ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ
ಮೈಸೂರು

ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ

June 11, 2020

ಮೈಸೂರು, ಜೂ.10(ಎಂಕೆ)- ಹೆಸರಿ ಗಷ್ಟೇ ಕೊರೊನಾ ವಾರಿಯರ್ಸ್, 11 ವರ್ಷ ದಿಂದಲೂ ಶಿಷ್ಯವೇತನ ಆಧಾರದ ಮೇಲೆಯೇ ಕೆಲಸ, 8ರಿಂದ 10 ಸಾವಿರ ರೂ.ಗಳಲ್ಲೇ ಜೀವನ ನಿರ್ವಹಣೆ, ದಿನದ 12 ಗಂಟೆ ದುಡಿದರೂ ‘ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ’ ಒರೆಸುವ ಕೆಲಸವಾಗುತ್ತಿದೆ ಎಂಬ ನೋವು… ಇದು ಕೆ.ಆರ್.ಆಸ್ಪತ್ರೆ, ಚೆಲುವಾಂಬ ಮತ್ತು ಪಿಕೆಟಿಬಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿ ಸುತ್ತಿರುವ ಸ್ಟಾಫ್‍ನರ್ಸ್‍ಗಳ ಅಳಲು.

ಮೈಸೂರಿನ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಯಿಂದ ಶಿಷ್ಯವೇತನ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಸ್ಟಾಫ್‍ನರ್ಸ್‍ಗಳಿಗೆ ಮಾತ್ರ ಕಡಿಮೆ ಶಿಷ್ಯವೇತನ ನೀಡಲಾಗುತ್ತಿದೆ. ಇಂದಲ್ಲ ನಾಳೆ ಖಾಯಂ ಆಗಬಹುದು ಅಥವಾ ಶಿಷ್ಯ ವೇತನ ಹೆಚ್ಚಾಗಬಹುದೇನೋ ಎಂದು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಜನರಲ್ ನರ್ಸಿಂಗ್ ಮತ್ತು ಮಿಡ್‍ವೈಫರಿ (ಜಿಎನ್‍ಎಂ) ಕೋರ್ಸ್ ಮುಗಿಸಿ, ಶಿಷ್ಯ ವೇತನ ಆಧಾರದ ಮೇಲೆ ಕೆಲಸ ಮಾಡು ತ್ತಿರುವ 140ಕ್ಕೂ ಹೆಚ್ಚು ಸ್ಟಾಫ್‍ನರ್ಸ್‍ಗಳ ಸ್ಥಿತಿ ಚಿಂತಾಜನಕವಾಗಿದೆ. ಕೋರ್ಸ್ ಮುಗಿದು ವರ್ಷಗಳೇ ಕಳೆದರೂ ಇತ್ತ ಒಳ್ಳೆಯ ಕಡೆ ಕೆಲಸವೂ ಸಿಗದೆ, 8ರಿಂದ 10 ಸಾವಿರ ರೂ. ಶಿಷ್ಯವೇತನಕ್ಕೆ ದುಡಿಯಬೇಕಾದ ಅನಿವಾರ್ಯ ಪರಿಸ್ಥಿತಿಯಿದೆ.

ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಗೃಹ ವೈದ್ಯರು, ಪಿಜಿ ವಿದ್ಯಾರ್ಥಿಗಳು, ಸೂಪರ್ ಸ್ಪೆಷಾಲಿಟಿ ಮತ್ತು ಫೆಲೋಶಿಪ್ ವಿದ್ಯಾರ್ಥಿ ಗಳು ಹಾಗೂ ಸೀನಿಯರ್ ರೆಸಿಡೆಂಟ್‍ಗಳ ವೇತನ ಪರಿಷ್ಕರಿಸಿ ಹೊರಡಿಸಿದ ಆದೇಶದ ಮೇರೆಗೆ 20 ಸಾವಿರ ರೂ. ಇದ್ದ ಗೃಹ ವೈದ್ಯರ ಶಿಷ್ಯವೇತನ 30 ಸಾವಿರ ರೂ.ಗೆ ಹೆಚ್ಚಳಗೊಂಡಿತು. ಅದೇ ರೀತಿ ಸ್ನಾತ ಕೋತ್ತರ ವೈದ್ಯ ವಿದ್ಯಾರ್ಥಿಗಳ ಶಿಷ್ಯವೇತನ ಪ್ರಥಮ ವರ್ಷಕ್ಕೆ 45 ಸಾವಿರ ರೂ. (ಪರಿ ಷ್ಕರಣೆ ಮುನ್ನ 30 ಸಾವಿರ ರೂ.), ದ್ವಿತೀಯ ವರ್ಷಕ್ಕೆ 50 ಸಾವಿರ ರೂ. (35 ಸಾವಿರ ರೂ.), ತೃತೀಯ ವರ್ಷಕ್ಕೆ 55 ಸಾವಿರ ರೂ.(40 ಸಾವಿರ ರೂ.), ಸೂಪರ್ ಸ್ಪೆಷಾ ಲಿಟಿ ವೈದ್ಯಕೀಯ ವಿದ್ಯಾರ್ಥಿಗಳ ಶಿಷ್ಯವೇತನ ಸಂಬಂಧ ಪ್ರಥಮ ವರ್ಷಕ್ಕೆ 55 ಸಾವಿರ ರೂ. (40 ಸಾವಿರ ರೂ.), ದ್ವಿತೀಯ ವರ್ಷಕ್ಕೆ 60 ಸಾವಿರ ರೂ. (45 ಸಾವಿರ ರೂ.), ತೃತೀಯ ವರ್ಷಕ್ಕೆ 65 ಸಾವಿರ ರೂ.(50 ಸಾವಿರ ರೂ.), ಸೀನಿಯರ್ ರೆಸಿಡೆಂಟ್ಸ್ (ಕಡ್ಡಾಯ ಸರ್ಕಾರಿ ಸೇವೆ) 60 ಸಾವಿರ ರೂ. (45 ಸಾವಿರ ರೂ.) ಹಾಗೂ 30 ಸಾವಿರ ರೂ. ಇದ್ದ ಫೆಲೋಶಿಪ್ ವಿದ್ಯಾರ್ಥಿಗಳ ಶಿಷ್ಯ ವೇತನವನ್ನು 60 ಸಾವಿರ ರೂ.ಗೆ ಹೆಚ್ಚಳ ಮಾಡಲಾಗಿದೆ. ಆದರೆ, ದಿನದ 12 ಗಂಟೆಗಳ ಕಾಲ ರೋಗಿಗಳ ಸೇವೆ ಮಾಡುವ ಸ್ಟಾಫ್‍ನರ್ಸ್‍ಗಳಿಗೆ ಮಾತ್ರ ಮಾಸಿಕ ಕಡಿಮೆ ಶಿಷ್ಯವೇತನ ನೀಡಲಾಗುತ್ತಿದೆ. 6 ತಿಂಗಳು ಶಿಷ್ಯವೇತನಕ್ಕೆ ಕೆಲಸ ಮಾಡುತ್ತಿದ್ದು, ರಿನಿವಲ್ ಮಾಡುವಾಗ ಒಂದೆರಡು ತಿಂಗಳು ಕೆಲಸ ವಿಲ್ಲದೆ ಮನೆಯಲ್ಲಿಯೇ ಕಾಲ ಕಳೆಯ ಬೇಕಾಗುತ್ತದೆ ಎಂದು ಹೆಸರು ಹೇಳಲಿಚ್ಛಿ ಸದ ಶುಶ್ರೂಷಕಿಯೊಬ್ಬರು ‘ಮೈಸೂರು ಮಿತ್ರ’ನ ಬಳಿ ಅಳಲು ತೋಡಿಕೊಂಡರು.

ಇಎಸ್‍ಐ, ಪಿಎಫ್ ವ್ಯವಸ್ಥೆಯಿಲ್ಲ: ಶಿಷ್ಯ ವೇತನ ಆಧಾರ ಕೆಲಸ ಮಾಡುವುದ ರಿಂದ ನಮಗೆ ಯಾವುದೇ ಇಎಸ್‍ಐ, ಪಿಎಫ್ ಸೌಲಭ್ಯವಿರುವುದಿಲ್ಲ. ನಮ್ಮನ್ನು ಕೋವಿಡ್ ಡ್ಯೂಟಿಗೆ ಹಾಕಲಾಗಿತ್ತು. ನಮಗೇ ನಾದರೂ ಸೋಂಕು ಹರಡಿದ್ದರೆ ಗತಿಯೇನು? ಯಾವುದೇ ವೈದ್ಯಕೀಯ ಸೌಲಭ್ಯಗಳಿ ಲ್ಲದಿದ್ದರೂ ಕೊರೊನಾ ವಿರುದ್ಧ ಹೋರಾ ಡಿದ್ದೇವೆ. ತಿಂಗಳುಗಟ್ಟಲೇ ಮನೆಗೆ ಹೋಗದೆ ಕೆಲಸ ಮಾಡಿದ್ದೇವೆ ಎಂದು ಹೇಳಿದರು.

Translate »