ಒಟ್ಟಿಗೆ ಕುಳಿತು ಊಟ ಮಾಡಿದರೆ ಅದು ಭಿನ್ನಮತ ಎನಿಸದು: ರಮೇಶ್ ಜಾರಕಿಹೊಳಿ
ಮೈಸೂರು

ಒಟ್ಟಿಗೆ ಕುಳಿತು ಊಟ ಮಾಡಿದರೆ ಅದು ಭಿನ್ನಮತ ಎನಿಸದು: ರಮೇಶ್ ಜಾರಕಿಹೊಳಿ

May 30, 2020

ಮೈಸೂರು, ಮೇ29(ಆರ್‍ಕೆಬಿ)- ಎಲ್ಲ ಶಾಸಕರು ಒಟ್ಟಿಗೆ ಕುಳಿತು ಊಟ ಮಾಡಿ ದಾಕ್ಷಣ ಅದು ಭಿನ್ನಮತ ಎನಿಸದು. ಲಾಕ್‍ಡೌನ್ ಬಳಿಕ ಎಲ್ಲರೂ ಒಂದೆಡೆ ಕುಳಿತು ಊಟ ಮಾಡಿದ್ದು ತಪ್ಪಲ್ಲ. ಆದರೆ ಅದನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈ ಸಿವೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು.

ಸುತ್ತೂರಿನಲ್ಲಿ ಶುಕ್ರವಾರ ಸುದ್ದಿಗಾರ ರೊಂದಿಗೆ ಮಾತನಾಡಿ, ತಮ್ಮ ಕ್ಷೇತ್ರಗಳ ಸಮಸ್ಯೆಗಳ ಬಗ್ಗ ಚರ್ಚಿಸಿ, ವರಿಷ್ಠರಿಗೆ, ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಚರ್ಚೆ ಮಾಡುತ್ತಾರೆ. ಅದು ಭಿನ್ನಮತವಲ್ಲ ಎಂದು ಸ್ಪಷ್ಟಪಡಿಸಿದರು. ಉಮೇಶ್ ಕತ್ತಿ ನನ್ನ ಗೆಳೆಯ. ಅವರು ಮಾತಾಡುವ ರೀತಿಯೇ ಹಾಗೆ. ಆತ ಪಕ್ಷದ ವಿರುದ್ಧ ಹೋಗು ವುದಿಲ್ಲ ಎಂದು ಜಾರಕಿಹೊಳಿ ಹೇಳಿದರು.

Translate »