ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅವರ ಪುತ್ರ ಕಡ್ಲೆಪುರಿ ತಿನ್ನುತ್ತಿದ್ರಾ?
ಮೈಸೂರು

ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅವರ ಪುತ್ರ ಕಡ್ಲೆಪುರಿ ತಿನ್ನುತ್ತಿದ್ರಾ?

June 5, 2020

ಮೈಸೂರು, ಜೂ.4(ಆರ್‍ಕೆಬಿ)- `ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಯಾಗಿದ್ದಾಗ ಅವರ ಮಗ ಕಡ್ಲೆಪುರಿ ತಿನ್ನುತ್ತಿದ್ರಾ? ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ವಿಜ ಯೇಂದ್ರ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಟೀಕಿಸಲು ಅವರಿಗೇನು ಹಕ್ಕಿದೆ?’ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸಹಕಾರ ಸಚಿವ ಎಸ್.ಟಿ.ಸೋಮ ಶೇಖರ್ ಇಂದಿಲ್ಲಿ ಕಿಡಿಕಾರಿದರು.

`ಬಿ.ಎಸ್.ಯಡಿಯೂರಪ್ಪ ಮುಖ್ಯ ಮಂತ್ರಿ, ಅವರ ಮಗ ಸೂಪರ್ ಮುಖ್ಯ ಮಂತ್ರಿ’ ಎಂಬ ಸಿದ್ದರಾಮಯ್ಯ ಟೀಕೆಗೆ ಸಚಿವ ಸೋಮಶೇಖರ್ ಖಾರವಾಗಿಯೇ ಪ್ರತಿ ಕ್ರಿಯಿಸಿದರು.

ಗುರುವಾರ ಮೈಸೂ ರಿನಲ್ಲಿ ಸುದ್ದಿಗಾರರೊಂ ದಿಗೆ ಮಾತನಾಡಿದ ಸಚಿ ವರು, ಸಿದ್ದರಾಮಯ್ಯ ಅವರೂ 5 ವರ್ಷ ಮುಖ್ಯಮಂತ್ರಿಯಾಗಿ ದ್ದರು. ಆಗ ಅವರ ಮಗ ಏನು ಮಾಡು ತ್ತಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಮಾತಿನಲ್ಲೇ ತಿವಿದರು.

ಸಿದ್ದರಾಮಯ್ಯ ಕೇವಲ ರಾಜಕೀಯ ಉದ್ದೇಶಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡು ತ್ತಿದ್ದಾರೆ ಅಷ್ಟೆ. ನಾನು ಸಚಿವನಾಗಿ 3 ತಿಂಗ ಳಾಯ್ತು. ಸಹಕಾರ ಇಲಾಖೆಗೆ ಸಂಬಂ ಧಿಸಿ 2 ದಿನಕ್ಕೊಮ್ಮೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದೇನೆ. ವಿಶೇಷ ಚಿಂತನೆ ಗಳನ್ನು ಅವರು ಹಂಚಿಕೊಳ್ಳುತ್ತಾರೆಯೇ ಹೊರತು, ಎಂದಿಗೂ ನನ್ನ ಮಗನನ್ನು ಭೇಟಿ ಮಾಡಿ ಎಂದು ಹೇಳಿಲ್ಲ. ಬೇರೆ ಯಾವ ಮಂತ್ರಿಗಳಿಗೂ ಹೇಳಿಲ್ಲ. ವರ್ಗಾವಣೆ ಅಥವಾ ಬೇರೆ ಯಾವುದೇ ವಿಚಾರಕ್ಕೂ ವಿಜಯೇಂದ್ರ ಮಧ್ಯಪ್ರವೇಶ ಮಾಡಿಲ್ಲ. ಒಮ್ಮೆಯೂ ವಿಜಯೇಂದ್ರ ರಾಜಕೀಯವಾಗಿ ಯಾಗಲೀ, ಸರ್ಕಾರದ ವಿಚಾರದಲ್ಲಾಗಲೀ ಹಸ್ತಕ್ಷೇಪ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಸಿಎಂ ಹುದ್ದೆ ಖಾಲಿ ಇಲ್ಲ: ಪಾದರಸ ದಂತೆ ಇರುವ ಸಿಎಂ ಯಡಿ ಯೂರಪ್ಪ ಅವರು ದಿನದ 24 ಗಂಟೆಯೂ ಕೆಲಸ ಮಾಡುತ್ತಿದ್ದಾರೆ. ಇನ್ನೂ 3 ವರ್ಷ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ. ಹಾಗಾಗಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ ಎಂದು ಪ್ರತಿಕ್ರಿಯಿಸಿದರು. ನಮ್ಮ ಮುಖ್ಯ ಮಂತ್ರಿ ಗಳು ಮಾತಿಗೆ ತಪ್ಪುವುದಿಲ್ಲ. ಕೊಟ್ಟ ಮಾತನ್ನು ಶೇ.100ರಷ್ಟು ಈಡೇರಿಸಿದ್ದಾರೆ. ನಮ್ಮಲ್ಲಿ ಅಸಮಾಧಾನ, ಭಿನ್ನಮತ ಯಾವುದೂ ಇಲ್ಲ ಎಂದು ಸ್ಪಷ್ಟಪಡಿಸಿದರು.

Translate »