ಜೂ.1ರಿಂದ ಹೋಟೆಲ್ ತೆರೆಯಲು ಅವಕಾಶ ನೀಡಿದರೂ ಮೈಸೂರಲ್ಲಿ ಶೇ.60ರಷ್ಟು ತೆರೆಯುವುದು ಅನುಮಾನ
ಮೈಸೂರು

ಜೂ.1ರಿಂದ ಹೋಟೆಲ್ ತೆರೆಯಲು ಅವಕಾಶ ನೀಡಿದರೂ ಮೈಸೂರಲ್ಲಿ ಶೇ.60ರಷ್ಟು ತೆರೆಯುವುದು ಅನುಮಾನ

May 30, 2020

ಮೈಸೂರು, ಮೇ 29(ಆರ್‍ಕೆ)- ಜೂನ್ 1ರಿಂದ ಹೋಟೆಲ್‍ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ ಎಂದು ಸರ್ಕಾರ ಪ್ರಕಟಿಸಿರುವುದರಿಂದ ಮೈಸೂರಲ್ಲಿ ಹೋಟೆಲ್ ಉದ್ಯಮ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಕೋವಿಡ್-19 ಲಾಕ್‍ಡೌನ್ ನಿರ್ಬಂಧದಿಂದಾಗಿ ಮಾರ್ಚ್ 22ರಿಂದ ಬಂದ್ ಆಗಿರುವ ಮೈಸೂರಿನ ಹೋಟೆಲ್‍ಗಳನ್ನು ಸರ್ಕಾರದ ನಿರ್ದೇಶನದಂತೆ ಜೂನ್ 1ರಿಂದ ಪುನಾರಂಭಿಸಲು ನಿರ್ಧರಿಸಲಾಗಿದೆ.

ಹೋಟೆಲ್‍ಗಳನ್ನು ಸ್ವಚ್ಛಗೊಳಿಸಿ, ಅಡುಗೆ ಮನೆಯನ್ನು ಸಜ್ಜುಗೊಳಿಸುವ ಕೆಲಸ ಆರಂಭವಾಗಿದ್ದು, ಫ್ರಿಡ್ಜ್, ಓವೆನ್ ಗಳ ಕಾರ್ಯನಿರ್ವಹಣೆ ಸ್ಥಿತಿಗತಿ ಖಾತರಿಪಡಿಸಿಕೊಂಡು ಲಾಕ್‍ಡೌನ್‍ನಿಂದ ಮನೆಗೆ ಹಿಂದಿರುಗಿರುವ ಅಡುಗೆ ತಯಾ ರಿಸುವವರು, ಸಪ್ಲೆಯರ್ ಹಾಗೂ ಸ್ವಚ್ಛತಾ ಸಿಬ್ಬಂದಿ ಯನ್ನು ಕರೆಸಿಕೊಳ್ಳಲಾಗುತ್ತಿದೆ.

ಜೂನ್ 1ರಿಂದ ಹೋಟೆಲ್‍ಗಳು ಕಾರ್ಯಾರಂಭ ಗೊಳ್ಳಬೇಕೆಂದರೆ ಹಿಂದಿನ ದಿನ (ಮೇ 31) ವೇ ದಿನಸಿ, ತರಕಾರಿ, ಹಾಲು, ಮೊಸರು ಸೇರಿದಂತೆ ಅಗತ್ಯ ವಸ್ತು ಗಳನ್ನು ಹೊಂದಿಸಿಕೊಂಡು ತಯಾರಿ ಮಾಡಬೇಕಾಗಿರುವುದರಿಂದ ಹೋಟೆಲ್ ಮಾಲೀಕರು ಸಿದ್ಧತೆ ಆರಂಭಿಸಿದ್ದಾರೆ.

ತೆರೆಯುವುದು ಅನುಮಾನ: ಜೂನ್ 1ರಿಂದ ಹೋಟೆಲ್ ಗಳನ್ನು ತೆರೆಯಲು ಸರ್ಕಾರವೇನೋ ಅನುಮತಿ ನೀಡಿದೆ. ಆದರೆ ವಿಧಿಸುವ ಷರತ್ತುಗಳನ್ನು ಪಾಲಿಸಿ ಹೋಟೆಲ್ ನಡೆಸುವುದು ಕಷ್ಟಸಾಧ್ಯ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ತಿಳಿಸಿದ್ದಾರೆ.

ಈ ಕುರಿತು ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯೆ ನೀಡಿದ ಅವರು, ಬೆಳಗ್ಗೆ 7ರಿಂದ ಸಂಜೆ 7ಗಂಟೆವರೆಗೆ ಮಾತ್ರ ಹೋಟೆಲ್ ತೆರೆಯಬೇಕು, ಸಾಮಾಜಿಕ ಅಂತರ ಕಾಯ್ದು ಕೊಳ್ಳಬೇಕು, ಪ್ರತಿಯೊಬ್ಬ ಗ್ರಾಹಕರಿಗೂ ಸ್ಯಾನಿಟೈಸ್ ಒದಗಿ ಸಬೇಕು, ಆಗಿಂದಾಗ್ಗೆ ಇಡೀ ಹೋಟೆಲ್ ಅನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಬೇಕು, ಪ್ರತೀ ಭಾನುವಾರ ಸಂಪೂರ್ಣ ಲಾಕ್‍ಡೌನ್ ನಿರ್ಬಂಧವಿರುತ್ತದೆ. ಹೀಗೆ ಸುಮಾರು 25 ಷರತ್ತುಗಳನ್ನು ಸರ್ಕಾರ ವಿಧಿಸುತ್ತದೆ ಎಂಬ ಮಾಹಿತಿ ಇದೆ ಎಂದು ತಿಳಿಸಿದರು.

ಇನ್ನು ಸರ್ಕಾರ ಅಧಿಕೃತ ಆದೇಶ ಹೊರಡಿಸಿಲ್ಲ. ಅವರ ಷರತ್ತು ಪಾಲಿಸಬೇಕೆಂದರೆ ಯಾರೂ ಹೋಟೆಲ್ ಗಳನ್ನು ನಡೆಸಲು ಸಾಧ್ಯವಾಗುವುದಿಲ್ಲ. ಹಾಗೆ ಉದ್ದಿಮೆ ಆರಂಭಿಸಬೇಕೆಂದರೆ, ಆಹಾರ ಪದಾರ್ಥಗಳ ಬೆಲೆಯನ್ನು ಹೆಚ್ಚಿಸಬೇಕು. ಈಗಾಗಲೇ ಪ್ರವಾಸೋಧ್ಯಮ ನೆಲಕಚ್ಚಿರು ವಾಗ ವ್ಯಾಪಾರವೂ ಆಗುವುದಿಲ್ಲ, ತೀವ್ರ ನಷ್ಟ ಅನುಭವಿಸ ಬೇಕಾಗುತ್ತದೆ ಎಂದು ನಾರಾಯಣಗೌಡ ತಿಳಿಸಿದರು.

ಲಾಕ್‍ಡೌನ್‍ನಿಂದಾಗಿ ಸಿಬ್ಬಂದಿಗಳೆಲ್ಲಾ ಮನೆಗೆ ಹೋಗಿ ದ್ದಾರೆ. ಕೊರೊನಾ ಇರುವುದರಿಂದ ಅವರೂ ಮತ್ತೆ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಜೊತೆಗೆ ನೀರಿನ ಬಿಲ್, ವಿದ್ಯುತ್, ಹೋಟೆಲ್ ಬಾಡಿಗೆ, ಉದ್ದಮೆ ರಹದಾರಿ ಶುಲ್ಕ ಪಾವತಿಯಂತಹ ಬಾಬತ್ತಿನಲ್ಲಿ ಯಾವುದೇ ರಿಯಾಯಿತಿ ಯಾಗಲೀ, ವಿನಾಯಿತಿಯಾಗಲೀ ಸಿಕ್ಕಿಲ್ಲ ವಾದ್ದರಿಂದ ಇನ್ನು ಮುಂದೆ ಕನಿಷ್ಠ ಒಂದು ವರ್ಷ ಕಾಲ ಹೋಟೆಲ್ ಉದ್ದಿಮೆ ನಡೆಸುವುದು ತುಂಬಾ ಕಷ್ಠ ಎಂದು ತಿಳಿಸಿದ್ದಾರೆ.

ಈ ಎಲ್ಲಾ ಕಾರಣಗಳಿಂದ ಶೇ.60ರಷ್ಟು ಮಾಲೀಕರು ಜೂನ್ 1ರಿಂದ ಹೋಟೆಲ್ ತೆರೆಯುವುದಿಲ್ಲ. ಮುಂದೆ ಏನಾಗ ಬಹುದೆಂದು ಅವರು ಕಾಯುತ್ತಾರೆ. ಶೇ. 40 ರಷ್ಟು ಹೋಟೆಲ್ ಮಾತ್ರ ಮೈಸೂರಲ್ಲಿ ಸೋಮ ವಾರದಿಂದ ತೆರೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ನಾರಾಯಣಗೌಡ ತಿಳಿಸಿದ್ದಾರೆ.

ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಲಾಕ್ ಡೌನ್ ನಿರ್ಬಂಧ ಹೇರಿರುವ ಕಾರಣ, ಇನ್ನೂ ಹಲವು ತಿಂಗಳ ಕಾಲ ಇದೇ ಪರಿಸ್ಥಿತಿ ಮುಂದುವರಿಯುವು ದರಿಂದ ಬಹುತೇಕ ಹೋಟೆಲ್ ಮಾಲೀಕರು ಈ ವೃತ್ತಿಯನ್ನೇ ತೊರೆದು ಬೇರೆ ವ್ಯವಹಾರ ಮಾಡಲು ತಯಾರಿ ಮಾಡಿ ಕೊಳ್ಳುತ್ತಿದ್ದಾರೆ ಎಂದು ಅವರು ತಿಳಿಸಿದರು

Translate »