ಮೈಸೂರಲ್ಲಿ ಸಹಜಸ್ಥಿತಿಗೆ ಜನಜೀವನ
ಮೈಸೂರು

ಮೈಸೂರಲ್ಲಿ ಸಹಜಸ್ಥಿತಿಗೆ ಜನಜೀವನ

May 19, 2020

ಮೈಸೂರು, ಮೇ 18 (ಆರ್‍ಕೆ)- ಹಂತ ಹಂತವಾಗಿ ಕೋವಿಡ್-19 ಲಾಕ್ ಡೌನ್ ನಿರ್ಬಂಧವನ್ನು ಸಡಿಲಗೊಳಿ ಸುತ್ತಿದ್ದಂತೆಯೇ ಮೈಸೂರಲ್ಲಿ ಜನಜೀವನ ಸಹಜಸ್ಥಿತಿಗೆ ಮರಳುತ್ತಿದೆ.

ದಿನಸಿ, ಹಾಲು, ಹಣ್ಣು, ತರಕಾರಿ, ಔಷಧಿ ಯಂತಹ ಅತ್ಯವಶ್ಯಕ ವಸ್ತುಗಳ ಅಂಗಡಿ ಜೊತೆಗೆ ಮಾಲ್, ಹೋಟೆಲ್, ಸಿನಿಮಾ ಮಂದಿರಗಳನ್ನು ಹೊರತುಪಡಿಸಿ ಉಳಿ ದೆಲ್ಲಾ ಬಗೆಯ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿರುವುದರಿಂದ ಕಳೆದ ಎರಡು ತಿಂಗಳಿಂದ ಮನೆಯಲ್ಲೇ ಇದ್ದ ಜನರು ಹೊರ ಬರಲಾರಂಭಿಸಿದ್ದಾರೆ.

ಬಟ್ಟೆ, ಮೊಬೈಲ್, ಜುವೆಲ್ಲರಿ, ಪಾತ್ರೆ, ಕಬ್ಬಿಣ, ಸಿಮೆಂಟ್, ಹಾರ್ಡ್‍ವೇರ್, ಲೇಖನ ಸಾಮಗ್ರಿ, ಸಲೂನ್, ಬ್ಯೂಟಿ ಪಾರ್ಲರ್, ಚಿಲ್ಲರೆ, ಅಂಗಡಿ, ಟೆಂಟ್ ಹೌಸ್ ಸೇರಿ ದಂತೆ ಮೈಸೂರು ನಗರದಾದ್ಯಂತ ಬಹು ತೇಕ ಎಲ್ಲಾ ಬಗೆಯ ವ್ಯಾಪಾರ ವಹಿ ವಾಟು ಪುನರಾರಂಭಗೊಂಡಿದೆ.

ಹೆಚ್ಚು ಜನಸಂದಣಿ ಸೇರುವ ಡಿಪಾರ್ಟ್ ಮೆಂಟ್ ಸ್ಟೋರ್, ಮಾರುಕಟ್ಟೆ, ಸೀರೆ ಅಂಗಡಿಗಳಲ್ಲಿ ಕಳೆದ ನಾಲ್ಕು ದಿನಗಳಿಂದ ವ್ಯಾಪಾರ ಚುರುಕುಗೊಂಡಿರುವುದು ಪ್ರಮುಖ ವಾಣಿಜ್ಯ ಕೇಂದ್ರಗಳಾದ ಡಿ. ದೇವ ರಾಜ ಅರಸು ರಸ್ತೆ, ಅಶೋಕ ರಸ್ತೆ, ಸಯ್ಯಾ ಜಿರಾವ್ ರಸ್ತೆ, ಚಾಮರಾಜ, ಮಹಾತ್ಮ ಗಾಂಧಿ, ಜೋಡಿ ರಸ್ತೆ, ವಿ.ವಿ. ಮೊಹ ಲ್ಲಾದ ಟೆಂಪಲ್ ರಸ್ತೆ, ಕಾಳಿದಾಸ ರಸ್ತೆ, ಹೆಬ್ಬಾಳಿನ ಸೂರ್ಯ ಬೇಕರಿ ರಸ್ತೆ, ಹೆಬ್ಬಾಳು ಮುಖ್ಯ ರಸ್ತೆ, ನ್ಯೂ ಕಾಂತರಾಜ ಅರಸ್ ರಸ್ತೆ, ಇರ್ವಿನ್ ರಸ್ತೆ, ಧನ್ವಂತರಿ ರಸ್ತೆ, ಎನ್.ಆರ್. ಮೊಹಲ್ಲಾದ ಶಿವಾಜಿ ರಸ್ತೆ, ಮಹದೇವ ಪುರ ರಸ್ತೆಯಂತಹ ಪ್ರಮುಖ ವಾಣಿಜ್ಯ ರಸ್ತೆಗಳಲ್ಲಿನ ಎಲ್ಲಾ ಅಂಗಡಿಗಳು ತೆರೆದಿವೆ.

ಮಕ್ಕಾಜಿ ಚೌಕ, ಕೆ.ಟಿ. ಸ್ಟ್ರೀಟ್, ಗಾಂಧಿ ಚೌಕ, ಕೆ.ಆರ್. ಸರ್ಕಲ್, ಅಗ್ರಹಾರ ಸರ್ಕಲ್, ಕೆ.ಆರ್.ಮಾರುಕಟ್ಟೆ, ದೇವರಾಜ ಮಾರು ಕಟ್ಟೆ, ಮಂಡಿ ಮಾರ್ಕೆಟ್, ಹಳೇ ಆರ್‍ಎಂಸಿ, ಬಂಡೀಪಾಳ್ಯದ ಎಪಿಎಂಸಿ ಮಾರುಕಟ್ಟೆ ಯಲ್ಲಂತೂ ಜನ ಜಂಗುಳಿ ಏರ್ಪಟ್ಟಿದ್ದು, ಮಾಮೂಲಿನಂತೆ ವ್ಯಾಪಾರ ಚಟುವಟಿಕೆ ಗಳು ನಡೆಯುತ್ತಿವೆ. ಸದಾ ಗಿಜಿಗಿಡುತ್ತಿದ್ದ ಶಿವರಾಂಪೇಟೆ, ಸಂತೇಪೇಟೆ, ಬೋಟಿ ಬಜಾರ್, ದೇವರಾಜ ಮೊಹಲ್ಲಾ, ನಾರಾ ಯಣ ಶಾಸ್ತ್ರಿ ರಸ್ತೆಗಳಲ್ಲಿ ಕೋವಿಡ್ ಲಾಕ್ ಡೌನ್ ನಿರ್ಬಂಧ ನಿಯಮವೇ ಇಲ್ಲ ವೇನೋ ಎಂಬಂತೆ ಜನ, ವಾಹನ ಸಂಚಾರ ದಟ್ಟಣೆ ಕಾಣಿಸುತ್ತಿದೆ. ಹಬ್ಬ ಹರಿದಿನಗಳಂ ತಹ ವಿಶೇಷ ಸಂದರ್ಭಗಳಲ್ಲಿರುವಂತೆ ಡಿ.ದೇವರಾಜ ಅರಸು ರಸ್ತೆಯಲ್ಲಿ ಇಂದು ವಾಹನಗಳ ಸಂಚಾರ ಕಂಡು ಬಂದಿತು. ರಸ್ತೆಯ ಎರಡೂ ಬದಿಗಳಲ್ಲಿ ದ್ವಿಚಕ್ರ ವಾಹನ ಮತ್ತು ಕಾರುಗಳನ್ನು ಎಡಬಿಡದೇ ನಿಲ್ಲಿಸಿದ್ದ ದೃಶ್ಯ ಇಂದು ಕಂಡು ಬಂದಿತು.

ಆಟೋ, ಕ್ಯಾಬ್, ಟ್ಯಾಕ್ಸಿ, ವಿವಿಧ ಸಾಫ್ಟ್‍ವೇರ್ ಕಂಪನಿಗಳ ವಾಹನಗಳು ಎಂದಿನಂತೆ ಓಡಾಡುತ್ತಿರುವುದಲ್ಲದೆ, ಬಹು ತೇಕ ಎಲ್ಲಾ ಕೈಗಾರಿಕೆಗಳೂ ಕಾರ್ಯಾ ರಂಭ ಮಾಡಿರುವುದರಿಂದ ಕಾರ್ಮಿಕರು, ಸರಕು ಸಾಗಣೆ ವಾಹನಗಳೂ ಸಹ ಹೆಚ್ಚಾಗಿ ಓಡಾಡುತ್ತಿವೆ. ನಾಳೆ (ಮೇ 19) ಯಿಂದ ಕೆಎಸ್‍ಆರ್‍ಟಿಸಿ, ಖಾಸಗಿ ಬಸ್ಸುಗಳ ಸಂಚಾರ ಆರಂಭಿಸಲು ಸರ್ಕಾರ ಅವಕಾಶ ಕಲ್ಪಿಸಿ ರುವ ಕಾರಣ ಮಂಗಳವಾರದಿಂದ ಸಂಚಾರ ದಟ್ಟಣೆ ಮತ್ತಷ್ಟು ಜಾಸ್ತಿಯಾಗಲಿದ್ದು, ಆಗಿಂ ದಾಗ್ಗೆ ಮೈಸೂರಲ್ಲಿ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆಯನ್ನೂ ತಳ್ಳಿ ಹಾಕಲಾಗದು.

Translate »