ಮೈಸೂರು, ಮೇ 19 (ಆರ್‍ಕೆ)- ಕೋವಿಡ್- 19 ಲಾಕ್‍ಡೌನ್ ನಿರ್ಬಂಧದಿಂದಾಗಿ ಸ್ಥಗಿತಗೊಂಡಿದ್ದ ಕೆಎಸ್‍ಆರ್‍ಟಿಸಿ ಬಸ್ ಗಳ ಸಂಚಾರ ಮೈಸೂರು, ಹಾಸನ, ಚಾಮ ರಾಜನಗರ, ಮಂಡ್ಯ ಹಾಗೂ ಕೊಡಗಿನಲ್ಲಿ ಇಂದಿನಿಂದ ಆರಂಭವಾಗಿದೆ. ಆದರೆ ಪ್ರಯಾಣಿ ಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸೋಮವಾರ ಸರ್ಕಾರ ಕೈಗೊಂಡ ನಿರ್ಧಾರದಂತೆ ಇಂದು ಬೆಳಿಗ್ಗೆ 7 ಗಂಟೆ ಯಿಂದ ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣ ಮತ್ತು ನಗರ ಬಸ್ ನಿಲ್ದಾಣ ಗಳಿಂದ ಸಾರಿಗೆ ಬಸ್‍ಗಳು ಸಂಚರಿಸಿದವು.
ನಿಲ್ದಾಣಗಳಲ್ಲಿ ಪ್ರಯಾಣಿಕರು ಟಿಕೆಟ್ ಪಡೆದು ಬಸ್ ಹತ್ತುವ ಮೊದಲೇ ಆರೋಗ್ಯ ಇಲಾಖೆ ಸಿಬ್ಬಂದಿ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ ಆರೋಗ್ಯ ತಪಾಸಣೆ ನಡೆಸಿ ಜ್ವರ, ಕೆಮ್ಮು, ನೆಗಡಿ, ಉಸಿರಾಟ ತೊಂದರೆ ಇಲ್ಲದಿರುವುದನ್ನು ದೃಢಪಡಿಸಿಕೊಂಡು ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟರು.
ಪ್ರಯಾಣಿಕರು ಹಾಗೂ ಅವರ ಲಗೇಜುಗಳಿಗೆ ರಾಸಾಯನಿಕ ದ್ರಾವಣ ಸಿಂಪಡಿಸಿ ಸ್ಯಾನಿಟೈಸ್ ಮಾಡಲಾಗುತ್ತಿದ್ದು, ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದು ಕೊಂಡು ಸಾಲಾಗಿ ನಿಂತು ಬಸ್ ಏರಲು ವ್ಯವಸ್ಥೆ ಕಲ್ಪಿಸಲಾಗಿದೆ. ಬಸ್ ನಿಲ್ದಾಣಕ್ಕೆ ಬರುವ ಮುನ್ನವೇ ಡಿಪೋದಲ್ಲಿ ಬಸ್ ಅನ್ನು ಸ್ವಚ್ಛಗೊಳಿಸಿ, ಸ್ಯಾನಿಟೈಸ್ ಮಾಡ ಲಾಗುತ್ತಿದೆ. ಬಸ್ಸಿನ ಒಂದು ಬದಿಯಲ್ಲಿನ 3 ಮಂದಿ ಕೂರುವ ಆಸನದಲ್ಲಿ ಇಬ್ಬರು, ಇಬ್ಬರು ಕೂರುವೆಡೆ ಓರ್ವ ಪ್ರಯಾಣಿಕ ಹೀಗೆ ಒಂದು ಬಸ್‍ನಲ್ಲಿ 30 ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಅದೇ ರೀತಿ ಚಾಲಕ, ನಿರ್ವಾಹಕರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಿ ಹ್ಯಾಂಡ್ ಗ್ಲೌಸ್, ಮಾಸ್ಕ್ ಹಾಗೂ ಸ್ಯಾನಿಟೈಸರ್ ಅನ್ನು ಕೆಎಸ್‍ಆರ್‍ಟಿಸಿ ಒದಗಿಸಿದೆ.
ಮೊದಲ ದಿನವಾದ ಇಂದು ಪ್ರಯಾಣಿ ಕರ ಪ್ರತಿಕ್ರಿಯೆ ನೀರಸವಾಗಿತ್ತು. ಒಂದು ಬಸ್ಸಿನಲ್ಲಿ ಪ್ರಯಾಣಿಸಲು ಕೇವಲ 30 ಮಂದಿಗೆ ಅವಕಾಶವಿದ್ದು, ಒಂದು ಬಸ್ ಭರ್ತಿಯಾಗಲು 30 ರಿಂದ 60 ನಿಮಿಷ ಸಮಯ ಬೇಕಾಗುತ್ತಿತ್ತು. ಆದ್ದರಿಂದ ಮೈಸೂರಿನ ಸಬರ್ಬ್‍ನ್ ಬಸ್ ನಿಲ್ದಾಣ ದಿಂದ ಮಧ್ಯಾಹ್ನದವರೆಗೆ ಕೇವಲ 50 ಬಸ್ಸುಗಳು ಮಾತ್ರ