ನಿರ್ಮಾಣವಾದ ನಾಲ್ಕೇ ತಿಂಗಳಲ್ಲಿ ಬಿರುಕು ಬಿಟ್ಟ ರಸ್ತೆ
ಕೊಡಗು

ನಿರ್ಮಾಣವಾದ ನಾಲ್ಕೇ ತಿಂಗಳಲ್ಲಿ ಬಿರುಕು ಬಿಟ್ಟ ರಸ್ತೆ

August 13, 2021

ಸೋಮವಾರಪೇಟೆ, ಆ.12- ಲೋಕೋಪಯೋಗಿ ಇಲಾ ಖೆಯ ವತಿಯಿಂದ 8 ಕೋಟಿ ರೂ. ವೆಚ್ಚದಲ್ಲಿ ನಾಲ್ಕು ತಿಂಗಳ ಹಿಂದೆಯಷ್ಟೆ ನಿರ್ಮಾಣವಾದ ಕನ್ನಳ್ಳಿಕಟ್ಟೆ, ಕುಮಾರಳ್ಳಿ, ಪುಷ್ಪಗಿರಿ ರಸ್ತೆಯ ಕುಮಾರಳ್ಳಿ ಗ್ರಾಮದ ಸಮೀಪ ರಸ್ತೆ ಬಿರುಕುಬಿಟ್ಟಿದ್ದು, ಕುಸಿಯುವ ಆತಂಕ ಎದುರಾಗಿದೆ.

ಕಾಮಗಾರಿ ನಡೆಯುವ ಸಂದರ್ಭ ಕಳಪೆ ಕಾಮಗಾರಿಯ ಆರೋಪದ ಹಿನ್ನೆಲೆಯಲ್ಲಿ ಸ್ಥಳೀಯರು ಪ್ರತಿಭಟನೆ ಮಾಡಿದ್ದರು. ಕೆಲವು ಭಾಗದಲ್ಲಿ ಮರು ಡಾಂಬರೀಕರಣ ಮಾಡಲಾಗಿತ್ತು. ಆದರೂ ಕೆಲ ಕಡೆ ಡಾಂಬರೀಕರಣ ಮಾಡದೆ ವಿಳಂಬ ಮಾಡಿ ರುವ ಕಾರಣ, ಮಳೆ ನೀರು ಒಳಸೇರಿ ರಸ್ತೆ ಕುಸಿಯುವ ಹಂತಕ್ಕೆ ತಲುಪಿದೆ ಎಂದು ಸ್ಥಳೀಯರು ಆರೋಪಿದ್ದಾರೆ.

ಮಲ್ಲಳ್ಳಿ ಜಲಪಾತಕ್ಕೆ ಈ ರಸ್ತೆಯಲ್ಲೇ ತೆರಳಬೇಕಾಗಿದ್ದು, ದಿನಂಪ್ರತಿ ಪ್ರವಾಸಿಗರ ನೂರಾರು ವಾಹನಗಳು ಈ ರಸ್ತೆಯಲ್ಲೇ ಸಂಚರಿಸುತ್ತವೆ. ರಸ್ತೆ ಬಿರುಕುಬಿಟ್ಟಿರುವ ಬಗ್ಗೆ ಪ್ರವಾಸಿಗರಿಗೆ ತಿಳಿದಿರುವುದಿಲ್ಲ. ಕೂಡಲೆ ರಸ್ತೆ ಸರಿಪಡಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕೆಳಭಾಗದಲ್ಲೇ ಹೊಳೆ ಹರಿಯುತ್ತದೆ. ಈ ಭಾಗದಲ್ಲಿ ಕಳೆದ ಒಂದು ತಿಂಗಳು ನಿರಂತರ ಮಳೆ ಸುರಿದಿದೆ. ಇನ್ನು ಹೆಚ್ಚಿನ ಮಳೆ ಸುರಿದರೆ ರಸ್ತೆ ಕುಸಿಯಲಿದೆ. ಇಂಜಿನಿಯರ್‍ಗಳು ಸ್ಥಳಪರಿಶೀಲನೆ ಮಾಡಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಶಾಂತಳ್ಳಿ ಗ್ರಾಮ ಪಂಚಾ ಯಿತಿ ಮಾಜಿ ಅಧ್ಯಕ್ಷ ಬಿ.ಪಿ.ಅನಿಲ್ ಹೇಳಿದ್ದಾರೆ.

ಲೋಕೋಪಯೋಗಿ ಇಲಾಖೆಯ ಎಇಇ ಮೋಹನ್ ಕುಮಾರ್ ಮಾತನಾಡಿ, ರಸ್ತೆ ಕುಸಿದಿರುವ ಸ್ಥಳವನ್ನು ಪರಿಶೀ ಲಿಸಲಾಗಿದೆ. ರಸ್ತೆಯ ಬದಿಯಲ್ಲಿ ತಡೆಗೋಡೆ ನಿರ್ಮಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು. ಹೆಚ್ಚಿನ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.

Translate »