ಎಲ್ಲರ ಬದುಕು ವರ್ಣಮಯಗೊಳಿಸುವ ಫೋಟೋ,  ವೀಡಿಯೋಗ್ರಾಫರ್‍ಗಳದ್ದೇ ದುಸ್ಥಿತಿಯ ಬದುಕು
ಮೈಸೂರು

ಎಲ್ಲರ ಬದುಕು ವರ್ಣಮಯಗೊಳಿಸುವ ಫೋಟೋ,  ವೀಡಿಯೋಗ್ರಾಫರ್‍ಗಳದ್ದೇ ದುಸ್ಥಿತಿಯ ಬದುಕು

December 25, 2020

ಮೈಸೂರು, ಡಿ.24(ಆರ್‍ಕೆಬಿ)- ತಮ್ಮ ಕೈಚಳಕದ ಮೂಲಕ ಎಲ್ಲರ ಬದುಕನ್ನು ವರ್ಣಮಯವಾಗಿಸುವ ಫೋಟೋ ಮತ್ತು ವೀಡಿಯೋಗ್ರಾಫರ್‍ಗಳ ವೈಯಕ್ತಿಕ ಬದುಕು ಮಾತ್ರ ದುಸ್ಥಿತಿಯಲ್ಲಿರುತ್ತದೆ ಎಂದು ಕೃಷ್ಣರಾಜ ಕ್ಷೇತ್ರದ ಮಾಜಿ ಶಾಸಕರೂ ಆಗಿರುವ ಜಿಲ್ಲಾ ಫೋಟೋ ಗ್ರಾಫರ್ಸ್ ಮತ್ತು ವೀಡಿಯೋಗ್ರಾಫರ್ಸ್ ಅಸೋಸಿಯೇಷನ್ ಗೌರವಾಧ್ಯಕ್ಷ ಎಂ.ಕೆ.ಸೋಮಶೇಖರ್  ಅಭಿಪ್ರಾಯಪಟ್ಟರು.

ಮೈಸೂರಿನ ಲೋಕಾಭಿರಾಮ ಸಭಾ ಭವನದಲ್ಲಿ ಮೈಸೂರು ಜಿಲ್ಲಾ ಛಾಯಾ ಸ್ನೇಹ ಸೌಹಾರ್ದ ಸಹಕಾರಿ ನಿಯ ಮಿತದ 2ನೇ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರತಿಯೊಬ್ಬ ವ್ಯಕ್ತಿಗೆ ಸಹಾಯ ಮಾಡುವ ಬದಲಾಗಿ ಇಡೀ ಸಹಕಾರಿ ಸಂಘವೇ ನೆರವಿಗೆ ನಿಂತರೆ ನೂರಾರು ಜನರ ಬದುಕಿಗೆ ನೆರಳಾಗಬಹುದು. ಆ ದೃಷ್ಟಿಯಿಂದ ಇಂತಹ ಸಹಕಾರ ಸಂಘಗಳು ಅವರ ಬದುಕಿಗೆ ಒಂದಷ್ಟು ನೆರವು ನೀಡಲು ಸಹಾಯಕವಾಗು ತ್ತವೆ. ಅವರ ಮಕ್ಕಳ ಬದುಕಿಗೂ ನೆರಳಾಗುತ್ತವೆ ಎಂದರು.

ಸಹಕಾರ ಭಾವನೆ ಇದ್ದರೆ ಮಾತ್ರ ಸಹಕಾರ ಸಂಘಗಳ ಧ್ಯೇಯೋದ್ದೇಶಗಳು ಸಫಲತೆ ಕಾಣಲು ಸಾಧ್ಯ. ಈ ನಿಟ್ಟಿನಲ್ಲಿ ಸಂಘದ ಸದಸ್ಯರು ಶ್ರಮಿಸಿ ಎಲ್ಲರ ಬಾಳಿಗೆ ಬೆಳ ಕಾಗುವ ಜೊತೆಗೆ ಸಂಘವನ್ನು ಅಭಿವೃದ್ಧಿಪಡಿಸಿಕೊಳ್ಳ ಬಹುದು ಎಂದು ಹೇಳಿದರು.

ಇಂದು ನೂರಾರು ಸಂಘ-ಸಂಸ್ಥೆಗಳು ನೋಂದಣಿಯಾಗು ತ್ತವೆ. ಆದರೆ ಅವು ಸಹಕಾರ ಸಂಘಗಳಾಗಿ ಮಾರ್ಪಟ್ಟರೆ ಮಾತ್ರ ಸದಸ್ಯರಿಗೆ ಅನುಕೂಲವಾಗಲು ಸಾಧ್ಯ. ಸದಸ್ಯರಲ್ಲಿ ಸಂಘದ ಬಗ್ಗೆ ವಿಶ್ವಾಸ ಮೂಡಿಸುವುದು ಸುಲಭದ ಕೆಲಸ ವಲ್ಲ. ಸಂಘಗಳು ಸ್ಥಾಪನೆಯಾಗಿ ನಂಬಿಕೆ, ವಿಶ್ವಾಸ ಗಳಿ ಸದೆ ಎಷ್ಟೋ ಸಂಘಗಳು ಸ್ಥಗಿತಗೊಂಡ ನಿದರ್ಶನಗಳು ಸಾಕಷ್ಟಿವೆ. ಹೀಗಾಗಿ ಸಂಘವನ್ನು ಹೆಚ್ಚು ಬಲಗೊಳಿಸಲು ಸದಸ್ಯರು ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭದÀಲ್ಲಿ ಸಹಕಾರ ಸಂಘದ ಡೈರಿ ಮತ್ತು ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು. ಸಹ ಕಾರ ಸಂಘದ ಅಧ್ಯಕ್ಷ ಎಂ.ಎಸ್.ರಾಜೇಂದ್ರಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷ ಸಿ.ಅಭಿ ನಂದನ್, ನಿರ್ದೇಶಕರಾದ ಎಂ.ಎಸ್.ಶ್ರೀನಿಧಿ, ಜಿ.ಎಂ. ಸುದರ್ಶನ್, ಎಂ.ಆರ್.ಉಮೇಶ್, ಎನ್.ಮೋಹನ್, ಜಿ.ಟಿ.ಸುರೇಶ್‍ಕುಮಾರ್, ಹೆಚ್.ಚಂದ್ರರಾವ್, ಎಸ್.ಎನ್. ಬಾಬು, ಹೆಚ್.ಎನ್.ಶ್ರೀನಿವಾಸ, ಎಂ.ವಿಜಯಕುಮಾರ್, ಕೆ.ಎಸ್.ರಾಮಸ್ವಾಮಿ, ಎಸ್.ವಿ.ಪ್ರಸನ್ನಕುಮಾರ್, ಎಂ. ಮಹೇಶ್, ಹೇಮಾವತಿ, ಹೆಚ್.ಜೆ.ಮಾನಸ ನಾಗೇಂದ್ರ, ಸಿಇಓ ಆರ್.ಲಕ್ಷ್ಮೀದೇವಿ ಇನ್ನಿತರರು ಇದ್ದರು.

 

 

 

 

Translate »