ಸ್ಥಾಯಿ ಸಮಿತಿಗಳ ಅಧ್ಯಕ್ಷರ ಚುನಾವಣೆ ದಿಢೀರ್ ಮುಂದೂಡಿಕೆ ಮೈಸೂರು ಪಾಲಿಕೆಯಲ್ಲಿ ಕಾಂಗ್ರೆಸ್ ಸದಸ್ಯರಿಂದ ಪ್ರತಿಭಟನೆ
ಮೈಸೂರು

ಸ್ಥಾಯಿ ಸಮಿತಿಗಳ ಅಧ್ಯಕ್ಷರ ಚುನಾವಣೆ ದಿಢೀರ್ ಮುಂದೂಡಿಕೆ ಮೈಸೂರು ಪಾಲಿಕೆಯಲ್ಲಿ ಕಾಂಗ್ರೆಸ್ ಸದಸ್ಯರಿಂದ ಪ್ರತಿಭಟನೆ

February 3, 2023

ಮೈಸೂರು,ಫೆ.2(ಎಂಟಿವೈ)- ಮೈಸೂರು ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರ ಆಯ್ಕೆ ಚುನಾವಣೆಯನ್ನು ಏಕಾಏಕಿ ಮುಂದೂ ಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸದಸ್ಯರು ಆಯುಕ್ತರ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿ, ಮೇಯರ್ ಹಾಗೂ ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರು ಮಹಾನಗರ ಪಾಲಿ ಕೆಯ ಹಳೆ ಕೌನ್ಸಿಲ್ ಸಭಾಂಗಣದಲ್ಲಿ ಗುರುವಾರ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗೆ ಅಧ್ಯಕ್ಷರ ಆಯ್ಕೆಗೆ ಚುನಾ ವಣೆ ನಡೆಸಲು ಸಿದ್ಧತೆ ಮಾಡಿಕೊಳ್ಳ ಲಾಗಿತ್ತು. ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಸಜ್ಜಾಗಿ ಬಂದಿದ್ದರು. ಚುನಾ ವಣಾ ಪ್ರಕ್ರಿಯೆ ನಡೆಸಲು ನಿಯೋ ಜಿಸಿದ್ದ ಅಧಿಕಾರಿಗಳು ಹಳೆ ಕೌನ್ಸಿಲ್ ಸಭಾಂಗಣದಲ್ಲಿ ಹಾಜರಿದ್ದರು. ಬೆಳಗ್ಗೆ 11 ಗಂಟೆಗೆ ಚುನಾವಣಾ ಪ್ರಕ್ರಿಯೆ ಆರಂಭವಾಗಬೇಕಿತ್ತು. ಆದರೆ, 11.45 ಆದರೂ ಮೇಯರ್ ಸಭಾಂಗಣಕ್ಕೆ ಆಗಮಿಸಲಿಲ್ಲ. ಈ ಮಧ್ಯೆ ಕೌನ್ಸಿಲ್ ಕಾರ್ಯ ದರ್ಶಿಗಳು ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆಗಾಗಿ ನಡೆಯಬೇಕಾಗಿದ್ದ ಚುನಾ ವಣೆಯನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಿರುವುದಾಗಿ ಮೇಯರ್ ಲಿಖಿತ ವಾಗಿ ಸೂಚಿಸಿದ್ದಾರೆ ಎಂದು ಪ್ರಕಟಿಸಿದರು.

ಸದಸ್ಯರ ಆಕ್ಷೇಪ: ಅಧಿಕಾರಿಗಳು ಚುನಾವಣೆಯನ್ನು ಮುಂದೂಡಿರುವ ವಿಚಾರ ತಿಳಿಸುತ್ತಿದ್ದಂತೆ ಮಾಜಿ ಮೇಯರ್ ಗಳಾದ ಅಯೂಬ್‍ಖಾನ್, ಪುಷ್ಪಲತಾ ಜಗನ್ನಾಥ್, ಮಾಜಿ ಉಪಮೇಯರ್ ಶ್ರೀಧರ್, ಶಾಂತಕುಮಾರಿ, ಸದಸ್ಯರಾದ ಜೆ.ಗೋಪಿ, ಲೋಕೇಶ್ ಪಿಯಾ, ಬೇಗಂ ಪಲ್ಲವಿ ಹಾಗೂ ಇನ್ನಿತರರು ಸಭೆಗೆ ಮೇಯರ್ ಹಾಗೂ ಪಾಲಿಕೆ ಆಯುಕ್ತ ರನ್ನು ಕರೆಸುವಂತೆ ಬಿಗಿಪಟ್ಟು ಹಿಡಿದರು. ಅಲ್ಲದೆ, ನಿಯಮದಲ್ಲಿ ಅಧ್ಯಕ್ಷರ ಆಯ್ಕೆ ಚುನಾವಣೆಯನ್ನು ದಿಢೀರ್ ಮುಂದೂ ಡಲು ಅವಕಾಶ ಇದೆಯೇ ಎಂದು ದೃಢ ಪಡಿಸಬೇಕು ಎಂದು ಆಗ್ರಹಿಸಿದರು. ಆದರೆ, ಅಧಿಕಾರಿಗಳು ಮಾತ್ರ ಮೇಯರ್ ಹಾಗೂ ಆಯುಕ್ತರಿಂದ ಸ್ಪಷ್ಟನೆ ಪಡೆಯಲು ನಮಗೆ ಅಧಿಕಾರವಿಲ್ಲ ಎಂದು ಹೇಳುತ್ತಾ ಸುಮ್ಮನಾದರು. ಕೆಲಕಾಲ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ನಂತರ ಪ್ರತಿಭಟನೆ ನಡೆಸಲು ನಿರ್ಧರಿಸಿದರು.

ಬೀಗ ಹಾಕಲು ನಿರ್ಧಾರ: ಹಳೆ ಕೌನ್ಸಿಲ್ ಸಭಾಂಗಣದಿಂದ ಧಿಕ್ಕಾರ ಕೂಗುತ್ತಾ ಹೊರ ಬಂದ ಕಾಂಗ್ರೆಸ್ ಸದಸ್ಯರು, ಮೈಸೂರು ಮಹಾನಗರ ಪಾಲಿಕೆಯಲ್ಲಿ ಮೇಯರ್ ಹಾಗೂ ಆಯುಕ್ತರು ಇದ್ದೂ ಇಲ್ಲದಂತಾ ಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಹಳೆ ಕೌನ್ಸಿಲ್ ಸಭಾಂಗಣ ಹಾಗೂ ಆಯುಕ್ತರ ಕೊಠಡಿಗೆ ಬೀಗ ಹಾಕಿ, ಪ್ರತಿಭಟಿಸಿದರು.

ಪೊಲೀಸರೊಂದಿಗೆ ಮಾತಿನ ಚಕಮಕಿ: ಮೇಯರ್ ಕಚೇರಿ ಹಾಗೂ ಪಾಲಿಕೆ ಕಚೇರಿ ಕೊಠಡಿಗೆ ಬೀಗ ಹಾಕುವ ವೇಳೆ ಪೊಲೀಸರು ಅಡ್ಡಿ ಪಡಿಸಿದರು. ಸಾರ್ವ ಜನಿಕ ಕಚೇರಿಗೆ ಬೀಗ ಹಾಕಲು ಅವಕಾಶ ವಿಲ್ಲ. ಯಾವುದೇ ಕಾರಣಕ್ಕೂ ಬೀಗ ಹಾಕಲು ಬಿಡುವುದಿಲ್ಲ ಎಂದು ತಡೆ ಯೊಡ್ಡಿದರು. ಈ ವೇಳೆ ಪಾಲಿಕೆ ಸದಸ್ಯರು ಪೊಲೀಸರೊಂದಿಗೂ ವಾಗ್ವಾದಕ್ಕಿಳಿ ದರು. ಆದರೂ ಪೊಲೀಸರು ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಇದರಿಂದ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಂತಿಮವಾಗಿ ಬೀಗ ಹಾಕುವ ನಿರ್ಧಾ ರದಿಂದ ಹಿಂದೆ ಸರಿದು, ಮೇಯರ್ ಕೊಠಡಿ ಮುಂದೆ
ಮಧ್ಯಾಹ್ನದವರೆಗೂ ಪ್ರತಿಭಟನೆ ನಡೆಸಿದರು. ಈ ವೇಳೆ ಮಾಜಿ ಮೇಯರ್ ಅಯೂಬ್‍ಖಾನ್ ಪತ್ರಕರ್ತರೊಂದಿಗೆ ಮಾತನಾಡಿ, ಪಾಲಿಕೆ 2022ರ ಸೆ.6ರಂದು ಮೇಯರ್ ಚುನಾವಣೆ ನಡೆಯಿತು. ಅದೇ ದಿನ ಪ್ರಾದೇಶಿಕ ಆಯುಕ್ತರು ಪಾಲಿಕೆಯ ಎಲ್ಲಾ ಸ್ಥಾಯಿ ಸಮಿತಿಗಳಿಗೂ ತಲಾ 7 ಮಂದಿ ಸದಸ್ಯರನ್ನು ಆಯ್ಕೆ ಮಾಡಿದರು. ಅಂದೇ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಚುನಾವಣೆ ನಡೆಯಬೇಕಾಗಿತ್ತು. ಸಮಯಾ ಭಾವದಿಂದ ಅಂದು ಚುನಾವಣೆ ನಡೆಯಲಿಲ್ಲ. ಅಲ್ಲದೆ, ಪ್ರಾದೇಶಿಕ ಆಯುಕ್ತರು ಮುಂದಿನ 4-5 ದಿನದೊಳಗೆ ಮೇಯರ್ ಅಧ್ಯಕ್ಷತೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ ನಡೆಯಲಿದೆ ಎಂದು ತಿಳಿಸಿದ್ದರು. ಮೇಯರ್ ಆಯ್ಕೆಯಾಗಿ 4-5 ತಿಂಗಳಾದರೂ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರ ಆಯ್ಕೆ ಮಾಡಿಲ್ಲ. ಮೇಯರ್ ಶಿವಕುಮಾರ್ ಸರ್ವಾಧಿಕಾರಿ ಧೋರಣೆಯಿಂದ ಅಧಿಕಾರ ನಡೆಸುತ್ತಿದ್ದಾರೆ. ಇತರರ ಅಧಿಕಾರವನ್ನು ಕಿತ್ತುಕೊಂಡಿದ್ದಾರೆ. ನಾಲ್ಕು ಸ್ಥಾಯಿ ಸಮಿತಿಗಳ ಅಧ್ಯಕ್ಷರ ಅಧಿಕಾರವನ್ನು ತಾವೇ ಅನುಭವಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಭ್ರಷ್ಟಾಚಾರಕ್ಕೆ ನಾಂದಿ: ಸ್ಥಾಯಿ ಸಮಿತಿಗಳಿಲ್ಲದಿದ್ದರೆ, ಎಲ್ಲಾ ಬಿಲ್‍ಗಳನ್ನು ಸರಾಗ ವಾಗಿ ಪಾಸ್ ಮಾಡಿಕೊಳ್ಳಬಹುದಾಗಿದೆ. ಕಳೆದ ನಾಲ್ಕು ತಿಂಗಳಿಂದ ಅದೇ ನಡೆಯುತ್ತಿದೆ. ಎಲ್ಲಾ ಬಿಲ್‍ಗಳನ್ನು ಮೇಯರ್ ಅವರೇ ಖುದ್ದಾಗಿ ಸಹಿ ಮಾಡಿ ಪಾಸ್ ಮಾಡಿಕೊಳ್ಳುತ್ತಿದ್ದಾರೆ. ಸ್ಥಾಯಿ ಸಮಿತಿ ಅಧ್ಯಕ್ಷರಿದ್ದರೆ ಬಿಲ್‍ಗಳಿಗೆ ಕೊಕ್ಕೆ ಹಾಕುತ್ತಾರೆ ಎನ್ನುವ ಏಕೈಕ ಕಾರಣದಿಂದ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಸಿಲ್ಲ ಎಂದು ದೂರಿದರು. ಇಂದು ಬೆಳಗ್ಗೆ 11 ಗಂಟೆಗೆ ಫೈನಾನ್ಸ್ ಕಮಿಟಿ, 11.30 ಆರೋಗ್ಯ ಸ್ಥಾಯಿ ಸಮಿತಿ, ಮಧ್ಯಾಹ್ನ 12ಕ್ಕೆ ವಕ್ರ್ಸ್ ಕಮಿಟಿ, 12.30ಕ್ಕೆ ಆಡಿಟ್ ಕಮಿಟಿಗೆ ಚುನಾವಣೆ ನಡೆಸಲು ಸಮಯ ನಿಗದಿ ಮಾಡಲಾಗಿತ್ತು. ಬೆಳಗ್ಗೆ 10.30ರವರೆಗೆ ಕಚೇರಿಯಲ್ಲೇ ಮೇಯರ್ ಇದ್ದರು. ಸಭೆಗೆ ಬರದೆ 12 ಗಂಟೆಗೆ ಚುನಾವಣೆ ಮುಂದೂಡಿರುವುದಾಗಿ ಹೇಳಿದ್ದಾರೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಸ್ಥಾಯಿ ಸಮಿತಿಗಳಿಲ್ಲದೇ, ಮೈಸೂರಿನ ಅಭಿವೃದ್ಧಿ ಕಾರ್ಯ ಸ್ಥಗಿತಗೊಂಡಿದೆÉ. ಪಾಲಿಕೆ ಅಧಿಕಾರಿಗಳು ಬಿಜೆಪಿ ಕೈಗೊಂಬೆಯಾಗಿದ್ದಾರೆ. ಜೆಡಿಎಸ್ ಸದಸ್ಯರು ಸ್ಥಾಯಿ ಸಮಿತಿ ಚುನಾವಣೆಗೆ ಒತ್ತಾಯಿಸದೆ, ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಂತೆ ಕಾಣುತ್ತಿದೆ ಎಂದು ಕಿಡಿಕಾರಿದರು.
ಹೂವಿನ ಕುಂಡವೊಂದು ಛಿದ್ರ: ಪಾಲಿಕೆ ಹಳೆ ಕೌನ್ಸಿಲ್ ಸಭಾಂಗಣದಿಂದ ಹೊರ ಬಂದು ಆಯುಕ್ತರ ಕೊಠಡಿಗೆ ಬೀಗ ಹಾಕುವ ವೇಳೆ ಅಲ್ಲಿಯೇ ಇದ್ದ ಹೂವಿನ ಗಿಡವೊಂದರ ಪಾಠ್ ಪುಡಿಪುಡಿಯಾಗಿದೆ. ಗುಂಪಿನಲ್ಲಿ ಬರುವಾಗ ಕಾಲಿಗೆ ಸಿಕ್ಕಿ ಹೂವಿನ ಕುಂಡ ಪೀಸ್ ಪೀಸ್ ಆಗಿದೆ ಎಂದು ಕೆಲವರು ಹೇಳಿದರೆ, ಪಾಲಿಕೆ ಸದಸ್ಯರೊಬ್ಬರು ಅದನ್ನು ಒದ್ದಾಗ ಪುಡಿಯಾಯಿತು ಎಂದು ಕೆಲವರು ಹೇಳಿದರು.

Translate »