ಕೆಆರ್‍ಎಸ್‍ನಲ್ಲಿ ನಾಲ್ವಡಿ, ಸರ್ ಎಂವಿ ಪ್ರತಿಮೆ ನಿರ್ಮಾಣ
ಮೈಸೂರು

ಕೆಆರ್‍ಎಸ್‍ನಲ್ಲಿ ನಾಲ್ವಡಿ, ಸರ್ ಎಂವಿ ಪ್ರತಿಮೆ ನಿರ್ಮಾಣ

May 30, 2020

ಮೈಸೂರು, ಮೇ 29(ಆರ್‍ಕೆ)- ಕೋವಿಡ್-19 ಲಾಕ್‍ಡೌನ್ ನಿರ್ಬಂಧ ದಿಂದಾಗಿ ಕಳೆದ 2 ತಿಂಗಳಿಂದ ಸ್ಥಗಿತ ಗೊಂಡಿದ್ದ ಕೆಆರ್‍ಎಸ್ ಆಣೆಕಟ್ಟೆಯ ದಕ್ಷಿಣ ದ್ವಾರದ ಬಳಿಯ ನಾಲ್ವಡಿ ಕೃಷ್ಣರಾಜ ಒಡೆ ಯರ್ ಹಾಗೂ ಸರ್ ಎಂ. ವಿಶ್ವೇಶ್ವರಯ್ಯ ನವರ ಪ್ರತಿಮೆ ನಿರ್ಮಾಣ ಕಾಮ ಗಾರಿಯು ಶೀಘ್ರ ಪುನಾರಂಭವಾಗಲಿದೆ.

ಬೃಂದಾವನದ ಆವರಣದಲ್ಲಿ ಕೆಆರ್‍ಎಸ್ ಅಣೆಕಟ್ಟೆಯ ದಕ್ಷಿಣ ದ್ವಾರದ ಎದುರು 2 ಅಡಿ ಪೀಠದ ಮೆಲೆ 9 ಅಡಿ ಎತ್ತರಕ್ಕೆ ನಿರ್ಮಿಸಲುದ್ದೇಶಿಸಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ಅವರ ಅಮೃತ ಶಿಲೆಯ ಪ್ರತಿಮೆ ಹಾಗೂ ಮಂಟಪ ನಿರ್ಮಿಸುವ ಕಾಮಗಾರಿ ಪ್ರಗತಿ ಯಲ್ಲಿದ್ದು, ಲಾಕ್‍ಡೌನ್‍ನಿಂದಾಗಿ ಕಳೆದ ಮಾರ್ಚ್ 22ರಿಂದ ಕೆಲಸ ಸ್ಥಗಿತಗೊಂಡಿದೆ.

8.50 ಕೋಟಿ ರೂ. ವೆಚ್ಚದಲ್ಲಿ ಈ ಯೋಜ ನೆಗೆ 2017ರ ಜೂನ್ 19ರಂದು ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಕಾವೇರಿ ನೀರಾವರಿ ನಿಗಮವು ಕಾಮಗಾರಿ ಯನ್ನು ಮೈಸೂರಿನ ಗುತ್ತಿಗೆದಾರ ಹೆಚ್.ಎಸ್. ರಮೇಶ್ ಎಂಬುವರಿಗೆ ಒಪ್ಪಿಸಿತ್ತು.

STATUE PPT

ಅದರಂತೆ 2018ರ ಮಾರ್ಚ್ 5ರಿಂದ ಆರಂಭವಾಗಿರುವ ಪ್ರತಿಮೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಈ ಮಧ್ಯೆ ಲಾಕ್‍ಡೌನ್ ನಿರ್ಬಂಧ ಜಾರಿಯಾದ ಕಾರಣ ಸ್ಥಗಿತಗೊಂಡಿದೆ. ತಮಿಳುನಾಡಿಗೆ ವಾಪಸ್ ಹೋಗಿರುವ ಕಾರ್ಮಿಕರು ಬಂದ ಮೇಲೆ ಕೆಲಸ ಪುನಾರಂಭಗೊಳ್ಳಲಿದೆ ಎಂದು ಕಾವೇರಿ ನೀರಾವರಿ ನಿಗಮದ ಎಕ್ಸಿಕ್ಯೂ ಟಿವ್ ಇಂಜಿನಿಯರ್ (ಕೆಆರ್‍ಎಸ್) ರಾಜು ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ತಮಿಳುನಾಡಿನ ನುರಿತ ಕೆಲಸಗಾರರು ಪ್ರತಿಮೆ, ಮಂಟಪಗಳ ಕೆಲಸ ಮಾಡುತ್ತಿ ದ್ದಾರೆ. ಅಂತರರಾಜ್ಯ ಪ್ರಯಾಣಕ್ಕೆ ಅವ ಕಾಶ ನೀಡಿದ ನಂತರ ಅವರು ಬರಲಿದ್ದು, ಲಾಕ್‍ಡೌನ್ ಸಡಿಲಿಕೆ ಸಮಯ ಸಮೀ ಪಿಸುತ್ತಿರುವುದರಿಂದ ಇನ್ನೊಂದು ವಾರ ದಲ್ಲಿ ಕಾಮಗಾರಿ ಪುನಾರಂಭಗೊಳ್ಳುವ ಸಾಧ್ಯತೆ ಇದೆ ಎಂದು ರಾಜು ತಿಳಿಸಿದರು.

ಮಂಟಪ ನಿರ್ಮಿಸುವ ಕಾಮಗಾರಿ ಪ್ರಗತಿ ಯಲ್ಲಿದ್ದು, ಈವರೆಗೆ 1.23 ಕೋಟಿ ರೂ. ವೆಚ್ಚವಾಗಿದೆ. ಮುಂದೆ ಅಡೆ-ತಡೆ ಇಲ್ಲದೆ ಕಾಮಗಾರಿ ನಡೆದಲ್ಲಿ 6 ತಿಂಗಳೊಳಗಾಗಿ ಯೋಜನೆ ಪೂರ್ಣಗೊಳ್ಳಲಿದೆ ಎಂದರು.

Translate »