ಮಾವಿನ ಮರ ಹೂ ಬಿಡದೆ ರೈತನಿಗೆ ಭಾರೀ ಕಷ್ಟ
ಮೈಸೂರು

ಮಾವಿನ ಮರ ಹೂ ಬಿಡದೆ ರೈತನಿಗೆ ಭಾರೀ ಕಷ್ಟ

June 1, 2020

ಮೈಸೂರು, ಮೇ 31(ವೈಡಿಎಸ್)- ಮಾವಿನ ಮರ ಚಿಗುರೊಡೆ ದರೂ ಹೂವು ಬಿಡದಿದ್ದರಿಂದ 1 ರೂಪಾಯಿಯೂ ಆದಾಯ ವಿಲ್ಲದಂತಾಗಿದೆ. ಇದರಿಂದ ಆರ್ಥಿಕ ಸಂಕಷ್ಟ ಎದುರಾಗಿದ್ದು, ಮಾವಿನ ತೋಟಕ್ಕೆ ಹೋಗಲು ಬೇಸರವಾಗುತ್ತದೆ… 9 ಎಕರೆ ಜಮೀ ನಿದೆ. 3 ಎಕರೆಯಲ್ಲಿ 50 ಬಾದಾಮಿ, 25 ರಸಪುರಿ, 5 ಸೇಂಧೂರಾ ಸೇರಿದಂತೆ ಒಟ್ಟು 80 ಮಾವಿನ ಮರಗಳಿವೆ. ಪ್ರತಿವರ್ಷವೂ ಮಾವಿನಮರ ಮೈತುಂಬಾ ಹೂವು ಬಿಟ್ಟು ಉತ್ತಮ ಫಸಲು ಬರುತ್ತಿತ್ತು. 10-15 ಟನ್ ಹಣ್ಣು ಸಿಗುತ್ತಿತ್ತು. ಹಣ್ಣನ್ನು ಹಾಪ್‍ಕಾಮ್ಸ್‍ಗೆ ನೀಡು ತ್ತಿದ್ದೆವು. 2-3 ಲಕ್ಷ ರೂ.ವರೆಗೂ ಆದಾಯವಾಗುತ್ತಿತ್ತು. ಈ ಬಾರಿ ಶೇ.5ರಷ್ಟೂ ಹೂವು ಬಿಡದ ಕಾರಣ ಕೇವಲ 8 ಕ್ರೇಟ್ ಮಾವಿನಹಣ್ಣು ಸಿಕ್ಕಿದೆ. ತೋಟಕ್ಕೆ ಹೋಗಲು ಬೇಸರವಾಗುತ್ತದೆ ಎಂದು ದೊಡ್ಡ ಕಾಟೂರು ನಿವಾಸಿ ಅಪ್ಪಯ್ಯ `ಮೈಸೂರು ಮಿತ್ರ’ ನೊಂದಿಗೆ ಅಳಲು ತೋಡಿಕೊಂಡರು. 2.5 ಎಕರೆ ಪ್ರದೇಶದಲ್ಲಿ ಬದನೆ ಬೆಳೆದಿದ್ದು, ಉತ್ತಮವಾಗಿ ಬಂದಿದೆ. 20 ದಿನದಲ್ಲಿ ಕೊಯ್ಲು ಮಾಡಬೇಕು. ಅಷ್ಟರಲ್ಲಿ ಬೆಲೆ ಕಡಿಮೆ ಯಾದರೆ ಏನು ಮಾಡುವುದು? ಈ ಬಾರಿ ಯಾವ ಬೆಳೆಯಿಂದಲೂ ಖರ್ಚು ಮಾಡಿದಷ್ಟೂ ಹಣ ಸಿಗುತ್ತಿಲ್ಲ. ಆರ್ಥಿಕ ಸಂಕಷ್ಟ ಎದುರಾಗಿದ್ದು, ಜೀವನ ನಡೆಸುವುದೇ ದುಸ್ತರವಾಗಿದೆ ಎಂದು ನೋವು ತೋಡಿಕೊಂಡರು.

Translate »