ಗಿಡನೆಟ್ಟು ವಿಶ್ವಭೂಮಿ ದಿನ ಆಚರಿಸಿದ ವಿಜಯೇಂದ್ರ ಬಳಗ
ಮೈಸೂರು

ಗಿಡನೆಟ್ಟು ವಿಶ್ವಭೂಮಿ ದಿನ ಆಚರಿಸಿದ ವಿಜಯೇಂದ್ರ ಬಳಗ

April 23, 2020

ಮೈಸೂರು,ಏ.22(ಪಿಎಂ) ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯ ದರ್ಶಿ ಬಿ.ವೈ. ವಿಜಯೇಂದ್ರ ಅಭಿಮಾನಿ ಬಳಗ ದಿಂದ ಬುಧವಾರ `ವಿಶ್ವಭೂಮಿ ದಿನ’ ಅಂಗ ವಾಗಿ ವಿವಿಧ ಜಾತಿ ಗಿಡಗಳನ್ನು ಮೈಸೂರಿ ನಲ್ಲಿ ರಸ್ತೆಬದಿ ನೆಡಲಾಯಿತು.

ಜಯನಗರದ (ಮಳಲವಾಡಿ) ನ್ಯಾಯಾ ಲಯ ಸಂಕೀರ್ಣದ ಬಳಿ ಗಿಡ ನೆಡುವ ವೇಳೆ ಮಾತನಾಡಿದ ಮೈಸೂರು ತಾಪಂ ಮಾಜಿ ಅಧ್ಯಕ್ಷ, ಬಳಗದ ಸಂಚಾಲಕ ಎಲ್. ಆರ್.ಮಹದೇವಸ್ವಾಮಿ, ವಿಶ್ವಭೂಮಿ ದಿನ ದಂಗವಾಗಿ ಬಳಗ ದಿಂದ ರಸ್ತೆಬದಿಯಲ್ಲಿ ಸಾಂಕೇತಿಕವಾಗಿ ಗಿಡ ನೆಡುತ್ತಿದ್ದೇವೆ. ವಿವಿಧ ಜಾತಿಯ 500ಕ್ಕೂ ಹೆಚ್ಚು ಗಿಡಗಳನ್ನು ಮನೆ ಮನೆಗೆ ವಿತರಿಸುತ್ತಿದ್ದೇವೆ ಎಂದರು. ಹೆಚ್ಚು ಗಿಡಗಳನ್ನು ನೆಟ್ಟು ಉತ್ತಮ ಪರಿಸರ ಹಾಗೂ ಸ್ವಚ್ಛತೆ ಕಾಯ್ದು ಕೊಂಡರೆ ಕೊರೊನಾ ಸೇರಿದಂತೆ ಎಲ್ಲಾ ರೋಗ-ರುಜಿನ ದೂರ ಮಾಡಬಹುದು. ಭೂಮಿಯ ಉಳಿವಿಗೆ ಪರಿಸರ ಕಾಪಾಡಬೇಕು ಎಂದರು.

ಮಾನವನ ದುರಾಸೆಗೆ ಗಿಡ-ಮರ ಬಲಿ ಯಾಗಿ ಪರಿಸರ ಸಮತೋಲನ ಕಳೆದುಕೊಂ ಡಿದೆ. ಕೃಷಿಯಲ್ಲಿ ಇಳುವರಿ ಹೆಚ್ಚಿಸಿಕೊಳ್ಳುವ ಸಲುವಾಗಿ ಬೆಳೆಗಳಿಗೆ ವಿಪರೀತ ರಾಸಾಯ ನಿಕ ಬಳಸುತ್ತಿದ್ದು, ಫಲವತ್ತಾದ ಭೂಮಿಯನ್ನು ಬರಡು ಮಾಡಲಾಗುತ್ತಿದೆ. ಹೀಗೆ ಮುಂದು ವರೆದರೆ ಕೃಷಿಗೆ ಭೂಮಿ ನಿರುಪಯುಕ್ತ ವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಇಂದು ಭೂಮಿ ದಿನವಾದ ಹಿನ್ನೆಲೆಯಲ್ಲಿ ಮೈಸೂರು ನಗರದಲ್ಲಿ ಬಳಗದಿಂದ ಸಾಂಕೇತಿಕ ವಾಗಿ 5 ಗಿಡ ನೆಟ್ಟಿದ್ದೇವೆ ಎಂದು ಬಿಜೆಪಿ ಸ್ಥಳೀಯ ನಾಯಕಿ ಲಕ್ಷ್ಮೀದೇವಿ ಹೇಳಿದರು. ಎಲ್ಲರೂ ಮನೆಯಲ್ಲೇ ಇದ್ದು ಆರೋಗ್ಯ ಕಾಪಾಡಿಕೊಳ್ಳಿ ಎಂದು ಮನವಿ ಮಾಡಿದರು.

ಬೇಕರಿ ಉದ್ಯಮಿ ಆನಂದ್, ವಕೀಲ ಪ್ರಸನ್ನ, ಹೋಟೆಲ್ ಉದ್ಯಮಿ ಸುರೇಶ್, ಮುಖಂಡ ರಾದ ನಿಖಿಲ್ ಜಸ್ವಂತ್, ವಿಕ್ರಂ ಅಯ್ಯಂ ಗಾರ್, ಅಶೋಕ್, ಸತೀಶ್, ಅರಸೀಕೆರೆ ಉಮೇಶ್, ಹರೀಶ್ ಮತ್ತಿತರರಿದ್ದರು.

Translate »