ಹುಣಸವಾಡಿ ಗ್ರಾಪಂನಿಂದ ಆಲನಹಳ್ಳಿಯಲ್ಲಿ ಕೊರೊನಾ ಜಾಗೃತಿ ಕಾರ್ಯಕ್ರಮ
ಮೈಸೂರು

ಹುಣಸವಾಡಿ ಗ್ರಾಪಂನಿಂದ ಆಲನಹಳ್ಳಿಯಲ್ಲಿ ಕೊರೊನಾ ಜಾಗೃತಿ ಕಾರ್ಯಕ್ರಮ

May 5, 2021

ಬೈಲಕುಪ್ಪೆ, ಮೇ 4 (ರಾಜೇಶ್)-ಕೋವಿಡ್ ಮಹಾಮಾರಿ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮದ ಜನರು ಅನಗತ್ಯವಾಗಿ ಮನೆಯಿಂದ ಹೊರಗೆ ಬರಬಾರದು. ಮಾಸ್ಕ್, ಸ್ಯಾನಿಟೈಜರ್ ಮತ್ತು ಸಾಮಾಜಿಕ ಅಂತರವನ್ನು ಕಾಯ್ದು ಕೊಳ್ಳಬೇಕು ಎಂದು ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಎಟಿ ರಂಗಸ್ವಾಮಿ ತಿಳಿಸಿದರು.

ತಾಲೂಕಿನ ಆಲನಹಳ್ಳಿ ಗ್ರಾಮದಲ್ಲಿ ಹುಣಸವಾಡಿ ಗ್ರಾಮ ಪಂಚಾಯಿತಿ ವತಿಯಿಂದ ಕೋವಿಡ್-19 ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮಸ್ಥರಿಗೆ ಅರಿವು ಮೂಡಿ ಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸರ್ಕಾರದ ಆದೇಶದಂತೆ ರಾಜ್ಯ ವ್ಯಾಪಿ ಕೋವಿಡ್-19 ದಿನದಿಂದ ದಿನಕ್ಕೆ ಹೆಚ್ಚಾ ಗುತ್ತಿದ್ದು, ರಾಜ್ಯ ದಲ್ಲಿ ಸಾವು-ನೋವುಗಳು ಹೆಚ್ಚಾಗುತ್ತಿದೆ. ಹುಣಸವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಭೂತನಹಳ್ಳಿ, ಆಲನಹಳ್ಳಿ ಕೊಪ್ಪಲು ,ಹುಣಸವಾಡಿ, ಕುಂದನಹಳ್ಳಿ ಹೀಗೆ ಹಲವಾರು ಗ್ರಾಮಗಳಲ್ಲಿ ಕೋವಿಡ್-19 ರೋಗ ಕಾಣಿಸಿಕೊಂಡಿದ್ದು ಗ್ರಾಮಸ್ಥರು ಜಮೀನುಗಳಲ್ಲಿ ಕೃಷಿ ಚಟುವಟಿಕೆ ಮಾಡಿಕೊಂಡು ಮನೆಯ ಒಳಗೆ ಹೆಚ್ಚುಕಾಲ ಇರಬೇಕು ಎಂದರು.

ಮನೆಯಲ್ಲಿ ಕಷಾಯ ಮಾಡಿಕೊಂಡು ಕುಡಿಯಬೇಕು. ಗ್ರಾಮದಲ್ಲಿ ಬೆಳಗ್ಗೆ 6 ರಿಂದ 10 ರವರೆಗೆ ಮಾತ್ರ ದಿನಸಿ ವಸ್ತು ಗಳಿಗೆ ವ್ಯಾಪಾರ ಮಾಡಲು ಅವಕಾಶ ಮಾತ್ರ ಇದೆ. ಗ್ರಾಮದ ಪಕ್ಕ ಟಿಬೇಟಿಯನ್ ಕ್ಯಾಂಪ್‍ಗೆ ಕೆಲಸಕ್ಕೆ ಹೋಗುವವರು ತಪ್ಪದೇ ಸ್ಯಾನಿ ಟೈಸರ್ ಹಾಗೂ ಮಾಸ್ಕ್ ಹಾಕಿಕೊಳ್ಳಬೇಕು. ಗ್ರಾಮದಲ್ಲಿ ಕಟಿಂಗ್ ಶಾಪ್ ಸಂಪೂರ್ಣ ಬಂದ್ ಮಾಡಬೇಕು. ಹೋಟೆಲ್‍ಗಳಲ್ಲಿ ಪಾರ್ಸಲ್‍ಗೆ ಮಾತ್ರ ಅವಕಾಶ ಕಲ್ಪಿಸಬೇಕು.

ಮೇ 15ರಿಂದ 18 ವರ್ಷ ಮೇಲ್ಪಟ್ಟ ವರೆಲ್ಲರೂ ಉಚಿತವಾಗಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು. ಅಂಗಡಿ ಮತ್ತು ಡೈರಿಗೆ ಹಾಲು ಹಾಕುವವರು ಮಾಸ್ಕ್ ತಪ್ಪದೇ ಹಾಕಿಕೊಳ್ಳಬೇಕು. ಗ್ರಾಮದಲ್ಲಿ ಅನಾವಶ್ಯಕ ವಾಗಿ ಯಾರು ಗುಂಪು ಗುಂಪಾಗಿ ನಿಲ್ಲಬಾರದು, ಅಂಗನವಾಡಿ ಹಾಗೂ ಆಶಾ ಕಾರ್ಯಕತೆರ್À ಯರೂ ಲಸಿಕೆ ಹಾಕಿಸಿಕೊಳ್ಳಬೇಕು. ಇದರಿಂದ ಸಂಪೂರ್ಣವಾಗಿ ರೋಗವನ್ನು ತಡೆಗಟ್ಟಬಹುದು ಎಂದು ತಿಳಿಸಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಕೋವಿಡ್-19 ತಡೆಗಟ್ಟುವ ಅರಿವು ಕಾರ್ಯಕ್ರಮ ಮಾಡಲಾಯಿತು.

ಹುಣಸವಾಡಿ ಗ್ರಾಪಂ ಅಧ್ಯಕ್ಷೆ ಸುಶೀಲಮ್ಮ ಗಣೇಶ್, ಉಪಾಧ್ಯಕ್ಷ ಎಜೆ ಸ್ವಾಮಿ, ಸದಸ್ಯ ರಾದ ನಾಗರಾಜು, ದೇವು, ಜ್ಯೋತಿ, ರತ್ನಮ, ಲೋಕೇಶ್, ವಿಎಸ್‍ಎಸ್‍ಎನ್ ನಿರ್ದೇಶಕ ನಾಗಣ್ಣ, ಪಿಡಿಒ ಮಂಜು ನಾಥ್, ರಾಜಣ್ಣ, ಗ್ರಾಪಂ ಮಾಜಿ ಅಧ್ಯಕ್ಷ ರಾಜು, ಗ್ರಾಪಂ ಮಾಜಿ ಸದಸ್ಯ ಗಣೇಶ್, ರವಿಕುಮಾರ್ ನಂದಿನಾಥಪುರ, ಆರೋಗ್ಯ ಕೇಂದ್ರ ಕಿರಿಯ ಸಹಾಯಕಿ ಮೈನಾ, ಅಂಗನವಾಡಿ ಕಾರ್ಯಕರ್ತರಾದ ಮಾದೇವಮ್ಮ, ಅಂಜು, ಭಾಗ್ಯ, ಧನಲಕ್ಷ್ಮಿ, ಆಶಾ ಕಾರ್ಯಕರ್ತರಾದ ಪುಟ್ಟಕ್ಕ, ಗ್ರಾಮ ಸಹಾಯಕ ದೊಡ್ಡಯ್ಯ ಮತ್ತಿತರರಿದ್ದರು.

Translate »