ಇಟ್ಟಿಗೆಗೂಡಲ್ಲಿ ಆತಂಕ ಸೃಷ್ಟಿಸಿದ್ದ ಬಿಹಾರಿ ವ್ಯಕ್ತಿ ಕ್ವಾರಂಟೈನ್‍ಗೆ
ಮೈಸೂರು

ಇಟ್ಟಿಗೆಗೂಡಲ್ಲಿ ಆತಂಕ ಸೃಷ್ಟಿಸಿದ್ದ ಬಿಹಾರಿ ವ್ಯಕ್ತಿ ಕ್ವಾರಂಟೈನ್‍ಗೆ

May 14, 2020

ಮೈಸೂರು, ಮೇ 13 (ಆರ್‍ಕೆ) – ಮೈಸೂರಿನ ಇಟ್ಟಿಗೆಗೂಡಿನಲ್ಲಿ ಆತಂಕ ಸೃಷ್ಟಿಸಿದ್ದ ಬಿಹಾರ ಮೂಲದ ವ್ಯಕ್ತಿಯನ್ನು ಸಾರ್ವಜನಿಕರು ಆರೋಗ್ಯ ಇಲಾಖೆ ಅಧಿಕಾರಿಗಳಿ ಗೊಪ್ಪಿಸಿದ್ದಾರೆ. ಮಂಗಳವಾರ ಸಂಜೆ ಇಟ್ಟಿಗೆಗೂಡಿನ ಮೃಗಾಲಯ ಸಮೀಪ ಅನುಮಾ ನಾಸ್ಪದವಾಗಿ ಓಡಾಡುತ್ತಿದ್ದ ಅಪರಿಚಿತ ವ್ಯಕ್ತಿಯನ್ನು ಕಂಡ ನಿವಾಸಿಗಳು ಆತಂಕಗೊಂಡು ಪೊಲೀಸರಿಗೆ ದೂರವಾಣಿ ಕರೆ ಮಾಡಿ ಹೇಳಿದರು. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ನಜರ್‍ಬಾದ್ ಠಾಣೆ ಇನ್ಸ್‍ಪೆಕ್ಟರ್ ಜಿ.ಎನ್.ಶ್ರೀಕಾಂತ ಹಾಗೂ ಸಿಬ್ಬಂದಿ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಕರೆಸಿಕೊಂಡು ಆ ವ್ಯಕ್ತಿಯನ್ನು ಒಪ್ಪಿಸಿದರು.

ಸ್ಥಳಕ್ಕೆ ಧಾವಿಸಿದ ಆಂಬುಲೆನ್ಸ್ ಸಿಬ್ಬಂದಿ ಆತನಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ ದಾಗ ಜ್ವರ ಹಾಗೂ ಉಸಿರಾಟದ ತೊಂದರೆ ಇದ್ದುದು ಕಂಡು ಬಂದಿತು. ತಕ್ಷಣ ಆತನನ್ನು ಕೆ.ಆರ್.ಆಸ್ಪತ್ರೆಗೆ ಕರೆದೊಯ್ದು ಆರೋಗ್ಯ ತಪಾಸಣೆ ನಡೆಸಿದ ನಂತರ ಸ್ವಾಬ್ ಟೆಸ್ಟ್‍ಗೆ ಕರೆದೊಯ್ಯಲಾಯಿತು. ರಾತ್ರಿ ಕೋವಿಡ್-19 ತಪಾಸಣೆ ನಡೆಸಿದ ಆರೋಗ್ಯ ಇಲಾಖೆ ಅಧಿಕಾರಿಗಳು, ನಂತರ ಕ್ವಾರಂಟೈನ್ ಸೆಂಟರ್‍ಗೆ ಕರೆದೊಯ್ಯಲಾಯಿತು ಎಂದು ತಿಳಿದುಬಂದಿದೆ. ಮೂಲತಃ ಬಿಹಾರ ಮೂಲದವನಾದ ಸುಮಾರು 35 ವರ್ಷದ ವ್ಯಕ್ತಿ ಮೈಸೂರಿಗೆ ಹೇಗೆ ಬಂದ ಎಂಬುದರ ಬಗ್ಗೆ ಅಧಿಕಾರಿಗಳು ಟ್ರಾವೆಲ್ ಹಿಸ್ಟರಿ ಕಲೆ ಹಾಕುತ್ತಿದ್ದಾರೆ. ಆತ ಇಟ್ಟಿಗೆಗೂಡಿನಲ್ಲಿ ಅಡ್ಡಾಡುತ್ತಿದ್ದರರಿಂದ ಅಲ್ಲಿನ ನಿವಾಸಿಗಳು ಆತಂಕಗೊಂಡಿದ್ದರು. ಅಲ್ಲಿ ಸ್ಯಾನಿಟೈಸರ್ ಸಿಂಪಡಿಸಿ ಸಂಪೂರ್ಣ ಫಾಗಿಂಗ್ ಮಾಡಿದ ಆರೋಗ್ಯಾಧಿಕಾರಿಗಳು, ಇಟ್ಟಿಗೆಗೂಡಿನಲ್ಲಿ ನಿಗಾ ವಹಿಸುತ್ತಿದ್ದಾರೆ.

Translate »