ಪ್ರವಾಸಿಗರ ಸುರಕ್ಷತೆಗೆ ಆದ್ಯತೆ: ಪ್ರಶಾಂತ್
ಮೈಸೂರು

ಪ್ರವಾಸಿಗರ ಸುರಕ್ಷತೆಗೆ ಆದ್ಯತೆ: ಪ್ರಶಾಂತ್

May 11, 2020

ಮೈಸೂರು, ಮೇ 10(ಎಸ್‍ಪಿಎನ್)- ಕೊರೊನಾ ಸೊಂಕಿನಿಂದ ಪ್ರವಾಸಿಗರನ್ನು ರಕ್ಷಿಸಿ, ಸುರಕ್ಷಿತವಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಕರೆದುಕೊಂಡು ಹೋಗುವುದರ ಬಗ್ಗೆ ಮೈಸೂರಿನ ಸೇಫ್‍ವ್ಹೀಲ್ ಟ್ರಾವೆಲ್ ಸಂಸ್ಥೆ ಹೊಸ ಪ್ಲಾನ್ ಮಾಡಿದೆ. ಕಾರಿನಲ್ಲಿ ಪ್ರವಾಸಿಗರು ಮತ್ತು ಚಾಲಕರ ನಡುವೆ ಸೋಂಕು ಹರಡದಂತೆ ತಡೆಗಟ್ಟಲು ಫೈಬರ್ ಗ್ಲಾಸ್ ಅಳವಡಿಸಲಾಗಿದೆ. ನಮ್ಮ ಸಂಸ್ಥೆಯ ಕಾರು ಚಾಲಕರು ಬದುಕು ಕಟ್ಟಿಕೊಳ್ಳಲು ಯಾರ ಮೇಲೂ ಅವಲಂಬಿತವಾಗದಿರುವಂತೆ ಹೊಸ ಆಲೋಚನೆಯೊಂದಿಗೆ ಕಾರುಗಳ ಸೇವೆಯನ್ನು ಪ್ರವಾಸಿಗÀರಿಗೆ ಒದಗಿಸಲಿದ್ದೇವೆ ಎನ್ನುತ್ತಾರೆ ಸೇಫ್‍ವ್ಹೀಲ್ ಟ್ರಾವೆಲ್ ಸಂಸ್ಥೆ ಮುಖ್ಯಸ್ಥ ಬಿ.ಎಸ್.ಪ್ರಶಾಂತ್.

ಮೈಸೂರಿಗೆ ಬರುವ ಪ್ರವಾಸಿಗರನ್ನು ಸೆಳೆಯಲು ಭಾಷಾ ಜ್ಞಾನ, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದ ನಮ್ಮ ಸಂಸ್ಥೆ, ಇದೀಗ ಕೊರೊನಾ ಸೋಂಕಿನಿಂದ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಗಮನಹರಿಸಿದೆ. ಕೇಂದ್ರ ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿದ ಹೊಸ ಮಾರ್ಗಸೂಚಿ ಪ್ರಕಾರವೇ ನಮ್ಮ ಸಂಸ್ಥೆಯ ಕಾರುಗಳಲ್ಲಿ ಫೈಬರ್ ಗ್ಲಾಸ್ ಅಳ ವಡಿಸಲಾಗಿದೆ. ಚಾಲಕ, ಇಬ್ಬರು ಪ್ರಯಾಣಿಕರು, ಕಾರಿನಲ್ಲಿ ಅಂತರ ಕಾಯ್ದುಕೊಂಡು ಪ್ರಯಾಣಿಸಲು ಅವಕಾಶವಿದೆ. ಕೋವಿಡ್-19 ವೈರಾಣು ತೀವ್ರತೆ ನಡುವೆಯೂ ಗುಣಮಟ್ಟ ಕಾಯ್ದುಕೊಳ್ಳಲಾಗಿದೆ ಎಂದು ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದರು.

ಕಾರು ಬೇರೆ ಸ್ಥಳಕ್ಕೆ ಹೋಗಿ ಬಂದ ತಕ್ಷಣ ಕಾರನ್ನು ಸ್ಯಾನಿಟೈಸ್ ಮಾಡಿಸುತ್ತೇವೆ. ಪ್ರಯಾಣಿಕರು ಕಾರು ಹತ್ತುವ ಮೊದಲು ಸ್ಯಾನಿಟೈಸರ್ ನೀಡಿ ಕೈ ವಾಷ್ ಮಾಡಿಸುತ್ತೇವೆ. ನಂತರ ಮಾಸ್ಕ್ ಹಾಕುವುದು ಕಡ್ಡಾಯ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

Translate »