂತ್’ ಆ್ಯಪ್

ಭಾರತೀಯ ಹವಾಮಾನ ಇಲಾಖೆ ಮತ್ತು ಭಾರತೀಯ ಕೃಷಿ ಅನುಸಂಧಾನ ಪರಿ ಷತ್ ಜಂಟಿಯಾಗಿ ಹವಾಮಾನ ಆಧಾರಿತ ಕೃಷಿ ಚಟುವಟಿಕೆಗಳ ಬಗ್ಗೆ ರೈತರಿಗೆ ಸ್ಥಳೀಯ ಭಾಷೆಯಲ್ಲಿಯೇ ಮಾಹಿತಿ ಒದಗಿಸಲಿದ್ದು, ಅದಕ್ಕಾಗಿ ಕೇಂದ್ರ ಭೂ ವಿಜ್ಞಾನ ಸಚಿವಾಲಯದ ನೆರವಿನೊಂ ದಿಗೆ `ಮೇಘಧೂತ್’ ಆ್ಯಪ್ ಅಭಿವೃದ್ಧಿಪಡಿ ಸಿವೆ. ರೈತರು ಈ ಆ್ಯಪ್ ಅನ್ನು ಗೂಗಲ್ ಪ್ಲೇಸ್ಟೋರ್‍ನಿಂದ ಸ್ಮಾರ್ಟ್‍ಫೋನ್‍ಗೆ ಡೌನ್‍ಲೋಡ್ ಮಾಡಿಕೊಂಡರೆ ಹವಾ ಮಾನಕ್ಕೆ ಅನುಗುಣವಾಗಿ ಬೆಳೆಗಳ ಹಾಗೂ ಕೃಷಿ ಚಟುವಟಿಕೆಗಳ ಬಗ್ಗೆ ಕ್ಷಣಾರ್ಧದಲ್ಲಿ ಮಾಹಿತಿ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಹಿರಿಯ ಕ್ಷೇತ್ರ ಅಧೀಕ್ಷಕ ಪಿ. ಪ್ರಕಾಶ್, ಸಹ ಸಂಶೋಧಕ ಎನ್. ನರೇಂದ್ರಬಾಬು (ದೂ: 9449869914, 0821-2591267, 93435 32154) ಸಂಪರ್ಕಿಸಬಹುದು.

Translate »