ಮೈಕ್ರೋ ಫೈನಾನ್ಸ್ ಸಾಲ ಪಾವತಿಗೆ ಕಾಲಾವಕಾಶ ಕೋರಿ ಮನವಿ
ಮೈಸೂರು

ಮೈಕ್ರೋ ಫೈನಾನ್ಸ್ ಸಾಲ ಪಾವತಿಗೆ ಕಾಲಾವಕಾಶ ಕೋರಿ ಮನವಿ

May 5, 2021

ತಿ.ನರಸೀಪುರ, ಮೇ 4(ಎಸ್‍ಕೆ)- ಮೈಕ್ರೋ ಫೈನಾನ್ಸ್‍ಗಳಲ್ಲಿ ಸಾರ್ವಜನಿಕರು, ರೈತರು ಪಡೆದಿರುವ ಸಾಲ ಪಾವತಿಗೆ ಕಾಲಾ ವಕಾಶ ನೀಡುವಂತೆ ಹಾಗೂ ಕಾನೂನು ಬಾಹಿರವಾಗಿ ಕೋವಿಡ್ ನಿಯಮ ಉಲ್ಲಂಘಿಸಿ ನಡೆಸುತ್ತಿರುವ ಗಾರ್ಮೆಂಟ್ಸ್ ಬಂದ್ ಮಾಡಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಸದಸ್ಯರು ತಹಶೀಲ್ದಾರ್‍ಗೆ ಮನವಿ ಪತ್ರ ಸಲ್ಲಿಸಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ತಹ ಶೀಲ್ದಾರ್ ಡಿ.ನಾಗೇಶ್‍ಗೆ ಮನವಿ ಪತ್ರ ಸಲ್ಲಿಸಿದ ರೈತ ಮುಖಂಡರು ಕೂಡಲೇ ನಮ್ಮ ಬೇಡಿಕೆಗೆ ಸ್ಪಂದಿಸುವಂತೆ ಒತ್ತಾಯಿಸಿದರು.

ರೈತ ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರ್ ಮಾತನಾಡಿ, ರಾಜ್ಯದಲ್ಲಿ ಕೊರೊನಾ 2ನೇ ಅಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಫ್ರ್ಯೂ ಹಿನ್ನೆಲೆಯಲ್ಲಿ ಸಾರ್ವ ಜನಿಕರು ಮನೆಯಿಂದ ಹೊರಬಾರದ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ಶೇ.50ರಷ್ಟು ಜನರು ದಿನಗೂಲಿ, ಬೀದಿ ಬದಿ ವ್ಯಾಪಾರ ಗಳನ್ನೇ ನಂಬಿ ಬದುಕುತ್ತಿದ್ದಾರೆ. ಜನತಾ ಕಪ್ರ್ಯೂ ಹಿನ್ನೆಲೆಯಲ್ಲಿ ಜನರು ತುತ್ತು ಅನ್ನಕ್ಕೂ ಪರ ದಾಡುವ ಸ್ಥಿತಿ ನಿರ್ಮಾಣವಾಗಿದೆ. ದುಡಿಮೆ ಇಲ್ಲದೇ ಕಂಗಾಲಾಗಿರುವ ಪ್ರಸಕ್ತ ಸನ್ನಿವೇಶದಲ್ಲಿ ಮೈಕ್ರೋ ಫೈನಾನ್ಸ್‍ನವರು ಸಾಲ ವಸೂಲಿ ಮಾಡಲು ಕಿರುಕುಳ ನೀಡು ತ್ತಿರುವ ಬಗ್ಗೆ ದೂರು ಕೇಳಿ ಬಂದಿದೆ. ದುಡಿಮೆಯೇ ಇಲ್ಲದೇ ಒಪ್ಪತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಇರುವ ವೇಳೆ ಸಾಲದ ಹಣ ಕಟ್ಟುವುದು ಕಷ್ಟಕರವಾಗಿದೆ. ಹೀಗಾಗಿ ಸರ್ಕಾರ ಮೈಕ್ರೋ ಫೈನಾನ್ಸ್ ನವರಿಗೆ 6 ತಿಂಗಳು ಸಾಲ ವಸೂಲಿ ಸ್ಥಗಿತ ಗೊಳಿಸಲು ನಿರ್ದೇಶನ ನೀಡಬೇಕೆಂದು ಒತ್ತಾಯಿಸಿದರು. ಈ ವೇಳೆ ಒಕ್ಕೂಟದ ನಂಜನಗೂಡು ಘಟಕದ ಅಧ್ಯಕ್ಷ ರವಿ, ಟೌನ್ ಅಧ್ಯಕ್ಷ ಅಪ್ಪಣ್ಣ, ತಾಲೂಕು ಪ್ರಧಾನ ಕಾರ್ಯದರ್ಶಿ ಪ್ರಸಾದ್ ನಾಯಕ್, ಉಪಾ ಧ್ಯಕ್ಷ ನಿಂಗರಾಜು, ಕುಮಾರ್ ಇದ್ದರು.

Translate »