ರಾಮಕೃಷ್ಣನಗರದ ಜಿ-ಬ್ಲಾಕ್‍ನಲ್ಲಿ ಜನರ ಚಲನ-ವಲನದ ಮೇಲೆ ನಿರ್ಬಂಧ
ಮೈಸೂರು

ರಾಮಕೃಷ್ಣನಗರದ ಜಿ-ಬ್ಲಾಕ್‍ನಲ್ಲಿ ಜನರ ಚಲನ-ವಲನದ ಮೇಲೆ ನಿರ್ಬಂಧ

June 5, 2020

ಮೈಸೂರು, ಜೂ. 4(ಆರ್‍ಕೆ) ತಾಯಿ, ಗರ್ಭಿಣಿ, ಮಗಳಿಗೆ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ನಿರ್ಬಂಧಿತ ಪ್ರದೇಶ ಎಂದು ಘೋಷಿಸಿರುವ ಮೈಸೂ ರಿನ ರಾಮಕೃಷ್ಣನಗರದ ‘ಜಿ’ ಬ್ಲಾಕಿನ 6, 7 ಮತ್ತು 8ನೇ ಕ್ರಾಸ್‍ಗಳನ್ನು ಸಂಪೂರ್ಣ ಸೀಲ್‍ಡೌನ್ ಮಾಡಲಾಗಿದೆ.

ಬುಧವಾರ ಬೆಳಗ್ಗೆಯೇ ರಾಮಕೃಷ್ಣನಗ ರದ ‘ಜಿ’ ಬ್ಲಾಕ್ ಸಂಪರ್ಕ ಕಲ್ಪಿಸುವ ದಕ್ಷಿ ಣೇಶ್ವರ ಮುಖ್ಯರಸ್ತೆ ಸೇರಿದಂತೆ 6, 7 ಮತ್ತು 8 ಅಡಿ ಎತ್ತರಕ್ಕೆ ಕಬ್ಬಿಣದ ಬ್ಯಾರಿಕೇಡ್ ಗಳನ್ನು ಅಳವಡಿಸಿ ಆ ಭಾಗದ ಸಂಚಾರ ವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ.

7ನೇ ಕ್ರಾಸಿನ ಮನೆಯೊಂದರಲ್ಲಿ ಹೋಂ ಕ್ವಾರಂಟೈನ್‍ನಲ್ಲಿದ್ದ ತಾಯಿ, ಗರ್ಭಿಣಿ ಮಗಳಿಗೆ ಕೋವಿಡ್-19 ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಆ ಮನೆ ಸುತ್ತಲಿನ 100 ಮೀಟರ್ ಪ್ರದೇಶವನ್ನು ನಿಯಂತ್ರಿತ ಪ್ರದೇಶ (ಛಿoಟಿಣಚಿiಟಿmeಟಿಣ zoಟಿe)ಎಂದು ಘೋಷಿಸಿ ಸಂಪೂರ್ಣ ಸೀಲ್‍ಡೌನ್ ಮಾಡಲಾಗಿದೆ.

ಮನೆಯಿಂದ ಹೊರಬರುವಂತಿಲ್ಲ: ನಿರ್ಬಂ ಧಿತ ಪ್ರದೇಶಕ್ಕೊಳಪಟ್ಟಿರುವ ಸರಹದ್ದಿನಲ್ಲಿ ಸುಮಾರು 150 ಮನೆಗಳಿದ್ದು, 14 ದಿನ ಗಳವರೆಗೆ ಅಲ್ಲಿನ ನಿವಾಸಿಗಳು ಮನೆಯಲ್ಲೇ ಇರಬೇಕು. ಯಾರೂ ಯಾವುದೇ ಉದ್ದೇಶದಿಂದಲೂ ಹೊರಬರದಂತೆ ನಿರ್ಬಂಧ ಹೇರಲಾಗಿದೆ.

ಅಗತ್ಯ ಸಾಮಗ್ರಿ ಪೂರೈಕೆ: ಸೀಲ್‍ಡೌನ್ ಮಾಡಿರುವ ಪ್ರದೇಶದ ನಿವಾಸಿಗಳಿಗೆ ದಿನಸಿ, ಹಾಲು, ಹಣ್ಣು, ತರಕಾರಿ, ಔಷಧಿ ಯಂತಹ ಅತ್ಯಗತ್ಯ ವಸ್ತುಗಳು ಹಾಗೂ ಇನ್ನಿತರ ಸಾಮಗ್ರಿಗಳನ್ನು ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳೇ ಪೂರೈಸಲು ವ್ಯವಸ್ಥೆ ಮಾಡಿದ್ದಾರೆ.

ಚೆಕ್‍ಪೋಸ್ಟ್: ದಕ್ಷಿಣೇಶ್ವರ ಮುಖ್ಯ ರಸ್ತೆಯ 6ನೇ ಕ್ರಾಸ್ ಬಳಿ ಚೆಕ್‍ಪೋಸ್ಟ್ ಮಾಡಿದ್ದು, ಯಾರು ಯಾವುದೇ ವಸ್ತು ಪೂರೈಸಬೇಕಾದರೂ ಚೆಕ್‍ಪೋಸ್ಟ್ ಮೂಲಕವೇ ಹಾದು ಹೋಗಬೇಕು. ಆದರೆ ಪಾಲಿಕೆ ಸಿಬ್ಬಂದಿ ಅಲ್ಲಿ ರಸಾಯನಿಕ ಸಿಂಪಡಿಸಿದ ನಂತರವಷ್ಟೇ ಕಂಟೇನ್ಮೆಂಟ್ ಝೋನ್ ಒಳಗೆ ಪ್ರವೇಶವಿರುತ್ತದೆ.

ಆರೋಗ್ಯ ತಪಾಸಣೆ: ಆರೋಗ್ಯ ಇಲಾಖೆ ಹಿರಿಯ ಹೆಲ್ತ್ ಇನ್‍ಸ್ಪೆಕ್ಟರ್ ಶಂಕರಲಿಂಗೇಗೌಡ ನೇತೃತ್ವದಲ್ಲಿ ನಾಲ್ವರು ನರ್ಸ್‍ಗಳು ನಿಯಂತ್ರಿತ ಪ್ರದೇಶದ ನಿವಾಸಿ ಗಳಿಗೆ ದಿನನಿತ್ಯ ಬೆಳಿಗ್ಗೆ ಪ್ರತೀ ಮನೆಗಳಿಗೆ ತೆರಳಿ ಥರ್ಮಲ್ ಸ್ಕ್ರೀನಿಂಗ್ ಮೂಲಕ ಟೆಂಪರೇಚರ್ ನೋಡಿ, ಇತರ ರೋಗ ಲಕ್ಷಣಗಳ ಪರೀಕ್ಷೆ ನಡೆಸುವುದಲ್ಲದೇ, ಕೊರೊನಾ ವೈರಸ್ ಸೋಂಕು ಹರಡ ದಂತೆ ಕೈಗೊಳ್ಳಬೇಕಾದ ಅಗತ್ಯ ಮುಂಜಾ ಗ್ರತಾ ಕ್ರಮದ ಬಗ್ಗೆ ನಿವಾಸಿಗಳಿಗೆ ತಿಳು ವಳಿಕೆ ನೀಡುತ್ತಿದ್ದಾರೆ.

24 ಗಂಟೆ ಕಟ್ಟೆಚ್ಚರ: ಸೀಲ್‍ಡೌನ್ ಮಾಡಿ ರುವ ರಾಮಕೃಷ್ಣನಗರ ‘ಜಿ’ ಬ್ಲಾಕ್‍ನ ಚೆಕ್ ಪೋಸ್ಟ್‍ನಲ್ಲಿ ದಿನದ 24 ಗಂಟೆಯೂ 3 ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ಕುವೆಂಪು ನಗರ ಠಾಣೆ ಪೊಲೀಸರನ್ನು ನಿಯೋಜಿಸಿ ಕಟ್ಟೆಚ್ಚರ ವಹಿಸಲಾಗಿದೆ. ಮಧ್ಯರಾತ್ರಿಯೂ ಬಂದೋಬಸ್ತ್ ಸಿಬ್ಬಂದಿ ಎಚ್ಚರದಿಂ ದಿದ್ದು, ಯಾರೂ ಆ ಭಾಗದಲ್ಲಿ ಸಂಚರಿ ಸದಂತೆ ಕಟ್ಟೆಚ್ಚರ ವಹಿಸುತ್ತಿದ್ದಾರೆ.

ಮೈಸೂರು ಮಹಾನಗರ ಪಾಲಿಕೆ ಉಪ ಆಯುಕ್ತ ಶಿವಾನಂದಮೂರ್ತಿ, ಅಭಿವೃದ್ಧಿ ಅಧಿಕಾರಿ ಸತ್ಯಮೂರ್ತಿ, ಅಸಿಸ್ಟೆಂಟ್ ಇಂಜಿನಿ ಯರ್ ಅನಂತ, ಸಹಾಯಕ ಕಂದಾ ಯಾಧಿಕಾರಿ ಮಧು, ಕಂಟೇನ್ಮೆಂಟ್ ವಲ ಯದ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಪಾಲಿಕೆ ಆರೋಗ್ಯಾಧಿಕಾರಿಗಳಾದ ಡಾ. ಜಯಂತ್, ಡಾ.ಡಿ.ಜಿ.ನಾಗರಾಜ್ ಅವರೂ ದಿನಕ್ಕೆರಡು ಭಾರಿ ನಿಯಂತ್ರಿತ ಪ್ರದೇಶಕ್ಕೆ ಭೇಟಿ ನೀಡಿ ಸೌಲಭ್ಯಗಳನ್ನು ಪರಿಶೀಲಿಸುತ್ತಿದ್ದಾರೆ.

ಸಾರ್ವಜನಿಕರಲ್ಲಿ ಆತಂಕ: ಮಹಾ ರಾಷ್ಟ್ರದಿಂದ ಹಿಂದಿರುಗಿ ಕ್ವಾರಂಟೈನ್‍ನಲ್ಲಿದ್ದ ತಾಯಿ ಮತ್ತು ಗರ್ಭಿಣಿ ಮಗಳಿಗೆ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿರುವುದ ರಿಂದ ರಾಮಕೃಷ್ಣನಗರದ ‘ಜಿ’ ಬ್ಲಾಕ್ ಮತ್ತು ಸುತ್ತಲಿನ ಜನರಲ್ಲಿ ಆತಂಕ ಉಂಟಾಗಿದ್ದು, ಮುಖ್ಯರಸ್ತೆಯ ಅಂಗಡಿ-ಮುಂಗಟ್ಟುಗಳನ್ನು ತೆರೆಯಲು ವರ್ತಕರು ಹಿಂದೆ ಮುಂದೆ ನೋಡುತ್ತಿದ್ದಾರೆ.

Translate »