ಪ್ರೊ.ಚಂಪಾ ಅವರ ಸಾಹಿತ್ಯದ ಸಮಗ್ರ ಸಂಪುಟ ಪ್ರಕಟಿಸಬೇಕು
ಮೈಸೂರು

ಪ್ರೊ.ಚಂಪಾ ಅವರ ಸಾಹಿತ್ಯದ ಸಮಗ್ರ ಸಂಪುಟ ಪ್ರಕಟಿಸಬೇಕು

March 14, 2022

ಮೈಸೂರು,ಮಾ.೧೩(ಪಿಎಂ)-ಪ್ರೊ. ಚಂಪಾ ಮತ್ತು ಅವರ ಬರಹಗಳನ್ನು ಮತ್ತೆ ಮತ್ತೆ ಓದಬೇಕು. ಈ ನಿಟ್ಟಿನಲ್ಲಿ ಅವರ ಸಾಹಿ ತ್ಯಕ್ಕೆ ಸಂಬAಧಿಸಿದ ಸಮಗ್ರ ಸಂಪುಟಗಳನ್ನು ಪ್ರಕಟಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕ್ರಮ ವಹಿಸಬೇ ಕೆಂದು ಹಿರಿಯ ಸಾಹಿತಿ ಪ್ರೊ. ಕೆ.ಎಸ್.ಭಗವಾನ್ ಒತ್ತಾ ಯಿಸಿದರು.

ಮೈಸೂರಿನ ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಬೆಂಗಳೂರಿನ ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿ ಕಾರದ ಜಂಟಿ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರಸಿದ್ಧ ಸಾಹಿತಿ, ಪತ್ರ ಕರ್ತ, ಹೋರಾಟಗಾರ ಪ್ರೊ.ಚಂಪಾ (ಪ್ರೊ. ಚಂದ್ರಶೇಖರ ಪಾಟೀಲ) ಅವರ ಬದುಕು ಮತ್ತು ಬರಹ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚಂಪಾ ಅವರ ಎಲ್ಲಾ ಕೃತಿಗಳನ್ನು ಪ್ರಕಟಿಸಿ ಓದುಗರಿಗೆ ದೊರೆಯುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕ್ರಮ ವಹಿಸಬೇಕು ಎಂದು ಹೇಳಿದರು.

ಚಂಪಾ ಅವರು ಎಲ್ಲೇ ಹೋದರೂ ಕನ್ನ ಡದ ಕಳಕಳಿ ಮೆರೆಯುತ್ತಿದ್ದರು. ಕನ್ನಡದ ಬಗ್ಗೆ ಅವರಿಗಿದ್ದ ಪ್ರೇಮ ಮತ್ತು ಬದ್ಧತೆಯನ್ನು ಯಾರೂ ಪ್ರಶ್ನೆ ಮಾಡುವಂತೆ ಇರಲಿಲ್ಲ. ಇಂಗ್ಲಿಷ್ ಪ್ರಾಧ್ಯಾಪಕರಾದರೂ ಕನ್ನಡದ ಬಗ್ಗೆ ಅಪಾರವಾದ ಅಭಿಮಾನ ಹೊಂದಿ ದ್ದರು. ಅವರು ಎಲ್ಲರ ಬಗ್ಗೆಯೂ ಗೌರವ ಹೊಂದಿದ್ದರು. ಆದರೆ ಯಾರ ಬಗ್ಗೆಯೂ ಅಂಧಾಭಿಮಾನ ಹೊಂದಿರಲ್ಲಿಲ್ಲ. ಅಂತಹ ವಿವೇಕವನ್ನು ಅವರು ತಮ್ಮ ಜೀವನದ ಉದ್ದಕ್ಕೂ ಪ್ರದರ್ಶಿಸಿದ್ದಾರೆ ಎಂದು ಸ್ಮರಿಸಿದರು.

ವಿಮರ್ಶಾತ್ಮಕ ಗುಣ ಹೊಂದಿದ್ದ ಚಂಪಾ ಅವರನ್ನು ವಿಶೇಷವಾಗಿ ಯುವ ಬರಹಗಾರರು ಅಧ್ಯಯನ ಮಾಡಬೇಕು. ಅವರು ತಮ್ಮ ಸಾಹಿತ್ಯದಲ್ಲಿ ಎಲ್ಲಾ ಕನ್ನಡಿಗರಿಗೂ ಅರ್ಥವಾಗುವಂತಹ ಭಾಷೆ ಬಳಕೆ ಮಾಡಿದ್ದಾರೆ. ಅವರು ಯಾರನ್ನೂ ಮೆಚ್ಚಿಸಲು ಬರೆದವರಲ್ಲ ಎಂದರು.

ಉದ್ಘಾಟನೆ ನೆರವೇರಿಸಿದ ಕನ್ನಡ ಅಭಿ ವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ ಹಾನಗಲ್ಲ ಮಾತನಾಡಿ, ಕನ್ನಡ ಪರ ಚಿಂತನೆ ಹೊಂದಿದ್ದ ಚಂಪಾ ಒಂದು ದೊಡ್ಡ ಸಾಗರವೇ ಸರಿ. ಅವರು ಹೋರಾಟ ಗಾರ, ಕವಿ ಮತ್ತು ಹಾಸ್ಯಗಾರರೂ ಆಗಿ ದ್ದರು. ಬಂಡಾಯ ಸಾಹಿತ್ಯದ ಬಗ್ಗೆ ಹೆಚ್ಚು ಒತ್ತು ನೀಡಿದ್ದರು. ಅವರ ಇಡೀ ಜೀವನವೇ ಹೋರಾಟಮಯ ಎಂದು ಹೇಳಿದರು.
ಜೆ.ಹೆಚ್.ಪಟೇಲ್ ಅವರು ಮುಖ್ಯ ಮಂತ್ರಿ ಆಗಿದ್ದಾಗ ಕನ್ನಡ ಅಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷರಾಗಿ ಸರ್ಕಾರದ ಮೂಲಕ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರ ನೇಮಕ ಮಾಡಿಸುವ ಪರಿಪಾಠಕ್ಕೆ ಚಾಲನೆ ನೀಡಿದರು. ಜೊತೆಗೆ ವಿವಿಧ ಇಲಾಖೆ ಗಳಿಗೆ ಭೇಟಿ ನೀಡಿ ಕನ್ನಡಕ್ಕೆ ಆದ್ಯತೆ ನೀಡಿ ರುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದ ಚಂಪಾ, ಇಂಗ್ಲಿಷ್ ಟೈಪಿಂಗ್ ಯಂತ್ರಗಳನ್ನು ಎತ್ತಿ ತಂದು ವಿಧಾನಸೌಧನದಲ್ಲಿ ದಾಸ್ತಾನು ಮಾಡಿ ದ್ದರು. ಅಷ್ಟರ ಮಟ್ಟಿಗೆ ಅವರಿಗೆ ಕನ್ನಡದ ಬಗ್ಗೆ ಕಳಕಳಿ ಇತ್ತು ಎಂದರು.
ಕನ್ನಡಪರ ಕೆಲಸಗಳನ್ನು ಕಟಿಬದ್ಧವಾಗಿ ಮಾಡಿದ ಅವರು, ಯಾವುದೇ ಮುಲಾ ಜಿಗೆ ಒಳಗಾಗುತ್ತಿರಲಿಲ್ಲ. ಅಲ್ಲದೆ, ಯಾವುದೇ ಪಕ್ಷಕ್ಕೆ ಅವರು ಸೀಮಿತವಾದವರಲ್ಲ. ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ಮಾಡಿದ್ದ ಅವರು ಅದಕ್ಕಾಗಿ ೨೫ ದಿನಗಳ ಕಾಲ ಜೈಲು ವಾಸ ಅನುಭವಿಸಿದ್ದರು. ಚಂಪಾ ಅವರಲ್ಲಿದ್ದ ಗಟ್ಟಿತನ, ವೈಚಾರಿಕ ಮನೋಭಾವ ನಮ್ಮ ಲ್ಲಿಯೂ ಮೂಡಬೇಕು ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ೩೦ ವರ್ಷ: ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಈ ವರ್ಷ ೩೦ ವರ್ಷಗಳು ತುಂಬುತ್ತಿದ್ದು, ಇದರ ಪ್ರಯುಕ್ತ ಸಮಾರಂಭ ಹಮ್ಮಿಕೊಳ್ಳಲು ಪ್ರಾಧಿಕಾರ ಸಜ್ಜಾಗಿದೆ. ಪ್ರಾಧಿಕಾರದ ಅಧ್ಯಕ್ಷ ರಾಗಿ ಸೇವೆ ಸಲ್ಲಿಸಿದವರಲ್ಲಿ ಕೇವಲ ನಾಲ್ವರು ಮಾತ್ರ ನಮ್ಮೊಂದಿಗೆ ಇದ್ದು, ಉಳಿ ದವರು ದಿವಂಗತರಾಗಿದ್ದಾರೆ. ಆ ಎಲ್ಲಾ ದಿವಂಗತರನ್ನು ಸಮಾರಂಭದಲ್ಲಿ ಸ್ಮರಿಸ ಲಾಗುವುದು. ಇತ್ತೀಚಿಗೆ ಪ್ರಾಧಿಕಾರದಿಂದ ಹೊರತಂದಿರುವ ಕನ್ನಡಕ್ಕೆ ಸಂಬAಧಿಸಿದ ೨೫ ಗ್ರಂಥಗಳನ್ನು ರಾಜ್ಯಪಾಲರಿಂದ ಬಿಡು ಗಡೆ ಮಾಡಿಸಲಾಗಿದೆ ಎಂದು ಡಾ. ಸಂತೋಷ ಹಾನಗಲ್ಲ ಮಾಹಿತಿ ನೀಡಿದರು.
`ಪ್ರೊ.ಚಂಪಾರವರ ಬದುಕು-ಬರಹ ಕುರಿತು ಹಿರಿಯ ಸಂಶೋಧಕ ಡಾ. ರಾಜಶೇಖರ ಜಮದಂಡಿ ಮತ್ತು ಸಹ ಪ್ರಾಧ್ಯಾಪಕಿ ಡಾ.ಷಹಸೀನಾ ಬೇಗಂ ವಿಚಾರ ಮಂಡಿಸಿದರು. ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ (ಸಿಪಿಕೆ) ಉಪಸ್ಥಿ ತರಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಸರ್ಕಾರಿ ನೌಕರರ ಸಂಘದ ಮಾಜಿ ರಾಜ್ಯಾಧ್ಯಕ್ಷ ಹೆಚ್.ಕೆ.ರಾಮು, ಸ್ಪಂದನ ಸಾಂಸ್ಕೃತಿಕ ಪರಿಷತ್ತು ಅಧ್ಯಕ್ಷ ಟಿ.ಸತೀಶ್ ಜವರೇಗೌಡ, ಕುವೆಂಪು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಸುರೇಶ್ ಜೀವನ್ಮುಖಿ ಸೇರಿದಂತೆ ಮತ್ತಿತರರು ಹಾಜರಿದ್ದರು.

Translate »