ಆಯ್ಕೆ ಪಟ್ಟಿ ಪ್ರಕಟಿಸದಂತೆ ಮೈಮುಲ್‍ಗೆ ಸಾ.ರಾ.ಮಹೇಶ್ ಪತ್ರ
ಮೈಸೂರು

ಆಯ್ಕೆ ಪಟ್ಟಿ ಪ್ರಕಟಿಸದಂತೆ ಮೈಮುಲ್‍ಗೆ ಸಾ.ರಾ.ಮಹೇಶ್ ಪತ್ರ

August 18, 2020

ಮೈಸೂರು, ಆ.17 (ಆರ್‍ಕೆಬಿ)- ಮೈಸೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟದ (ಮೈಮುಲ್) ವತಿಯಿಂದ ವಿವಿಧ ಹುದ್ದೆ ನೇಮಕಾತಿಗೆ ನಮ್ಮ ವಿರೋಧ ಇಲ್ಲ. ಆದರೆ ನೇಮಕಾತಿ ಪಾರದರ್ಶಕವಾಗಿ ರಬೇಕು. ಕೆಲಸ ಅರಸಿ ಬರುವ ಅಭ್ಯರ್ಥಿ ಗಳಿಗೆ ಅನ್ಯಾಯವಾಗಬಾರದು ಎಂಬುದು ನಮ್ಮ ಹೋರಾಟ ಎಂದು ಕೆ.ಆರ್.ನಗರ ಶಾಸಕ ಸಾ.ರಾ.ಮಹೇಶ್ ಇಂದಿಲ್ಲಿ ತಿಳಿಸಿದರು.

ಮೈಸೂರಿನ ತಮ್ಮ ಕಚೇರಿಯಲ್ಲಿ ಸೋಮವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಮುಲ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ಹೋರಾಟ ನಡೆಸಿದ್ದೇವೆ. ಹೈಕೋರ್ಟ್ ರಿಟ್ ಪಿಟಿಷನ್ ನಂ.912302020ರಲ್ಲಿ ಆ.13ರಂದು ಮಧ್ಯಂತರ ಆದೇಶ ನೀಡಿದ್ದು, ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಬಾರ ದೆಂದು ಆದೇಶ ನೀಡಿದೆ. ಹಾಗಾಗಿ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸದಂತೆ ಮೈಮುಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದೇನೆ ಎಂದರು. ಅಕ್ರಮ ಆಗಿದೆಯೇ? ಇಲ್ಲವೇ? ಎಂಬುದು ಬಹಿರಂಗವಾಗಬೇಕು. ಅಕ್ರಮ ಆಗಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳ ಬೇಕು ಎಂದು ಆಗ್ರಹಿಸಿದÀರು. ಗೋಷ್ಠಿಯಲ್ಲಿ ಜಿಪಂ ಸದಸ್ಯ ಎಂ.ಟಿ.ಕುಮಾರ್, ಜೆಡಿಎಸ್ ನಗರ ಕಾರ್ಯಾ ಧ್ಯಕ್ಷ ಪ್ರಕಾಶ್ ಪ್ರಿಯದರ್ಶನ್ ಇನ್ನಿತರರು ಇದ್ದರು.

Translate »