ಮೈಸೂರು ಮೃಗಾಲಯಕ್ಕೆ 25.14 ಲಕ್ಷ ರೂ. ಚೆಕ್ ಹಸ್ತಾಂತರಿಸಿದ ಎಸ್.ಟಿ.ಸೋಮಶೇಖರ್
ಮೈಸೂರು

ಮೈಸೂರು ಮೃಗಾಲಯಕ್ಕೆ 25.14 ಲಕ್ಷ ರೂ. ಚೆಕ್ ಹಸ್ತಾಂತರಿಸಿದ ಎಸ್.ಟಿ.ಸೋಮಶೇಖರ್

May 31, 2020

ಮೈಸೂರು, ಮೇ 30(ಎಂಟಿವೈ)- ಲಾಕ್‍ಡೌನ್‍ನಿಂದ ಆದಾಯದ ಮೂಲಕ್ಕೇ ಪೆಟ್ಟು ಬಿದ್ದಿದ್ದರಿಂದ ಕಷ್ಟಕ್ಕೆ ಸಿಲುಕಿದ್ದ ಮೈಸೂರು ಮೃಗಾಲಯಕ್ಕೆ ನೆರವಾಗುವ ದೃಷ್ಟಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮತ್ತೊಂದು ಹೆಜ್ಜೆ ಇಟ್ಟಿದ್ದು, ತಮ್ಮ ಬೆಂಬಲಿಗರಿಂದ ಸಂಗ್ರಹಿಸಿ ತಂದ 25,14, 500 ರೂ.ಗಳ ಚೆಕ್ ಅನ್ನು ಮೃಗಾಲಯದ ಅಧಿಕಾರಿ ಗಳಿಗೆ ಶನಿವಾರ ಹಸ್ತಾಂತರಿಸಿದರು.

ಮೃಗಾಲಯದ ಆವರಣದಲ್ಲಿರುವ ಆ್ಯಂಪಿ ಥಿಯೇಟರ್‍ನಲ್ಲಿ ಶನಿವಾರ ಬೆಳಿಗ್ಗೆ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ ಅವ ರಿಗೆ ಸಚಿವ ಎಸ್.ಟಿ.ಸೋಮಶೇಖರ್ ಚೆಕ್ ಹಸ್ತಾಂತರಿಸಿದರು.

ಬಳಿಕ ಮಾತನಾಡಿದ ಸಚಿವರು, ಲಾಕ್‍ಡೌನ್‍ನಿಂದ ಕಷ್ಟಕ್ಕೆ ಸಿಲುಕಿದ್ದ ಮೃಗಾಲಯಕ್ಕೆ ನೆರವು ನೀಡಲು ಪ್ರಾಮಾ ಣಿಕ ಪ್ರಯತ್ನ ಮಾಡಿದ್ದೇನೆ. ಈ ಬಾರಿ ಸ್ನೇಹಿತರಿಂದ 25,14,500 ರೂ. ಸಂಗ್ರಹ ವಾಗಿದೆ. ಈ ಮೊದಲು 2.38 ಕೋಟಿ ರೂ. ಚೆಕ್ ಹಸ್ತಾಂತರಿಸಲಾಗಿತ್ತು. ಒಟ್ಟಾರೆ ಯಾಗಿ 2.85 ಕೋಟಿ ರೂ. ದೇಣಿಗೆ ಸಂಗ್ರ ಹಿಸಿ ಮೃಗಾಲಯಕ್ಕೆ ನೀಡಿದಂತಾಗಿದೆ. ಮನವಿ ಮಾಡಿದ್ದಕ್ಕೆ ಇನ್ಫೋಸಿಸ್ ಫೌಂಡೇ ಷನ್‍ನಿಂದ 20 ಲಕ್ಷ ರೂ. ದೇಣಿಗೆ ಬಂದಿದೆ. ಇಲ್ಲಿನ ಪ್ರಾಣಿ-ಪಕ್ಷಿಗಳಲ್ಲದೆ, ಸಿಬ್ಬಂದಿಗಳ ಹಿತಕಾಯುವುದು ನಮ್ಮ ಕರ್ತವ್ಯ ಎಂದರು.

ಅಕ್ಕ ಸಂಘಟನೆಯಿಂದ 27 ಲಕ್ಷ ರೂ.: ಅಮೆರಿಕದಲ್ಲಿನ ಕನ್ನಡಿಗರ ಸಂಘಟನೆ `ಅಕ್ಕ’ ಸದಸ್ಯರನ್ನು ಸಂಪರ್ಕಿಸಿ, ಲಾಕ್ ಡೌನ್‍ನಿಂದಾಗಿ ಈ ಬಾರಿ ಅಕ್ಕ ಸಮ್ಮೇಳನ ನಡೆಸುವುದು ಕಷ್ಟ. ಬದಲಾಗಿ ಮೃಗಾ ಲಯಕ್ಕೆ ನೆರವಾಗಿ ಎಂದು ಕೋರಲಾಗಿತ್ತು. ಶುಕ್ರವಾರ ರಾತ್ರಿಯಷ್ಟೇ ಅಕ್ಕ ಸಂಘಟನೆ ಮುಖ್ಯಸ್ಥರು ಕರೆ ಮಾಡಿ, 27 ಲಕ್ಷ ರೂ. ಸಂಗ್ರ ಹಿಸಿರುವುದಾಗಿ ತಿಳಿಸಿದ್ದಾರೆ. ಶನಿವಾರ ರಾತ್ರಿ 8 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮಾಡಿದಾಗ ಇನ್ನಷ್ಟು ನೆರವು ನೀಡುವಂತೆ ಕೋರುವೆ. ಈ ವಾರ ಅಕ್ಕ ಸಂಸ್ಥೆಯಿಂ ದಲೂ ಆರ್ಥಿಕ ನೆರವು ಬರಲಿದೆ ಎಂದರು.

ಸಿದ್ಧತೆ ಮಾಡಿಕೊಂಡಿದ್ದಾರೆ: ಮೃಗಾ ಲಯದ ಬಾಗಿಲು ತೆರೆಯುವುದಕ್ಕೆ ಅಧಿ ಕಾರಿಗಳು ಮತ್ತು ಸಿಬ್ಬಂದಿ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಸರ್ಕಾರದ ಆದೇಶ ಎದುರು ನೋಡುತ್ತಿದ್ದಾರೆ. ಲೌಕ್‍ಡೌನ್ ಕೊನೆಗೊಂಡ ನಂತರ ತಕ್ಷಣದಲ್ಲೇ ಹೆಚ್ಚು ಪ್ರವಾಸಿಗರು ಮೃಗಾಲಯಕ್ಕೆ ಬರುವುದಿಲ್ಲ. ಆದರೂ ಪ್ರವಾಸಿಗರು, ಸಿಬ್ಬಂದಿ ಸುರಕ್ಷತೆ ಯೊಂದಿಗೆ ಪ್ರಾಣಿ-ಪಕ್ಷಿಗಳ ಸುರಕ್ಷತೆಯೂ ನಮಗೆ ಅಷ್ಟೇ ಮುಖ್ಯ ಎಂದು ತಿಳಿಸಿದರು.

ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ, ಮೃಗಾ ಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ, ವಿಧಾನ ಪರಿ ಷತ್ ಮಾಜಿ ಸದಸ್ಯ ಸಿ.ರಮೇಶ್ ಮತ್ತಿತರರಿದ್ದರು.

Translate »