ಗೋಹತ್ಯೆ ನಿಷೇಧ ಕಾಯಿದೆ ಜಾರಿಗೆ ಹೈಕೋರ್ಟ್ ಗ್ರೀನ್ ಸಿಗ್ನಲ್
ಮೈಸೂರು

ಗೋಹತ್ಯೆ ನಿಷೇಧ ಕಾಯಿದೆ ಜಾರಿಗೆ ಹೈಕೋರ್ಟ್ ಗ್ರೀನ್ ಸಿಗ್ನಲ್

April 19, 2022

ಬೆಂಗಳೂರು,ಏ.೧೮-ರಾಜ್ಯದಲ್ಲಿ ಗೋಹತ್ಯೆಗಳನ್ನು ತಡೆಯುವ ಉದ್ದೇಶದಿಂದ ರೂಪಿಸಲಾದ ಗೋಹತ್ಯೆ ನಿಷೇಧ ಕಾಯಿದೆ ಜಾರಿಗೆ ಹೈಕೋರ್ಟ್ ಸೋಮ ವಾರ ಹಸಿರು ನಿಶಾನೆ ತೋರಿದೆ.ನಿಯಮಗಳನ್ನು ರಚಿಸುವವರೆಗೆ ಬಲವಂತದ ಕ್ರಮ ಕೈಗೊಳ್ಳುವುದಿಲ್ಲ ಮತ್ತು ಕಾಯಿದೆ ಜಾರಿಗೊಳಿಸುವುದಿಲ್ಲ ಎಂದು ಸರ್ಕಾ ರವೇ ನ್ಯಾಯಾಲಯಕ್ಕೆ ಭರವಸೆ ನೀಡಿತ್ತು. ಅದನ್ನು ಆಧರಿಸಿ ೨೦೨೧ರ ಜ.೨೦ರಂದು ಹೈಕೋರ್ಟ್ ಕಾಯಿದೆ ಜಾರಿಗೆ ಮಧ್ಯಂತರ ತಡೆ ನೀಡಿತ್ತು. ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಆರೀಫ್ ಜಮೀಲ್, ಕಸಾಯಿ ಖಾನೆ ಮಾಲೀಕರು ಮತ್ತು ಗೋಮಾಂಸ ಮಾರಾಟಗಾರರು ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದವು.

ಸರ್ಕಾರದ ಮನವಿ ಮಾನ್ಯ: ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವ ದಗಿ, ೨೦೨೧ರ ಜ.೨೦ರ ಮಧ್ಯಂತರ ಆದೇಶ ಮಾರ್ಪಾಡು ಕೋರಿ ಅರ್ಜಿ ಸಲ್ಲಿಸ ಲಾಗಿದೆ. ಅದನ್ನು ಮಾನ್ಯ ಮಾಡಬೇಕು. ಹಿಂದೆ ಸರಕಾರಕ್ಕೆ ನಿಯಮ ಗಳನ್ನು ರೂಪಿಸುವವರೆಗೆ ಕಾಯಿದೆ ಜಾರಿಗೊಳಿಸ ಬಾರದೆಂದು ನೀಡಿರುವ ಆದೇಶ ಪರಿಷ್ಕರಣೆ ಮಾಡ ಬೇಕು ಎಂದರು. ಸರ್ಕಾರ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯಿದೆ-೨೦೨೦ ಅಡಿ ೨೦೨೧ರ ಫೆ.೧೫ರಂದೇ ನಿಯಮಗಳ ಕುರಿತು ಅಧಿ ಸೂಚನೆ ಹೊರಡಿಸಿತ್ತು. ಆನಂತರ ಆಕ್ಷೇಪಣೆ ಸ್ವೀಕರಿಸಿ ನಿಯಮ ಅಂತಿಮಗೊಳಿಸಿ ೨೦೨೧ರ ಮೇ ೨೪ರಂದು ರಾಜ್ಯಪತ್ರದಲ್ಲೂ ಪ್ರಕಟಿಸಲಾಗಿದೆ. ಹಾಗಾಗಿ ಕಾಯಿದೆ ಜಾರಿಗೆ ಸರ್ಕಾರಕ್ಕೆ ಅನುಮತಿ ನೀಡಬೇಕು ಎಂದು ಕೋರಿದರು. ಅದಕ್ಕೆ ಅರ್ಜಿದಾರರ ಪರ ವಕೀಲರು ಆಕ್ಷೇಪ ಎತ್ತಿದರು, ಕಾಯಿದೆಯನ್ನು ಪ್ರಶ್ನಿಸಲಾಗಿದೆ. ಈಗ ಜಾರಿಗೆ ಅನುಮತಿ ನೀಡಿದರೆ ತೀರಾ ಕಷ್ಟವಾಗುತ್ತದೆ. ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕೆಂದರು.

ಆದರೆ ಸರ್ಕಾರದ ಮಧ್ಯಂತರ ಅರ್ಜಿಯನ್ನು ಮಾನ್ಯ ಮಾಡಿದ ನ್ಯಾಯಾಲಯ, ೨೦೨೧ರ ಜ.೨೦ರಂದು ನೀಡಿದ್ದ ಆದೇಶ ಮಾರ್ಪಾಡು ಮಾಡಿತಲ್ಲದೆ, ನಿಯಮಗಳನ್ನು ಜಾರಿಗೊಳಿಸಲು ಅನುಮತಿ ನೀಡಿತು. ಆದರೆ ಪ್ರಕರಣದ ಅಂತಿಮ ಆದೇಶಕ್ಕೆ ಒಳಪಡುತ್ತದೆ ಎಂದು ನ್ಯಾಯಪೀಠ ಆದೇಶಿಸಿತು.

ಬಲವಂತದ ಕ್ರಮ ಇಲ್ಲ: ಹಿಂದೆ ಅಡ್ವೊಕೇಟ್ ಜನ ರಲ್ ಅವರೇ, ಕಾಯಿದೆ ಜಾರಿಗೆ ಬಲವಂತದ ಕ್ರಮ ಕೈಗೊಳ್ಳದಂತೆ, ಎಫ್‌ಐಆರ್ ಹಾಕದಂತೆ ಪೊಲೀಸರಿಗೆ ಸರ್ಕಾರ ಮತ್ತೆ ಅಗತ್ಯ ನಿರ್ದೇಶನವನ್ನು ನೀಡಲಿದೆ ಎಂದು ಹೈಕೋರ್ಟ್ಗೆ ತಿಳಿಸಿದರು. ಅಲ್ಲದೆ, ಕಳೆದ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಕಾಯಿದೆ ಜಾರಿ ಮಾಡುವುದಿಲ್ಲವೆಂದು
ಸರಕಾರ ಭರವಸೆ ನೀಡಿತ್ತು. ಆದರೂ ಸಹ ೫೦ ಕೇಸುಗಳನ್ನು ದಾಖಲಿಸಿದೆ ಎಂದು ಆರೋಪಿಸಿತ್ತು. ಆದರೆ, ಪೊಲೀಸರು ೨೯ ಕೇಸುಗಳನ್ನು ದಾಖಲಿಸಿದ್ದಾರೆ, ಅವುಗಳಲ್ಲಿ ೧೬ ಕೇಸು ಸೆಕ್ಷನ್ ೬ (ಗೋಹತ್ಯೆ) ಮತ್ತು ೧೧ ಕೇಸು ಸೆಕ್ಷನ್ ೫ (ಅಕ್ರಮ ಗೋ ಸಾಗಾಣೆ)ಗೆ ಸಂಬAಧಿಸಿದAತೆ ದಾಖಲಿಸಲಾಗಿದೆ. ಕೆಲವು ಪ್ರಕರಣಗಳಲ್ಲಿ ಮಾತ್ರ ಎಫ್ ಐಆರ್ ಹಾಕಲಾಗಿದೆ ಎಂದರು. ಅಲ್ಲದೆ, ಮುಂದೆ ಯಾವುದೇ ರೀತಿಯ ಬಲವಂತದ ಕ್ರಮ ಕೈಗೊಳ್ಳಬಾರದು ಮತ್ತು ಎಫ್ ಐಆರ್ ಹಾಕಬಾರದು ಎಂದು ಸರಕಾರ ಪೊಲೀಸರಿಗೆ ಆದೇಶ ಹೊರಡಿಸಲಿದೆ. ಜೊತೆಗೆ ಸೆಕ್ಷನ್ ೫ರ ಪ್ರಕಾರ ಗೋವುಗಳ ಸಾಗಾಣೆಗೆ ಸಂಬAಧಿಸಿದAತೆ ನಿಯಮಗಳನ್ನು ರೂಪಿಸಲಾಗಿದೆ ಎಂದು ಅವರು ಹೇಳಿದರು.

Translate »