ಬೆಡ್ ರೂಮ್‍ನಲ್ಲಿದ್ದ ನಾಗರಹಾವು ರಕ್ಷಿಸಿದ ಸ್ನೇಕ್‍ಶ್ಯಾಂ
ಮೈಸೂರು

ಬೆಡ್ ರೂಮ್‍ನಲ್ಲಿದ್ದ ನಾಗರಹಾವು ರಕ್ಷಿಸಿದ ಸ್ನೇಕ್‍ಶ್ಯಾಂ

June 5, 2020

ಮೈಸೂರು,ಜೂ.4-ತುಂಬು ಗರ್ಭಿಣಿಯೊಬ್ಬರ ಬೆಡ್ ರೂಮಿನಲ್ಲಿದ್ದ ನಾಗರ ಹಾವನ್ನು ಉರಗ ರಕ್ಷಕ ಸ್ನೇಕ್‍ಶ್ಯಾಂ ಹಿಡಿದಿದ್ದಾರೆ.
ಮೈಸೂರು ಸಮೀಪದ ಸಿದ್ದಲಿಂಗಪುರದ ಮಾದೇಶ್ ಅವರ ಮನೆಗೆ ಬುಧವಾರ ಮಧ್ಯರಾತ್ರಿ ನಾಗರಹಾವು ನುಗ್ಗಿತ್ತು. ತಾಯಿಯೊಂದಿಗೆ ತುಂಬು ಗರ್ಭಿಣಿ ಮಲಗಿದ್ದ ಕೊಠಡಿಯಲ್ಲಿ ರಾತ್ರಿ ಸುಮಾರು 12.45ರ ವೇಳೆಯಲ್ಲಿ ಬುಸುಗುಡುವ ಸದ್ದು ಕೇಳಿಸಿದೆ. ತಕ್ಷಣ ಲೈಟ್ ಆನ್ ಮಾಡಿ, ನೋಡಿದಾಗ ಹಾವು ಕಾಣಿಸಿದೆ. ಗಾಬರಿ ಯಿಂದ ಮನೆಯವರೆಲ್ಲಾ ಹೊರಗೆ ಬಂದಿದ್ದಾರೆ.

ಗದ್ದಲ ಕೇಳಿ ಎಚ್ಚರವಾದ ನೆರೆಹೊರೆಯವರು ಮಾದೇಶ್ ಮನೆ ಮುಂದೆ ಜಮಾಯಿಸಿ, ಸ್ನೇಕ್ ಶ್ಯಾಂಗೆ ಕರೆ ಮಾಡಿ, ವಿಷಯ ತಿಳಿಸಿದ್ದಾರೆ. ಅರ್ಧ ಗಂಟೆಯಲ್ಲಿ ಆಗಮಿಸಿದ ಸ್ನೇಕ್ ಶ್ಯಾಂ, ಕೊಠಡಿಯನ್ನೆಲ್ಲಾ ಹುಡುಕಾಡಿ, ಮಂಚದ ಕೆಳಗಿದ್ದ ಸೂಟ್‍ಕೇಸ್‍ನಡಿ ಮಲಗಿದ್ದ ಸುಮಾರು ಐದು ಅಡಿ ಉದ್ದದ ನಾಗರಹಾವನ್ನು ಹಿಡಿದು, ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ. ಗುರುವಾರ ರಾತ್ರಿಯೂ ವಿಜಯನಗರ 4ನೇ ಹಂತ ಹಾಗೂ ಹಿನಕಲ್‍ನಲ್ಲಿ 2 ಹಾವುಗಳನ್ನು ರಕ್ಷಿಸಿದ್ದಾರೆ.

Translate »