ವಾಣಿಜ್ಯ-ವಹಿವಾಟು ಲಾಕ್‍ಡೌನ್
ಮೈಸೂರು

ವಾಣಿಜ್ಯ-ವಹಿವಾಟು ಲಾಕ್‍ಡೌನ್

May 30, 2020

ಮೈಸೂರು, ಮೇ 29(ಆರ್‍ಕೆ)- ಕೋವಿಡ್-19 ಲಾಕ್‍ಡೌನ್ ನಿರ್ಬಂಧದ ಅವಧಿಯಲ್ಲಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಗಳಲ್ಲಿನ ಹೋಟೆಲ್, ಅಂಗಡಿ-ಮುಂಗಟ್ಟುಗಳ ಉದ್ದಿಮೆ ರಹದಾರಿ ಶುಲ್ಕವನ್ನು ನಿಗಮವು ಮನ್ನಾ ಮಾಡಿದೆ.

ಈ ಕುರಿತು ರಾಜ್ಯದ ಎಲ್ಲಾ ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಪತ್ರ ಬರೆದಿರುವ ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರು, ಲಾಕ್‍ಡೌನ್ ಆರಂಭವಾದ ಮಾ.22 ರಿಂದ ಬಸ್ ನಿಲ್ದಾಣಗಳಲ್ಲಿ ವಾಣಿಜ್ಯ ಮಳಿಗೆ, ಜಾಹೀರಾತು ಪರ ವಾನಗಿದಾರರು, ಹೋಟೆಲ್‍ಗಳು ಸಂಪೂರ್ಣ ಬಂದ್ ಆಗಿರು ವುದರಿಂದ ಅವುಗಳ ಮಾಲೀಕರು ವ್ಯಾಪಾರವಿಲ್ಲದೆ ಸಂಕಷ್ಟದಲ್ಲಿದ್ದಾ ರೆಂದು ತಿಳಿಸಿದ್ದಾರೆ. ಆದ್ದರಿಂದ ಮೊಬೈಲ್ ಟವರ್ ಮತ್ತು ಎಟಿಎಂ ಕೌಂಟರ್ ಹೊರತುಪಡಿಸಿ ಉಳಿದ ವಾಣಿಜ್ಯ ಮಳಿಗೆದಾರರು ನಿಗಮಕ್ಕೆ ಪಾವತಿಸಬೇಕಿದ್ದ ಪರವಾನಗಿ ಶುಲ್ಕವನ್ನು ಲಾಕ್‍ಡೌನ್ ಮುಗಿಯುವವರೆಗೂ ಮನ್ನಾ ಮಾಡಲಾಗಿದೆ ಎಂದು ಕೆಎಸ್ ಆರ್‍ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕರು ತಿಳಿಸಿದ್ದಾರೆ.

ಮಾರ್ಚ್ 22ರಿಂದ ಲಾಕ್‍ಡೌನ್ ಮುಕ್ತಾಯವಾಗುವವರೆಗೆ ಬಸ್ ನಿಲ್ದಾಣ, ಬಸ್‍ಗಳ ಮೇಲೆ ಜಾಹೀರಾತು ಪ್ರದರ್ಶಿಸು ವವರು ಹಾಗೂ ಬಸ್ ನಿಲ್ದಾಣದಲ್ಲಿನ ಸಾರ್ವಜನಿಕ ಉದ್ಘೋ ಷಣಾ ವ್ಯವಸ್ಥೆ(Pಚಿ) ಅಳವಡಿಸುವವರು ನಿಗಮಕ್ಕೆ ಪಾವ ತಿಸ ಬೇಕಿದ್ದ ಪರವಾನಗಿ ಶುಲ್ಕ ಪಾವತಿಯಿಂದ ವಿನಾಯಿತಿ ನೀಡ ಲಾಗಿದೆ ಎಂದು ಅವರು ತಿಳಿಸಿದರು. ಉದ್ದಿಮೆದಾರರು ಒಂದು ವೇಳೆ ಮಾರ್ಚ್ ಮಾಹೆಯ ಪರವಾನಗಿ ಶುಲ್ಕವನ್ನು ಈಗಾಗಲೇ ಪಾವತಿಸಿದ್ದಲ್ಲಿ ಲಾಕ್‍ಡೌನ್ ಮುಗಿದು ವಾಣಿಜ್ಯ ವಹಿವಾಟು ಆರಂಭವಾದ ನಂತರ 10 ದಿನಗಳಿಗೆ ಹೊಂದಾಣಿಕೆ ಮಾಡಿಕೊಳ್ಳಲು ಕ್ರಮವಹಿಸಲಾಗುವುದು ಎಂದು ಹೇಳಲಾಗಿದೆ

Translate »