ಗೋಪಾಲಸ್ವಾಮಿ ಬೆಟ್ಟದಲ್ಲಿ ಹಳ್ಳಕ್ಕೆ ಇಳಿದ ಬಸ್: 40 ಪ್ರಯಾಣಿಕರು ಪಾರು
ಮೈಸೂರು

ಗೋಪಾಲಸ್ವಾಮಿ ಬೆಟ್ಟದಲ್ಲಿ ಹಳ್ಳಕ್ಕೆ ಇಳಿದ ಬಸ್: 40 ಪ್ರಯಾಣಿಕರು ಪಾರು

July 12, 2021

ಗುಂಡ್ಲುಪೇಟೆ, ಜು.11(ಸೋಮ್.ಜಿ)- ಎದುರಿನಿಂದ ಅಡ್ಡಲಾಗಿ ಬಂದ ಜೀಪ್‍ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಚಾಲಕ ನಿಯಂತ್ರಣ ಕಳೆದುಕೊಂಡ ಕೆಎಸ್‍ಆರ್‍ಟಿಸಿ ಬಸ್ ರಸ್ತೆ ಬದಿಯ ಹಳ್ಳಕ್ಕೆ ಜಾರಿರುವ ಘಟನೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಭಾನುವಾರ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.

ಚಾಲಕನ ಸಮಯಪ್ರಜ್ಞೆಯಿಂದ ಬಸ್ ನಲ್ಲಿದ್ದ 40 ಪ್ರಯಾಣಿಕರು ಯಾವುದೇ ತೊಂದರೆಯಾಗದೇ ಪಾರಾಗಿದ್ದಾರೆ. ಬಸ್ ಎಡಭಾಗಕ್ಕೆ ಸಂಪೂರ್ಣವಾಗಿ ವಾಲಿದ್ದರಿಂದ ಪ್ರಯಾಣಿಕರನ್ನು ಬಸ್‍ನ ತುರ್ತು ನಿರ್ಗಮನ ಬಾಗಿಲಿನ ಮೂಲಕ ಸುರಕ್ಷಿತವಾಗಿ ಕೆಳಗಿಳಿಸ ಲಾಯಿತು. ಉಳಿದಂತೆ ಘಟನೆಯಿಂದ ಕಳ್ಳೀಪುರ ಅರಣ್ಯ ಅಭಿವೃದ್ಧಿ ಸಮಿತಿಗೆ (ಇಡಿಸಿ) ಸೇರಿದ ಜೀಪು ಜಖಂಗೊಂಡಿದೆ.

ಘಟನೆಯ ವಿವರ: ಲಾಕ್‍ಡೌನ್ ತೆರವು ಗೊಳಿಸಿದ ನಂತರ ಭಾನುವಾರ ರಜಾ ದಿನವಾದ ಹಿನ್ನೆಲೆಯಲ್ಲಿ ಬೆಟ್ಟಕ್ಕೆ ನೂರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಯು 8 ಬಸ್‍ಗಳನ್ನು ನಿಯೋಜಿಸಿತ್ತು. ಬೆಟ್ಟದಿಂದ 40 ಪ್ರಯಾಣಿಕರನ್ನು ಕೆಳಗೆ ಕರೆತರುತ್ತಿದ್ದ ಬಸ್‍ಗೆ ತೀವ್ರ ಇಳಿಜಾರಿನಲ್ಲಿ ಕಳ್ಳೀಪುರ ಅರಣ್ಯ ಅಭಿವೃದ್ಧಿ ಸಮಿತಿಗೆ (ಇಡಿಸಿ) ಸೇರಿದ ಜೀಪು ಎದುರಾಗಿದೆ. ಈ ವೇಳೆ ಬಸ್ ನೋಡಿದ ಚಾಲಕ ರಸ್ತೆಯ ನಡುವೆ ಜೀಪು ನಿಲ್ಲಿಸಿದ್ದಾನೆ. ಈ ವೇಳೆ ಜೀಪಿಗೆ ಡಿಕ್ಕಿ ಹೊಡೆ ಯುವುದು ತಪ್ಪಿಸಲು ಬಸ್‍ನ ಚಾಲಕ ಬಸ್ ಅನ್ನು ರಸ್ತೆ ಬದಿಗೆ ತಿರುಗಿಸಿದ್ದಾನೆ. ಪರಿಣಾಮ ರಸ್ತೆ ಬದಿಯ ಹಳ್ಳಕ್ಕೆ ಇಳಿದ ಬಸ್‍ನ ಚಕ್ರಗಳು ಮಣ್ಣಿನಲ್ಲಿ ಹೂತುಕೊಂಡು ಎಡಬದಿಗೆ ಸಂಪೂರ್ಣವಾಗಿ ವಾಲಿದೆ.

ಘಟನೆಯಿಂದ ಜೀಪಿನ ಮುಂಭಾಗ ಜಖಂ ಆಗಿದ್ದರೆ ಬಸ್‍ನಲ್ಲಿದ್ದ ಎಲ್ಲಾ ಪ್ರಯಾಣಿ ಕರೂ ಸುರಕ್ಷಿತವಾಗಿದ್ದಾರೆ. ಕ್ರೇನ್ ಸಹಾಯದಿಂದ ಬಸ್ ಅನ್ನು ಮೇಲೆತ್ತಲಾ ಯಿತು ಎಂದು ಸಾರಿಗೆ ಘಟಕದ ವ್ಯವಸ್ಥಾ ಪಕ ಎಂ.ಜಿ.ಜಯಕುಮಾರ್ ತಿಳಿಸಿದ್ದಾರೆ.

ಬಂಡೀಪುರಕ್ಕೆ ಹರಿದು ಬಂದ ಪ್ರವಾಸಿಗರ ದಂಡು: ಲಾಕ್‍ಡೌನ್ ಹಾಗೂ ವೀಕೆಂಡ್ ಲಾಕ್‍ಡೌನ್ ತೆರವುಗೊಂಡ ನಂತರ ಬಂಡೀ ಪುರ ಹಾಗೂ ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಬೆಟ್ಟಕ್ಕೆ ಹೋಗಿ ಬರುವ ಪ್ರವಾಸಿಗರಿಗೆ ಸಾರಿಗೆ ಸಂಸ್ಥೆಯು 8 ಬಸ್‍ಗಳನ್ನು ನಿಯೋ ಜಿಸಿತ್ತು. ಬೆಳಗಿನಿಂದ ಸಂಜೆವರೆಗೆ 3 ಸಾವಿರಕ್ಕೂ ಹೆಚ್ಚಿನ ಪ್ರವಾಸಿಗರು ಭೇಟಿ ನೀಡಿ ದ್ದಾರೆ. ಇತ್ತೀಚೆಗೆ ಬೀಳುತ್ತಿರುವ ಮಳೆ ಯಿಂದ ಹಚ್ಚ ಹಸುರಿನಿಂದ ಕಂಗೊಳಿಸು ತ್ತಿರುವ ಬಂಡೀಪುರ ಅರಣ್ಯದಲ್ಲಿ ಸಫಾ ರಿಗೆ ತೆರಳುವ ಪ್ರವಾಸಿಗರಿಗೆ ವನ್ಯಜೀವಿ ಗಳು ಹೆಚ್ಚಾಗಿ ದರ್ಶನ ನೀಡುತ್ತಿರುವುದ ರಿಂದ ವೀಕೆಂಡ್ ಹಾಗೂ ರಜಾ ದಿನಗಳಲ್ಲಿ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದಾರೆ ಎಂದು ಗೋಪಾಲ ಸ್ವಾಮಿ ಬೆಟ್ಟ ವಲಯದ ಆರ್‍ಎಫ್‍ಒ ಎನ್.ಪಿ.ನವೀನ್‍ಕುಮಾರ್ ತಿಳಿಸಿದ್ದಾರೆ.

Translate »