ಚಿನ್ನಸ್ವಾಮಿ ಸ್ಟೇಡಿಯಂ ಸ್ಫೋಟ ಪ್ರಕರಣ ಕೋರ್ಟ್ ಮುಂದೆ ತಪೆÇ್ಪಪ್ಪಿಕೊಂಡ 3 ಆರೋಪಿಗಳು
ಮೈಸೂರು

ಚಿನ್ನಸ್ವಾಮಿ ಸ್ಟೇಡಿಯಂ ಸ್ಫೋಟ ಪ್ರಕರಣ ಕೋರ್ಟ್ ಮುಂದೆ ತಪೆÇ್ಪಪ್ಪಿಕೊಂಡ 3 ಆರೋಪಿಗಳು

July 5, 2018

ಬೆಂಗಳೂರು: ಐಪಿಎಲ್ ಪಂದ್ಯಾವಳಿ ವೇಳೆ ಬೆಂಗಳೂರಿನ ಚಿನ್ನ ಸ್ವಾಮಿ ಕ್ರೀಡಾಂಗಣದ ಕಾಂಪೌಂಡ್‍ನಲ್ಲಿ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣದ 14 ಆರೋಪಿಗಳ ಪೈಕಿ ಮೂವರು ಆರೋಪಿಗಳು ಬುಧವಾರ ನ್ಯಾಯಾ ಲಯದಲ್ಲಿ ತಪೆÇ್ಪಪ್ಪಿಕೊಂಡಿದ್ದಾರೆ.

ಆರೋಪಿಗಳಾದ ಬಿಹಾರದ ದರ್ಬಾಂಗದ ಗೌಹರ್ ಅಜೀಜಿ ಕೋಮನಿ, ಮಧುಬನಿಯ ಕಮಲ್ ಹಸನ್ ಹಾಗೂ ನವದೆಹಲಿಯ ಮಹಮದ್ ಕಫೀಲ್ ಅಖ್ತರ್ ಇಂದು ಎನ್‍ಐಎ ವಿಶೇಷ ನ್ಯಾಯಾಲಯದ ಮುಂದೆ ತಪೆÇ್ಪಪ್ಪಿಗೆ ಅಫಿಡವಿಟ್ ಸಲ್ಲಿಸಿದರು. ಬಂಧಿತ ಆರೋಪಿಗಳು ಪ್ರಮುಖ ಆರೋಪಿ ಯಾಸಿನ್ ಭಟ್ಕಳ್‍ಗೆ ನೆರವು ನೀಡಿದ ಆರೋಪ ಎದುರಿಸುತ್ತಿದ್ದಾರೆ. 2010ರ ಏಪ್ರಿಲ್ 17ರಂದು ಐಪಿಎಲ್ ಪಂದ್ಯ ಆರಂಭಕ್ಕೆ ಮುನ್ನ ಚಿನ್ನಸ್ವಾಮಿ ಕ್ರೀಡಾಂಗ ಣದ ಸುತ್ತ ಮೂರು ಬಾಂಬ್ ಸ್ಫೋಟ ಗೊಂಡಿದ್ದವು. ಘಟನೆಯಲ್ಲಿ ಪೆÇಲೀಸರು ಸೇರಿದಂತೆ 15 ಜನ ಗಾಯಗೊಂಡಿ ದ್ದರು. ಇದೇ ವೇಳೆ ಸ್ಫೋಟಗೊಳ್ಳದ ಎರಡು ಬಾಂಬ್‍ಗಳು ದೊರಕಿದ್ದವು. ಉಗ್ರ ಯಾಸಿನ್ ಭಟ್ಕಳ ಸೇರಿದಂತೆ ಒಟ್ಟು 14 ಉಗ್ರರು ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.

Translate »