‘ಇಂಡಿಯಾ’ ಬದಲು ‘ಭಾರತ’ ಪದ ಬಳಕೆ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ
ಮೈಸೂರು

‘ಇಂಡಿಯಾ’ ಬದಲು ‘ಭಾರತ’ ಪದ ಬಳಕೆ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ

May 30, 2020

ನವದೆಹಲಿ: ಸಂವಿಧಾನವನ್ನು ತಿದ್ದು ಪಡಿ ಮಾಡಿ “ಇಂಡಿಯಾ” ಎಂಬ ಹೆಸ ರನ್ನು “ಭಾರತ” ಅಥವಾ “ಹಿಂದೂ ಸ್ಥಾನ” ಎಂದು ಬದಲಾಯಿಸಲು ಕೇಂದ್ರಕ್ಕೆ ನಿರ್ದೇಶನ ಕೋರಿರುವ ಮನವಿಯನ್ನು ಜೂನ್ 2ರಂದು ಸುಪ್ರೀಂಕೋರ್ಟ್ ವಿಚಾರಣೆ ನಡೆಸಲು ಸಮ್ಮತಿಸಿದೆ.

“ಒಕ್ಕೂಟದ ಹೆಸರು ಮತ್ತು ಭೂ ಪ್ರದೇಶದೊಂದಿಗೆ ವ್ಯವಹರಿಸುವ ಸಂವಿ ಧಾನದ 1ನೇ ಪರಚ್ಚೇಧದ ತಿದ್ದುಪಡಿ ತರಲು ಸೂಕ್ತ ಕ್ರಮಗಳನ್ನು ತೆಗೆದು ಕೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶಿಸಲು ಮನವಿಯಲ್ಲಿ ಕೋರಲಾಗಿದೆ. ನಮ್ಮದೇ ರಾಷ್ಟ್ರೀಯತೆ ಯಲ್ಲಿ ಹೆಮ್ಮೆಯ ಭಾವವನ್ನು ಮೂಡಿ ಸುವಂತೆ “ಇಂಡಿಯಾ” ಎನ್ನುವ ಬದಲು “ಭಾರತ” ಅಥವಾ “ಹಿಂದೂಸ್ಥಾನ” ಎಂದು ದೇಶವನ್ನು ಸಂಬೋಧಿಸುವಂತೆ” ಮನವಿ ಕೇಳಿದೆ. ಶುಕ್ರವಾರ ಈ ಅರ್ಜಿ ಸುಪ್ರೀಂಕೋರ್ಟ್ ಮುಂದೆ ಬಂದಿದ್ದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎಸ್.ಎ.ಬೊಬ್ಡೆ ಲಭ್ಯವಿಲ್ಲದ ಕಾರಣ ಅದನ್ನು ಪಟ್ಟಿಯಿಂದ ತೆಗೆದು ಹಾಕಲಾ ಗಿದೆ. ಸರ್ವೋಚ್ಛ ನ್ಯಾಯಾಲಯದ ವೆಬ್ ಸೈಟ್‍ನಲ್ಲಿ ಅಪ್‍ಲೋಡ್ ಮಾಡಿದ ನೋಟಿಸ್‍ನ ಪ್ರಕಾರ, ಈ ವಿಷಯವನ್ನು ಜೂನ್ 2ರಂದು ಸಿಜೆಐ ನೇತೃತ್ವದ ನ್ಯಾಯ ಪೀಠದ ಮುಂದೆ ವಿಚಾರಣೆಗೆ ಪಟ್ಟಿ ಮಾಡಲಾಗುವುದು. ದೆಹಲಿ ಮೂಲದ ವ್ಯಕ್ತಿ ಯೊಬ್ಬರು ಸಲ್ಲಿಸಿರುವ ಮನವಿಯಲ್ಲಿ, ಇಂತಹ ತಿದ್ದುಪಡಿಯು “ಈ ದೇಶದ ನಾಗ ರಿಕರು ವಸಾಹತುಶಾಹಿ ಭೂತಕಾಲ ದಿಂದ ಹೊರಬರುವುದನ್ನು ಖಚಿತಪಡಿಸ ಲಿದೆ” ಎಂದು ಹೇಳಿದ್ದಾರೆ.

“ಇಂಗ್ಲಿಷ್ ಹೆಸರನ್ನು ತೆಗೆದುಹಾಕು ವುದು ಸಾಂಕೇತಿಕವಾಗಿ ಕಂಡುಬರುತ್ತದೆ ಯಾದರೂ, ನಮ್ಮದೇ ರಾಷ್ಟ್ರೀಯತೆಯಲ್ಲಿ ಹೆಮ್ಮೆಯ ಭಾವವನ್ನು ಮೂಡಿಸುತ್ತದೆ, ವಿಶೇಷವಾಗಿ ಮುಂದಿನ ಪೀಳಿಗೆಗೆ. ಭಾರತ ವನ್ನು ಇಂಡಿಯಾ ಎನ್ನುವ ಬದಲಿಗೆ ಭಾರತ ಎಂದೇ ತಿಳಿಸಿಕೊಡಲು ಉತ್ತೇಜಿಸಬೇಕು. ಆ ಮೂಲಕ ಪೂರ್ವಜರ ಸ್ವಾತಂತ್ರ್ಯಕ್ಕಾಗಿನ ಕಠಿಣ ಹೋರಾಟದ ಮನವರಿಕೆ ಮಂಡಿಸ ಬೇಕು.” ಸಂವಿಧಾನದ 1ನೇ ಪರಿಚ್ಛೇದದ 1948ರ ಸಂವಿಧಾನ ಸಭೆಯ ಚರ್ಚೆಯನ್ನು ಉಲ್ಲೇಖಿಸಿ, ಆ ಸಮಯದಲ್ಲಿ ದೇಶವನ್ನು ‘ಭಾರತ’ ಅಥವಾ ‘ಹಿಂದೂಸ್ಥಾನ’ ಎಂದು ಹೆಸರಿಸುವ ಪರವಾಗಿ “ಬಲವಾದ ಒಲವು” ಇತ್ತು ಎಂದು ಮನವಿ ಹೇಳಿದೆ. “ಆದಾಗ್ಯೂ, ದೇಶವನ್ನು ಅದರ ಮೂಲ ಮತ್ತು ಅಧಿಕೃತ ಹೆಸರಿನಿಂದ ಗುರುತಿಸುವ ಸಮಯ ಈಗ ಬಂದಿದೆ. ಅಂದರೆ ಭಾರತ ಎಂದು ಕರೆ ವಾಗ ವಿಶೇಷವಾಗಿ ನಮ್ಮ ನಗರಗಳನ್ನು ಭಾರತೀಯ ನೀತಿಯೊಂದಿಗೆ ಗುರುತಿಸಲು ಸಹಕಾರಿಯಾಗುತ್ತದೆ” ಅರ್ಜಿ ಹೇಳಿದೆ.

Translate »