ದೇಶದ ಸಮಗ್ರತೆ, ಮೌಲ್ಯ ಎತ್ತಿಹಿಡಿಯುವ ಶಿಕ್ಷಣ ಅವಶ್ಯ
ಮೈಸೂರು

ದೇಶದ ಸಮಗ್ರತೆ, ಮೌಲ್ಯ ಎತ್ತಿಹಿಡಿಯುವ ಶಿಕ್ಷಣ ಅವಶ್ಯ

January 28, 2021

ಮೈಸೂರು,ಜ.27(ವೈಡಿಎಸ್)- ಸಮ ಗ್ರತೆ, ದೇಶದ ಅಖಂಡತೆ ಮತ್ತು ಭಾರತೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಿಕ್ಷಣ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಶ್ರೀ ಕ್ಷೇತ್ರ ಧರ್ಮ ಸ್ಥಳದ ಧರ್ಮಾಧಿಕಾರಿಗಳೂ ಆದ ಎಸ್‍ಡಿ ಎಂಐಎಂಡಿ ಅಧ್ಯಕ್ಷರಾದ ಡಾ.ಡಿ. ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್ಸಿಟ್ಯೂಟ್ ಫಾರ್ ಮ್ಯಾನೇಜ್‍ಮೆಂಟ್ (ಎಸ್‍ಡಿಎಂಐಎಂಡಿ) ಕಾಲೇಜಿನಲ್ಲಿ ವರ್ಚುವಲ್ ಮೂಲಕ ಬುಧವಾರ ಆಯೋ ಜಿಸಿದ್ದ ಸ್ನಾತಕೊತ್ತರ ಸರ್ಟಿಫಿಕೇಟ್ ಇನ್ ಮ್ಯಾನೇಜ್‍ಮೆಂಟ್ (ಪಿಜಿಸಿಎಂ)ನ ಮೊದಲ ವಾರ್ಷಿಕ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹೊಸ ಶಿಕ್ಷಣ ನೀತಿ ಹಲವು ಹೊಸ ವಿಚಾರಗಳನ್ನು ಒಳಗೊಂಡಿದ್ದು, ಈ ಅಂಶ ಗಳನ್ನು ಎಸ್‍ಡಿಎಂಐಎಂಡಿ ಸಂಸ್ಥೆ ಆರಂ ಭದ ದಿನಗಳಿಂದಲೂ ಅನುಸರಿಸಿಕೊಂಡು ಬಂದಿದೆ ಎಂದು ಶಿಕ್ಷಣದಲ್ಲಿನ ಬದ ಲಾವಣೆ ಕುರಿತು ತಿಳಿಸಿದ ಅವರು, ಎಸ್‍ಡಿ ಎಂಐಎಂಡಿ ಸಂಸ್ಥೆಯು ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವ ಜತೆಗೆ ಅವರ ಶ್ರೇಯೋ ಭಿವೃದ್ಧಿಗೂ ಶ್ರಮಿಸುತ್ತಿದೆ ಎಂದರು.

ಇದೇ ವೇಳೆ ಭಾರ್ಗವ್ ಜಿ.ಉಪಾ ಧ್ಯಾಯ ಅವರಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು. ಉಳಿದಂತೆ ಅಲ್ಮೆನ್ ಜಾವೀದ್, ಅನುಷ್, ದೀಕ್ಷಿತ್, ಸಂತೋಷ್‍ಕುಮಾರ್, ಅರುಣ್ ವರ್ಮಾ, ನವನೀತ್, ಸಾಗರ್ ಜೆವೂರ್ ಸೇರಿದಂತೆ 11 ಮಂದಿಗೆ ಸಂಸ್ಥೆಯ ಉಪ ನಿರ್ದೇಶಕಿ ಡಾ.ಹೆಚ್.ಗಾಯತ್ರಿ ಪ್ರಮಾಣಪತ್ರ ವಿತರಿಸಿದರು.  ಸಂಸ್ಥೆ ನಿರ್ದೇಶಕ ಡಾ.ಎನ್.ಆರ್. ಪರಶುರಾಮನ್, ಸಹಾಯಕ ಪ್ರಾಧ್ಯಾಪಕ ಡಾ.ಎಂ.ವಿ.ಸುನೀಲ್ ಇತರರಿದ್ದರು.

 

 

Translate »