ದೇಶದ ಗಡಿಯಲ್ಲಿ ಸೈನಿಕರಿದ್ದರೆ, ದೇಶ ದೊಳಗೆ ಪೊಲೀಸರು ನಮ್ಮ ರಕ್ಷಣೆ ಮಾಡುತ್ತಿ ದ್ದಾರೆ. ಪೊಲೀಸ್ ಇಲಾಖೆ ಥ್ಯಾಂಕ್‍ಲೆಸ್ ಇಲಾಖೆ ಯಾಗಿದ್ದು, ದಿನದ 24 ಗಂಟೆಯೂ ರಕ್ಷಣೆ ಜವಾ ಬ್ದಾರಿಯನ್ನು ನಿರ್ವಹಿಸುತ್ತಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಂ.ಎಲ್. ರಘುನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.
ಮೈಸೂರು ನಗರ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಸಮಾರೋಪದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಿದ ಬಳಿಕ ಮಾತ ನಾಡಿದ ಅವರು, ಪೊಲೀಸ್ ಇಲಾಖೆ ಮೊದಲು ಪುರುಷರಿಗಷ್ಟೇ ಸೀಮಿತವಾಗಿದೆ ಎಂಬು ದಾಗಿತ್ತು. ಆದರೆ ಇಂದು ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ವೃತ್ತಿಗೆ ಬರುತ್ತಿರುವುದು ಶ್ಲಾಘನೀಯ. ಇಲಾಖೆಯಲ್ಲಿ ಉನ್ನತ ಹುದ್ದೆ ಗಳಿಗೆ ಹೆಣ್ಣುಮಕ್ಕಳು ಆಯ್ಕೆಯಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ದೇಹ ಮತ್ತು ಮನಸ್ಸಿನ ಹತೋಟಿಯಿಂದ ಕ್ರೀಡೆಗಳಲ್ಲಷ್ಟೇ ಅಲ್ಲದೆ ಜೀವನದಲ್ಲೂ ಗೆಲುವು ಸಾಧಿಸಬಹುದು. ಅದಕ್ಕಾಗಿ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳು ವುದು ಮುಖ್ಯವಾಗಿದೆ. ದೇಹವೆಂಬ ದೇವರ ಗುಡಿಯಲ್ಲಿ ಮನಸ್ಸೆಂಬ ದೇವರನ್ನು ಚೆನ್ನಾಗಿಟ್ಟು ಕೊಂಡಿರಬೇಕು ಎಂದು ಕಿವಿಮಾತು ಹೇಳಿದರು.
ಮೈಸೂರು, ಡಿ.30(ಎಂಕೆ)- ಮೈಸೂರು ನಗರ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ‘ನಗರ ಸಶಸ್ತ್ರ ಮೀಸಲು ಪಡೆ(ಸಿಎಆರ್)’ ತಂಡ ಸಮಗ್ರ ಪ್ರಶಸ್ತಿ ಪಡೆ ಯುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿತು.
ಮೈಸೂರಿನ ನಗರ ಸಶಸ್ತ್ರ ಮೀಸಲು ಪಡೆ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟದಲ್ಲಿ ಪುರುಷರ ವಿಭಾಗದಲ್ಲಿ ಸಿಎಆರ್‍ನ ವಿಜಯ್‍ಶಂಕರ್ ಹಾಗೂ ಮಹಿಳಾ ವಿಭಾಗದಲ್ಲಿ ಮಹಿಳಾ ಪೊಲೀಸ್ ಠಾಣೆಯ ರತ್ನಮ್ಮ ಸರ್ವೋತ್ತಮ ಪ್ರಶಸ್ತಿ ಪಡೆದುಕೊಂಡರು.
ಪುರುಷರ ವಿಭಾಗ: 100 ಮೀಟರ್ ಓಟದ ಸ್ಪರ್ಧೆಯಲ್ಲಿ ಸಿಎಆರ್‍ನ ಎಪಿಸಿ(ಸಶಸ್ತ್ರ ಪೊಲೀಸ್ ಕಾನ್ಸ್‍ಸ್ಟೇಬಲ್) ವಿಜಯ್‍ಶಂಕರ್ ಪ್ರಥಮ, ದಿನೇಶ್ ದ್ವಿತೀಯ ಹಾಗೂ ಕೆ.ಆರ್ ವಿಭಾಗದ ಸಿಪಿಸಿ(ಸಿಟಿ ಪೊಲೀಸ್ ಕಾನ್ಸ್‍ಸ್ಟೇಬಲ್) ಮೈಲಾರಿ ತೃತೀಯ ಬಹುಮಾನ ಪಡೆದರು. 5000 ಮೀ ಓಟದ ಸ್ಪರ್ಧೆಯಲ್ಲಿ ಕೆ.ಆರ್. ವಿಭಾಗದ ಸಿಪಿಸಿ ಎಂ.ಎಸ್.ರವೀಶ್ ಪ್ರಥಮ, ಮೌಂಟೆಡ್‍ನ ಎಪಿಸಿ ಅವಿನಾಶ್ ಶಿರೋಲ್ಕರ್ ದ್ವಿತೀಯ ಹಾಗೂ ಕೆ.ಆರ್.ವಿಭಾಗದ ಸಿಪಿಸಿ ಜಿ.ವಿ.ರಮೇಶ್ ತೃತೀಯ ಸ್ಥಾನ ಪಡೆದುಕೊಂಡರು.
4×400 ರಿಲೇ ಓಟದಲ್ಲಿ ಸಿಎಆರ್ ತಂಡ ಪ್ರಥಮ ಹಾಗೂ ಕೆ.ಆರ್ ಮತ್ತು ದೇವರಾಜ ವಿಭಾಗದ ತಂಡಗಳು ದ್ವಿತೀಯ ಸ್ಥಾನ ಪಡೆದವು. ಟಗ್ ಆಫ್ ವಾರ್(ಹಗ್ಗ ಜಗ್ಗಾಟ) ಸ್ಪರ್ಧೆಯಲ್ಲಿ ಸಿಎಆರ್ ತಂಡ ಪ್ರಥಮ ಸ್ಥಾನ ಪಡೆದರೆ, ಸಂಚಾರ ವಿಭಾಗ ರನ್ನರ್ ಅಪ್ ಆಯಿತು. ವಾಲಿಬಾಲ್‍ನಲ್ಲಿ ಸಿಎಆರ್ ಪ್ರಥಮ ಹಾಗೂ ವಿಶೇಷ ವಿಭಾಗ ದ್ವಿತೀಯ ಸ್ಥಾನ ಪಡೆಯಿತು. ಕಬಡ್ಡಿಯಲ್ಲೂ ಸಿಎಆರ್ ತಂಡ ಮೌಂಟೆಡ್ (ಕೆಎಆರ್‍ಪಿ) ತಂಡ ವಿರುದ್ಧ ಜಯಗಳಿಸಿತು.
ಎಸಿಪಿಯಿಂದ ಮೇಲ್ಪಟ್ಟ ಅಧಿಕಾರಿಗಳ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಪ್ರಥಮ, ಎಸಿಪಿ ರಾಜಶೇಖರ ದ್ವಿತೀಯ ಹಾಗೂ ಎಸಿಪಿ ಹೆಚ್.ವಿ.ವೀರಣ್ಣ ತೃತೀಯ ಸ್ಥಾನ ಪಡೆದರು. ಬ್ಯಾಡ್ಮಿಂಟನ್ ಡಬಲ್ಸ್‍ನಲ್ಲಿ ಡಾ.ಚಂದ್ರಗುಪ್ತ ಮತ್ತು ಎನ್.ಆರ್.ವಿಭಾಗದ ಎಸಿಪಿ ಶಿವಶಂಕರ್ ತಂಡ ಪ್ರಥಮ, ಕಮಾಂಡೆಂಟ್ ಎಂ.ಜಿ.ನಾಗರಾಜು ಮತ್ತು ಸಿಎಆರ್ ಎಸಿಪಿ ಹೆಚ್.ವಿ.ವೀರಣ್ಣ ತಂಡ ದ್ವಿತೀಯ ಹಾಗೂ ಸಿಎಆರ್ ಡಿಸಿಪಿ ಶಿವರಾಜು ಮತ್ತು ಎಫ್‍ಪಿಬಿ ಎಸಿಪಿ ರಾಜಶೇಖರ ತಂಡ ತೃತೀಯ ಬಹುಮಾನ ಪಡೆಯಿತು.
ಎಎಸ್‍ಐಯಿಂದ ಪಿಐ ವರ್ಗದ ಅಧಿಕಾರಿಗಳ ಬ್ಯಾಡ್ಮಿಂಟನ್ ಸಿಂಗಲ್ಸ್‍ನಲ್ಲಿ ಸಿಸಿಬಿ ಪಿಐ ಜಗದೀಶ್ ಪ್ರಥಮ, ವೈರ್‍ಲೆಸ್ ಎಎಸ್‍ಐ ನಂದಕುಮಾರ್ ದ್ವಿತೀಯ ಹಾಗೂ ಸಿಎಆರ್ ಆರ್‍ಪಿಐ ಕೆ.ಎಂ.ಮೂರ್ತಿ ತೃತೀಯ ಸ್ಥಾನ ಪಡೆದರೆ, ಡಬಲ್ಸ್‍ನಲ್ಲಿ ಪಿಐ ಜಗದೀಶ್ ಮತ್ತು ಆರ್‍ಪಿಐ ಕೆ.ಎಂ.ಮೂರ್ತಿ ತಂಡ ಪ್ರಥಮ, ಪಿಐ ದಿವಾಕರ್ ಮತ್ತು ಆರ್‍ಪಿಐ ಆನಂದ್‍ಕುಮಾರ್ ದ್ವಿತೀಯ ಹಾಗೂ ಪಿಐ ಮಂಜುನಾಥ್ ಮತ್ತು ಎಎಸ್‍ಐ ನಂದಕುಮಾರ್ ತಂಡ ತೃತೀಯ ಸ್ಥಾನ ಪಡೆದುಕೊಂಡಿತು.
ಡಿಸಿಪಿ ಮತ್ತು ಮೇಲ್ಪಟ್ಟ ಅಧಿಕಾರಿಗಳ ರಿವಾಲ್ವರ್ ಶೂಟಿಂಗ್ ಸ್ಪರ್ಧೆಯಲ್ಲಿ ಡಾ.ಚಂದ್ರಗುಪ್ತ ಪ್ರಥಮ, ಸಿಎಆರ್ ಡಿಸಿಪಿ ಶಿವರಾಜು ದ್ವಿತೀಯ, ಕಮಾಂ ಡೆಂಟ್ ಎಂ.ಜಿ.ನಾಗರಾಜು ತೃತೀಯ ಬಹುಮಾನ ಪಡೆದರು. ಎಸಿಪಿ ದರ್ಜೆ ಅಧಿಕಾರಿ ವಿಭಾಗದಲ್ಲಿ ಎಸಿಪಿ ಶಿವಶಂಕರ್ ಪ್ರಥಮ ಸ್ಥಾನ ಪಡೆದರೆ, ಎಸಿಪಿಗಳಾದ ಎಸ್.ಪಿ.ಮೋಹನ್, ಕೆ.ಎನ್.ಸುರೇಶ್ ಮತ್ತು ಎನ್.ಸುದರ್ಶನ ದ್ವಿತೀಯ ಬಹುಮಾನ ಜಯಿಸಿದರು. ಪಿಐ ದರ್ಜೆ ವಿಭಾಗದಲ್ಲಿ ಉದಯಗಿರಿ ಪೊಲೀಸ್ ಠಾಣೆ ಇನ್ಸ್‍ಸ್ಪೆಕ್ಟರ್(ಪಿಐ) ಪಿ.ಕೆ.ರಾಜು ಪ್ರಥಮ, ನಜರ್‍ಬಾದ್ ಠಾಣೆ ಶ್ರೀಕಾಂತ್ ದ್ವಿತೀಯ ಹಾಗೂ ವೈರ್‍ಲೆಸ್‍ನ ಮಂಜುನಾಥ್ ತೃತೀಯ ಬಹುಮಾನ ಗೆದ್ದರು.
ಎಎಸ್‍ಐನಿಂದ ಪಿಎಸ್‍ಐ ದರ್ಜೆಯಲ್ಲಿ ಸಿಸಿಆರ್‍ಬಿ ಎಎಸ್‍ಐ ಶ್ರೀಧರ್ ಪ್ರಥಮ, ಸಿಎಆರ್‍ನ ಆರ್‍ಎಸ್‍ಐಗಳಾದ ಸಂತೋಷ್‍ಕುಮಾರ್ ದ್ವಿತೀಯ ಹಾಗೂ ಪಿ.ಸುರೇಶ್ ತೃತೀಯ ಸ್ಥಾನ ಪಡೆದರೆ, ಪಿಸಿಯಿಂದ ಹೆಚ್‍ಸಿ ದರ್ಜೆಯಲ್ಲಿ ದೇವರಾಜ ವಿಭಾಗದ ಹೆಡ್ ಕಾನ್ಸ್‍ಸ್ಟೇಬಲ್ ರವಿಕುಮಾರ್ ಪ್ರಥಮ, ಸಿಎಆರ್ ಎಪಿಸಿ ದಾದಾಫೀರ್ ದ್ವಿತೀಯ ಹಾಗೂ ಎನ್.ಆರ್.ವಿಭಾಗದ ಸಿಪಿಸಿ ಶ್ರೀನಿವಾಸ ರಾಜೇ ಅರಸ್ ತೃತೀಯ ಬಹುಮಾನ ಗೆದ್ದುಕೊಂಡರು.
ಮಹಿಳಾ ವಿಭಾಗ: ಟಗ್ ಆಫ್ ವಾರ್(ಹಗ್ಗ ಜಗ್ಗಾಟ) ಸ್ಪರ್ಧೆಯಲ್ಲಿ ಕೆ.ಆರ್.ವಿಭಾಗದ ಮಹಿಳಾ ತಂಡ ವಿನ್ನರ್ ಆದರೆ ದೇವರಾಜ ವಿಭಾಗದ ತಂಡ ರನ್ನರ್ ಅಪ್ ಆಯಿತು. ಜೊತೆಗೆ ವಿಶೇಷ ಆಹ್ವಾನಿತರು, ಮಕ್ಕಳಿಗೂ ವಿವಿಧ ಬಗೆಯ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಂ.ಎಲ್. ರಘುನಾಥ್ ಬಹುಮಾನ ವಿತರಣೆ ಮಾಡಿದರು.