ವಿ.ಪೇಟೆಯಲ್ಲಿ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ
ಕೊಡಗು

ವಿ.ಪೇಟೆಯಲ್ಲಿ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ

November 12, 2020

ವಿರಾಜಪೇಟೆ, ನ.11- ಕೋವಿಡ್-19ರ ಸಮಸ್ಯೆಯಿಂದಾಗಿ ಶಾಲೆಗಳು ಮುಚ್ಚಿ ರುವ ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಬಿವೃದ್ಧಿ ಯೋಜನೆಯಿಂದ ಆಸಕ್ತ ಗ್ರಾಮೀಣ ವಿದ್ಯಾರ್ಥಿಗಳಿಗೆ 5ನೇ ತರಗತಿ ಯಿಂದ 10 ನೇ ತರಗತಿವರೆಗೆ ಇಂಗ್ಲೀಷ್, ವಿಜ್ಞಾನ, ಗಣಿತದ ವಾರ್ಷಿಕ ಪಾಠ್ಯಗಳನ್ನು ಟ್ಯಾಬ್‍ಗಳಲ್ಲಿ ಜೋಡಿಸಿ ಮಕ್ಕಳ ಉಪ ಯೋಗಕ್ಕಾಗಿ ನೀಡಲಾಗುತ್ತಿದೆ ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಿರಾಜಪೇಟೆ ಪುರಭವನದಲ್ಲಿ ಹಮ್ಮಿಕೊಂಡಿದ್ದ ”ಗ್ರಾಮೀಣ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ ದಲ್ಲಿ ಅಂತರ್ಜಾಲ ಶಿಕ್ಷಣ ವ್ಯವಸ್ಥೆ [ಜ್ಞಾನತಾಣ] ಕಾರ್ಯಕ್ರಮ”ವನ್ನು ಉದ್ಘಾಟಿಸಿ ಬಳಿಕ ಸಂಘದ ಸದಸ್ಯರ ಮಕ್ಕಳಿಗೆ ಪಾಠಗಳನ್ನು ಜೋಡಿಸಿದ ಟ್ಯಾಬ್ ವಿತರಿಸಿ ಮಾತ ನಾಡಿದ ಅವರು, ಶಾಲೆಯಲ್ಲಿ ಕಲಿತಂತೆ ಮಕ್ಕಳು ಮನೆಯಲ್ಲಿಯೂ ನಿಗದಿತ ಪಾಠ್ಯಗಳನ್ನು ಪ್ರತಿನಿತ್ಯ ಅಧ್ಯಯನ ಮಾಡು ವಂತೆ ಯೋಜನೆ ಮಾಡಿರುವುದು ಉತ್ತಮ ಕಾರ್ಯ. ವಿದ್ಯಾರ್ಥಿಗಳು ನಿರಾಶರಾಗ ದಂತೆ ಅಂತರ್ಜಾಲ ಮುಖಾಂತರ ತಮಗೆ ಬೇಕಾದ ಕೆಲಸಗಳನ್ನು ಮಾಡಿಕೊಳ್ಳು ವಂತೆ ಗ್ರಾಮೀಣರಿಗೂ ಒದಗಿ ಬಂದಿದೆ. ದೇಶ ಅಭಿವೃದ್ಧಿ ಹೊಂದಲು ವಿದ್ಯಾರ್ಥಿ ಗಳು ಮುಂದೆ ಬರಬೇಕು ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಮುಕೊಂಡ ಶಶಿ ಸುಬ್ರಮಣಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರಾಜ್ಯದ ಎಲ್ಲಾ ಬಡ ಕುಟುಂಬ ಹಾಗೂ ಸಾಮಾನ್ಯ ಜನರಿಗೆ ಅಭಿವೃದ್ಧಿ ಹೊಂದುವ ಮಾರ್ಗ ತೋರಿಸಿದೆ ಎಂದರು. ಯೋಜನೆಯ ಜನಜಾಗೃತಿ ವೇದಿಕೆಯ ಜಿಲ್ಲಾ ಅಧ್ಯಕ್ಷ ಬಾನಂಗಡ ಅರುಣ್ ಕುಮಾರ್ ಮಾತ ನಾಡಿ, ಧರ್ಮಸ್ಥಳ ಯೋಜನೆಯ ಸೌಲಭ್ಯ ಗಳನ್ನು ಸಂಘದ ಸದಸ್ಯರು ಮತ್ತು ಅವರ ಮಕ್ಕಳು ಪಡೆದುಕೊಳ್ಳಲು ಮುಂದೆ ಬರಬೇಕು ಎಂದರು.

ಶ್ರೀ.ಕ್ಷೇ.ಧ.ಗ್ರಾ.ಯೋಜನಾಧಿಕಾರಿ ಸದಾ ಶಿವಗೌಡ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಶ್ಮಿತಾ ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಇಲಾಖೆಯ ಸೋಮಯ್ಯ ಮಾತ ನಾಡಿದರು. ಯೋಜನೆಯ ಮೇಲ್ವಿಚಾರಕ ರಾದ ರತ್ನಮೈಪಾಲ ಸ್ವಾಗತಿಸಿದರೆ. ಸಂಘದ ತೇಜಸ್ವಿನಿ ವಂದಿಸಿದರು. ಕಾರ್ಯಕ್ರಮ ದಲ್ಲಿ ಯೋಜನೆಯ ಸ್ವ-ಸಹಾಯ ಸಂಘದ ಸದಸ್ಯರು ಅವರ ಮಕ್ಕಳು ಭಾಗವಹಿಸಿದ್ದರು. ಫೋಟೊ: 01

Translate »