ನಾಲ್ಕು ಜನ ಚೇತರಿಸಿಕೊಂಡರೆ ಮೈಸೂರು ಕೊರೊನಾ ಮುಕ್ತ
ಮೈಸೂರು

ನಾಲ್ಕು ಜನ ಚೇತರಿಸಿಕೊಂಡರೆ ಮೈಸೂರು ಕೊರೊನಾ ಮುಕ್ತ

May 10, 2020

ಸತತ 9 ದಿನದಿಂದ ಒಂದೂ ಹೊಸ ಸೋಂಕು ದಾಖಲಾಗಿಲ್ಲ

ಮೈಸೂರು, ಮೇ 9-ಮೈಸೂರು ಜಿಲ್ಲೆಯಲ್ಲಿ 9ನೇ ದಿನವಾದ ಶನಿವಾರವೂ ಯಾವುದೇ ಹೊಸ ಕೊರೊನಾ ಸೋಂಕು ಪತ್ತೆಯಾಗಿಲ್ಲ. ಅದೇ ವೇಳೆ ಓರ್ವ ಸೋಂಕಿತ ವ್ಯಕ್ತಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಕೇವಲ ನಾಲ್ವರು ಮಾತ್ರ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೆಡ್ ಜೋನ್‍ನಲ್ಲಿರುವ ಮೈಸೂರು ಜಿಲ್ಲೆ ಆರೇಂಜ್ ಜೋನ್‍ನತ್ತ ಮುಖ ಮಾಡುವ ದಿನಗಳು ಸಮೀಪಿಸುತ್ತಿರುವುದು ಮೈಸೂರಿಗರಿಗೆ ಸಮಾಧಾನ ತಂದಿದೆ.

ಜಿಲ್ಲೆಯಲ್ಲಿ ಒಟ್ಟು 90 ಸೋಂಕಿತರ ಪೈಕಿ 86 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು 4976 ಮಂದಿ ಮೇಲೆ ನಿಗಾ ವಹಿಸಿದ್ದು, ಅವರನ್ನು 4757 ಮಂದಿ 14 ದಿನದ ಕ್ವಾರಂಟೈನ್ ಮುಗಿಸಿದ್ದಾರೆ. ಉಳಿದಂತೆ 219 ಮಂದಿ ಹೋಂ ಕ್ವಾರಂಟೈನ್‍ನಲ್ಲಿದ್ದಾರೆ. ನೆರೆ ಜಿಲ್ಲೆ ಮಂಡ್ಯದಲ್ಲಿ ಶನಿವಾರ ಮೂವರು ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಟ್ಟು 28 ಸೋಂಕಿತರಿದ್ದ ಮಂಡ್ಯ ಜಿಲ್ಲೆಯಲ್ಲಿ ಈಗ 14 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ 6 ದಿನಗಳಿಂದಲೂ ಈ ಜಿಲ್ಲೆಯಲ್ಲಿ ಯಾವುದು ಹೊಸ ಪ್ರಕರಣ ದಾಖಲಾಗದೇ ಇರುವುದು ಆಶಾದಾಯಕ ಬೆಳವಣಿಗೆಯಾಗಿದೆ.

 

Translate »