ಕೊರೊನಾ ಓಡಿಸಲು ದೇವರ ಮೊರೆ ಹೋಗೋಣ ಬನ್ನಿ…!
ಮೈಸೂರು

ಕೊರೊನಾ ಓಡಿಸಲು ದೇವರ ಮೊರೆ ಹೋಗೋಣ ಬನ್ನಿ…!

May 10, 2020

ಬೆಂಗಳೂರು, ಮೇ 9(ಕೆಎಂಶಿ)-ದೇಶಕ್ಕೆ ವಕ್ಕರಿಸಿರುವ ಕೊರೊನಾ ವೈರಸ್ ತೊಲಗಿಸಲು ಮನುಷ್ಯರ ಕೈಯ್ಯಲ್ಲಿ ಆಗುವುದಿಲ್ಲ. ನಾವು ದೇವರ ಮೊರೆ ಹೋಗಬೇಕು ಎಂದು ಅರ್ಚಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಜನರೂ ಕೂಡ ದೇವರ ಮೊರೆ ಹೋಗಬೇಕಾ ಗಿದೆ. ಕಳೆದ 45-50 ದಿನಗಳಿಂದ ದೇವಾಲಯಗಳು ಬಾಗಿಲು ಮುಚ್ಚಿವೆ. ರಾಜ್ಯದಲ್ಲಿ ಧಾರ್ಮಿಕ ಕಾರ್ಯಗಳೇ ಸ್ಥಗಿತಗೊಂಡಿವೆ.

ರಾಜ್ಯದಲ್ಲಿ ಸುಖ, ಶಾಂತಿ ಮತ್ತು ನೆಮ್ಮದಿ ನೆಲೆಸಬೇಕೆಂದರೆ, ದೇವರ ಧ್ಯಾನ ಮಾಡುವುದು ಅವಶ್ಯಕ. ಇದಕ್ಕಾಗಿ ದೇವಸ್ಥಾನ ಗಳನ್ನು ತೆಗೆದು, ಪೂಜಾ ಕಾರ್ಯಕ್ರಮಗಳನ್ನು ನಡೆಸಲು ಅವ ಕಾಶ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದ್ದಾರೆ. ತಿರುಪತಿ ತಿರು ಮಲದ ಶ್ರೀನಿವಾಸನೇ ದರ್ಶನ ನೀಡಲು ಮುಂದಾಗುತ್ತಿದ್ದಾನೆ. ಇಂತಹ ಸಂದರ್ಭದಲ್ಲಿ ನಾವು ಕೂಡ ರಾಜ್ಯದ ದೇವಾಲಯ ಗಳನ್ನು ತೆರೆಯಬೇಕು. ದೇವರಿಗೆ ಪೂಜೆ ಸಲ್ಲಿಸಬೇಕು. ಧಾರ್ಮಿಕ ಕೈಂಕರ್ಯಗಳು ಆರಂಭವಾಗಬೇಕು. ಮತ್ತೊಂದೆಡೆ ಮಂತ್ರಾಲ ಯದ ರಾಘವೇಂದ್ರ ಮಠ ಆನ್‍ಲೈನ್‍ನಲ್ಲಿ ಸೇವೆ ಆರಂಭಿಸಿದೆ. ಹೀಗಾಗಿ, ಸುಬ್ರಹ್ಮಣ್ಯ, ಕೊಲ್ಲೂರು ಮೂಕಾಂಬಿಕೆ, ಕಟೀಲು ಅನ್ನಪೂರ್ಣೇಶ್ವರಿ, ಶೃಂಗೇರಿ ಶಾರದೆ, ಹೊರನಾಡು ಅನ್ನಪೂರ್ಣೇ ಶ್ವರಿ, ಶಿರಸಿಯ ಮಾರಿಕಾಂಬಾ, ನಂಜನಗೂಡಿನ ನಂಜುಂಡೇ ಶ್ವರ, ಮೈಸೂರಿನ ಚಾಮುಂಡೇಶ್ವರಿ, ಕೋಟೆ ಶ್ರೀನಿವಾಸ, ಮಹಾ ಲಕ್ಷ್ಮೀಲೇಔಟ್‍ನ ಆಂಜನೇಯ ಸೇರಿದಂತೆ ಎಲ್ಲಾ ದೇವಾಲಯ ಗಳನ್ನು ತೆರೆಯೋಣ. ಸರ್ಕಾರ ಸೂಚಿಸುವ ಮಾರ್ಗದರ್ಶಿ ಯಂತೆಯೇ ದೇವಾಲಯಗಳನ್ನು ತೆರೆಯಲು ಅನುಮತಿ ನೀಡಿ ಎಂದು ಕೋಟಾ ಶ್ರೀನಿವಾಸ ಪೂಜಾರಿಗೆ ಒತ್ತಾಯ ಮಾಡಿದ್ದಾರೆ.

ಮುಜರಾಯಿ ಇಲಾಖೆ ದೇವಾಲಯಗಳನ್ನು ತೆರೆಯಲು ಸರ್ಕಾ ರದ ವತಿಯಿಂದ ಅನುಮತಿ ಕೊಡಿಸಬೇಕು. ಜೊತೆಗೆ ಇಲಾಖೆಯ ಸಚಿವರ ನೇತೃತ್ವದಲ್ಲಿ ಅಧಿಕಾರಿಗಳ ಬಳಿ ಚರ್ಚಿಸಿ, ಮಾರ್ಗಸೂಚಿಗಳನ್ನು ಸಿದ್ಧಪಡಿಸಬೇಕು. ಮೇ ತಿಂಗಳ 23 ರಿಂದ ಜ್ಯೇಷ್ಠ ಮಾಸ ಆರಂಭವಾಗುತ್ತಿದೆ. ಚೈತ್ರ ಮತ್ತು ವೈಶಾಖ ಮಾಸದಲ್ಲಿ ದೇವಾಲಯಗಳು ಮುಚ್ಚಲ್ಪಟ್ಟಿದೆ. ಕನಿಷ್ಠ ಪಕ್ಷ ಜ್ಯೇಷ್ಠ ಮಾಸದಲ್ಲಾದರೂ ದೇವಾಲಯಗಳು ತೆರೆಯವಂತಾ ಗಲೀ ಎನ್ನುತ್ತಿರುವ ಅರ್ಚಕರು. ಯುಗಾದಿ, ರಾಮನವಮಿ, ಚಿತ್ರಾ ಪೂರ್ಣಿಮೆಯ ಕರಗ, ನರಸಿಂಹ ಜಯಂತಿ ಸೇರಿದಂತೆ ಎಲ್ಲಾ ಧಾರ್ಮಿಕ ಆಚರಣೆಗೆ ಧಕ್ಕೆಯಾಗಿದೆ. ಇನ್ನು ಮುಂದೆಯಾದರೂ ದೇವಾಲಯಗಳಲ್ಲಿ ಧಾರ್ಮಿಕ ಕೈಂಕರ್ಯಗಳು ನಡೆಯು ವಂತಾಗಬೇಕು. ರಾಜ್ಯದಲ್ಲಿ ಕೊರೊನಾ ವೈರಸ್‍ನ ಅಟ್ಟಹಾಸ ಹಿನ್ನೆಲೆ, ರಾಜ್ಯ ಸರ್ಕಾರದ ಸಪ್ತಪದಿ-ಸರಳ ಸಾಮೂಹಿಕ ವಿವಾಹಕ್ಕೆ ಬ್ರೇಕ್ ಬಿದ್ದಿದೆ. ಎರಡು ಹಂತದಲ್ಲಿ ಸಪ್ತಪದಿ-ಸರಳ ಸಾಮೂಹಿಕ ವಿವಾಹ ನಡೆಸಲು ಮುಜರಾಯಿ ಇಲಾಖೆ ಸಜ್ಜಾಗಿತ್ತು.

ಏಪ್ರಿಲ್ 26 ಮತ್ತು ಮೇ 24 ಎರಡು ಹಂತದಲ್ಲಿ ನಡೆಯಬೇಕಿದ್ದ ಸಪ್ತಪದಿ-ಸರಳ ಸಾಮೂಹಿಕ ವಿವಾಹದಲ್ಲಿ ಮುಜರಾಯಿ ಇಲಾಖೆ, ಒಂದು ಜೋಡಿಗೆ ತಲಾ 55 ಸಾವಿರ ವೆಚ್ಚ ಮಾಡಲು ಸಿದ್ಧತೆ ಮಾಡಿಕೊಂಡಿತ್ತು. ಮೊದಲ ಹಂತದಲ್ಲಿ 2 ಸಾವಿರ ಅರ್ಜಿಗಳು ಬಂದಿದ್ದು, 1800 ಜೋಡಿಗಳನ್ನು ಪರಿಗಣಿಸಿದ್ದ ಇಲಾಖೆ, 1800 ಜೋಡಿಗಳ ಪೈಕಿ ಒಂದು ಜೋಡಿಗೆ 55 ಸಾವಿರದಂತೆ ಅಂದಾಜು 9 ಕೋಟಿ ವೆಚ್ಚ ಭರಿಸಬೇಕಿತ್ತು. ಕೇಂದ್ರ ಸರ್ಕಾರದಿಂದ ಲಾಕ್‍ಡೌನ್ ಆದೇಶ ಹಿನ್ನೆಲೆ, ಮೊದಲನೆ ಮತ್ತು ಎರಡನೆಯ ಹಂತದ ಸಾಮೂಹಿಕ ವಿವಾಹಕ್ಕೆ ಸದ್ಯಕ್ಕೆ ಬ್ರೇಕ್ ಹಾಕಿರುವ ಮುಜರಾಯಿ ಇಲಾಖೆ, ಎರಡನೇ ಹಂತದ ಸಾಮೂಹಿಕ ವಿವಾಹವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ನಿರ್ಧರಿಸಿದೆ. ಈಗ ಪಟ್ಟಿಯಾಗಿರುವ 1800 ಜೋಡಿಗಳಿಗೆ ಮಾತ್ರ ಮುಂದಿನ ದಿನಗಳಲ್ಲಿ ಸಾಮೂಹಿಕ ವಿವಾಹ ನಡೆಸಲು ಚಿಂತನೆ ನಡೆಸಿದ್ದು, ಲಾಕ್‍ಡೌನ್ ಮುಗಿದ ನಂತರ ಮುಂದೆ ಮುಜರಾಯಿ ಇಲಾಖೆಯ ವತಿಯಿಂದ ಸಪ್ತಪದಿ-ಸರಳ ಸಾಮೂಹಿಕ ವಿವಾಹದ ದಿನಾಂಕ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.

Translate »